ತುಮಕೂರು(ಅ.20): ಪ್ರತಿ ಬಾರಿಯೂ ಸಭೆಯಗಳಿಗೆ ಬಾರದೆ ಗೈರಾಗುತ್ತಿದ್ದ ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ಚಳಿ ಬಿಡಿಸಿದ್ದಾರೆ. ತುಮಕೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಕತ್ತೆ ಕಾಯಲಿಕ್ಕೆ ಹೋಗಿದ್ದೀರ ಅಂತಾ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಪ್ರತಿ ಬಾರಿ ಸಭೆ ನಡೆದಾಗಲೂ ತಮ್ಮ ಸಹಾಯಕರನ್ನು ಸಭೆಗೆ ಕಳಿಸಿ ಜಾರಿಕೊಳ್ಳುತ್ತಿದ್ದ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ಫುಲ್ ಕ್ಲಾಸ್ ತೆಗೆದಿದ್ದಾರೆ.

ತುಮಕೂರಿನಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕತ್ತೆ ಕಾಯಲಿಕ್ಕೆ ಹೋಗಿದ್ದೀರ ಅಂತಾ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಗಾಳಿಪಟ ತರಲು ಹೋಗಿ ಮಗನ ಕಣ್ಮುಂದೆಯೇ ತಂದೆ ಸಜೀವ ದಹನ

ಇನ್ನು ಸಭೆಗೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಗೈರು ಹಾಜರಾಗಿದ್ದು ಎದ್ದು ಕಾಣುತ್ತಿದ್ದರೆ ಸುಳ್ಳು ದಾಖಲೆಗಳ ಲೆಕ್ಕವನ್ನು ಹೇಳುತ್ತಿದ್ದ ಅಧಿಕಾರಿಗಳ ವಿರುದ್ಧ ಗರಂ ಆದರು.

ಇನ್ನು ಮನವಿ ಸಲ್ಲಿಸುವುದಕ್ಕೆ ಬಂದ ಜೆಡಿಎಸ್‌ ಮುಖಂಡರಿಗೂ ಮಾಧುಸ್ವಾಮಿ ಲೇವಡಿ ಮಾಡಿದ್ದಾರೆ. ಮಾಜಿ ಶಾಸಕ ಎಚ್‌.ನಿಂಗಪ್ಪ ತಮ್ಮದು ನಾಲ್ಕು ಮನವಿ ಇದೆ ಅಂದಾಗ. ಒಂದು ದೆಹಲಿ ಬೇಕು, ಇನ್ನೊಂದು ಏರುಪೋರ್ಟ್‌ ಬೇಕು, ಇನ್ನೂಂದು ವಿಧಾನ ಸೌಧ ನಿಮಗೆ ಬಿಟ್ಟುಕೊಡಬೇಕು ಅಂತಾ ಮಾಧುಸ್ವಾಮಿ ಹೇಳಿ ಲೇವಡಿ ಮಾಡಿದ್ದಾರೆ.

ಸಚಿವರ ಮಾತು ಕೇಳಿ ಗರಂ ಆದ ಜೆಡಿಎಸ್‌ ಮುಖಂಡರು ನಮಗೆ ನೀರು ಕೊಡಿ ಎಂದು ಕೂಗಿದರು. ಮುಖಂಡರು ಗರಂ ಅಗುತ್ತಿದ್ದಂತೆ ಎಚ್ಚೆತ್ತ ಮಾಧುಸ್ವಾಮಿ ತಕ್ಷಣ ನಾವಿಬ್ಬರು ಸ್ನೇಹಿತರು ಹಾಗಾಗಿ ನಿಂಗಪ್ಪ ಜೊತೆ ಸಲುಗೆಯಿಂದ ಮಾತನಾಡಿದೆ ಅಂತಾ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಶನೇಶ್ವರ ದೇವರ ಗುಡಿಗೆ ನುಗ್ಗಿ ಮೂರ್ತಿಗೆ ಪ್ರದಕ್ಷಿಣೆ ಹಾಕಿದ ಕಾಗೆ..!