Asianet Suvarna News Asianet Suvarna News

ವೇದಿಕೆಯಲ್ಲೇ ಜೆಡಿಎಸ್ ಶಾಸಕಗೆ ಬೆವರಿಳಿಸಿದ ಜನ

ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ ಅವರಿಗೆ ವೇದಿಕೆಯಲ್ಲೇ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.  ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ತಕ್ಷಣವೇ ಶಾಸಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. 

People takes task on Gubbi JDS MLA SR Srinivas
Author
Bengaluru, First Published Nov 4, 2019, 3:25 PM IST
  • Facebook
  • Twitter
  • Whatsapp

ತುಮಕೂರು [ನ.04]: ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಗೆ ವೇದಿಕೆಯಲ್ಲೇ ಜನರು ಬೆವರಿಳಿಸಿದ್ದಾರೆ. 

ಹಾಗಲವಾಡಿ ಗ್ರಾಮದ ಕರಿಯಮ್ಮ ದೇವಾಲಯದ ಸಮುದಾಯ ಭವನ ಉದ್ಘಾಟನೆಗೆ ಆಗಮಿಸಿದ್ದ ವೇಳೆ , ಇಲ್ಲಿನ ಕೆರೆಗೆ ನೀರು ಹರಿಸದೆ ಇರುವುದರಿಂದ ಶಾಸಕರಿಗೆ ತರಾಟೆ ತೆಗೆದುಕೊಳ್ಳಲಾಗಿದೆ. 

ವೇದಿಕೆಯಲ್ಲಿಯೇ ಹೇಮಾವತಿ ನೀರು ಹರಿಸುವ ವಿಚಾರವಾಗಿ ಮಾತನಾಡುತ್ತಿದ್ದಾಗ, ನೀರು ಹರಿಸುವ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದೀರಾ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ವೇಳೆ ಭಾಷಣಕ್ಕೂ ಅಡ್ಡಿಪಡಿಸಲಾಗಿದೆ. 

ಬಳಿಕ ವೇದಿಕೆಯಿಂದ ಶಾಸಕರು ಕೆಳಗಿಳುತ್ತಿದ್ದಂತೆ ಜನರು ತರಾಟೆಗೆ ತೆಗೆದುಕೊಂಡಿದ್ದು, ಸ್ಥಳದಲ್ಲಿ ನೂಕಾಟ-ತಳ್ಳಾಟವಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. 

ಶಾಸಕರನ್ನೇ ಗ್ರಾಮಸ್ಥರು ತಳ್ಳಾಡಿದ್ದು ಪರಿಸ್ಥಿತಿ ಗಂಭೀರವಾಗುತ್ತಿದ್ದ ಶಾಸಕರು ಸ್ಥಳದಿಂದ ತಕ್ಷಣವೇ ಹೊರಟಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುಬ್ಬಿ ಜೆಡಿಎಸ್ ಶಾಸಕರಾಗಿರುವ ಎಸ್.ಆರ್.ಶ್ರೀನಿವಾಸ್ ಅವರು ಈ ಹಿಂದೆ ಪಕ್ಷ ತೊರೆಯಲಿದ್ದಾರೆ ಎನ್ನುವ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಅಲ್ಲದೇ ಪಕ್ಷದ ವರಿಷ್ಠ ಬಗ್ಗೆ ಶ್ರೀನಿವಾಸ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. 

Follow Us:
Download App:
  • android
  • ios