ಮೆಡಿಕಲ್‌ ಸೀಟು ಕೊಡಿಸುವುದಾಗಿ ಹೇಳಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಿಂಗ್‌ ಪಿನ್‌ ರಾಬಿನ್‌ ಎಂಬಾತನನ್ನು ಹುಡುಕಲು ಐಟಿ ಅಧಿಕಾರಿಗಳು ವೇಷ ಮರೆಸಿ ತುಮಕೂರಿನಲ್ಲಿ ಸುತ್ತಿದ್ದಾರೆ. ಪೋಷಕರ ಸೋಗಿನಲ್ಲಿ ರಾಬಿನ್ ಬಗ್ಗೆ ಕೇಳಿ ಮನೆ ತೋರಿಸುವಂತೆ ಹೇಳಿದ್ದಾರೆ.

ತುಮಕೂರು(ಅ.13): ಶನಿವಾರ ಬೆಳಿಗ್ಗೆ 9 ಗಂಟೆಗೆ 12 ಜನರ ಐಟಿ ಅಧಿಕಾರಿಗಳ ತಂಡ ಸಿದ್ದಾರ್ಥ ಮೆಡಿಕಲ್‌ ಕಾಲೇಜಿನಲ್ಲಿನ ಆಡಳಿತ ಕಚೇರಿ ಬೀಗ ತೆರೆದು ಪರಿಶೀಲನೆ ನಡೆಸಿದರು. ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಕಾಲ ಪರಿಶೀಲನೆ ನೆರವೇರಿಸಿದ ಐಟಿ ಅಧಿಕಾರಿಗಳು ಸಿಬ್ಬಂದಿಯಿಂದ ವಿವರಣೆ ಪಡೆದಿದ್ದಾರೆ.

ಮೆಡಿಕಲ್‌ ಸೀಟು ಕೊಡಿಸುವುದಾಗಿ ಹೇಳಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಿಂಗ್‌ ಪಿನ್‌ ರಾಬಿನ್‌ಗಾಗಿ ಐಟಿ ಅಧಿಕಾರಿಗಳು ಶನಿವಾರ ಪೋಷಕರ ಸೋಗಿನಲ್ಲಿ ನಗರ ಸುತ್ತಿದ್ದಾರೆ. ಪೋಷಕರ ಸೋಗಿನಲ್ಲಿ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣ ಬಳಿ ರಾಬಿನ್‌ ಎಂಬಾತ ಮೆಡಿಕಲ್‌ ಸೀಟು ಕೊಡಿಸುವುದಾಗಿ ಹೇಳಿ 10 ಲಕ್ಷ ಮೋಸ ಮಾಡಿದ್ದಾನೆ. ರಾಬಿನ್‌ ಮನೆ ತೋರಿಸಿ ಎಂದು ಸಾರ್ವಜನಿಕರನ್ನು ವಿಚಾರಿಸಿದರು.

ಪರಂ ಕೊಠಡಿ ಪರಿಶೀಲನೆ

ಶುಕ್ರವಾರ ರಾತ್ರಿ ಪರಮೇಶ್ವರ್‌ ಕೊಠಡಿ ತೆರೆಯಲು ಅಲ್ಲಿನ ಸಿಬ್ಬಂದಿ ಅವಕಾಶ ನೀಡಿರಲಿಲ್ಲ. ಆದರೆ ಶನಿವಾರ ಸಿಬ್ಬಂದಿಯಿಂದ ಕೀ ಪಡೆದು ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಕಾಲ ತಪಾಸಣೆ ನಡೆಸಿದರು. ಈ ವೇಳೆ ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ..

ಕೊರಟಗೆರೆಯಲ್ಲಿ ಪ್ರತಿಭಟನೆ

ಮಾಜಿ ಡಿಸಿ ಡಾ.ಜಿ.ಪರಮೇಶ್ವರ್‌ ಮಾಲಿಕತ್ವದ ಶಿಕ್ಷಣ ಸಂಸ್ಥೆ ಮೇಲೆ ಐಟಿ ದಾಳಿ ಖಂಡಿಸಿ ಕೊರಟಗೆರೆಯಲ್ಲಿ ನೂರಾರು ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ರಕ್ಷಣೆಗಾಗಿ ಉಳಿಸಿಕೊಂಡಿದ್ದ ಮೊಬೈಲ್‌ ರೆಕಾರ್ಡ್‌ ರಮೇಶ್‌ಗೆ ಉರುಳಾಯ್ತಾ?

ಕೇಂದ್ರ ಸರ್ಕಾರ ಮತ್ತು ಐಟಿ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕೊರಟಗೆರೆಯ ಸರ್ಕಾರಿ ಬಸ್‌ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ರ‍್ಯಾಲಿ ನಡೆಸಿದ್ದಾರೆ.

ಪರಂ ಬರಲಿಲ್ಲ

ಐಟಿ ದಾಳಿ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಶಾಸಕ ಪರಮೇಶ್ವರ್‌ ಅವರು ಖುದ್ದಾಗಿ ತುಮಕೂರಿನ ಮೆಡಿಕಲ್‌ ಕಾಲೇಜಿಗೆ ಆಗಮಿಸುವ ನಿರೀಕ್ಷೆ ಇತ್ತು. ಆದರೆ ಅವರ ಆಪ್ತ ರಮೇಶ್‌ ಆತ್ಮಹತ್ಯೆ ಹಿನ್ನೆಲೆಯಲ್ಲಿ ಅವರು ಬರಲಿಲ್ಲ.

ಮಾಜಿ ಡಿಸಿಎಂ ಆಪ್ತ ರಮೇಶ್ ಆತ್ಮಹತ್ಯೆ ಹಿನ್ನೆಲೆ IT ಅಧಿಕಾರಿಗಳಿಗೆ ಬಿಗಿ ಭದ್ರತೆ