Assembly Election: ಮಧುಗಿರಿಯಿಂದ ಸ್ಪರ್ಧಿಸಲು ಸಿದ್ದರಾಮಯ್ಯಗೆ ಆಹ್ವಾನ- ಮಾಜಿ ಶಾಸಕ ಕೆ.ಎನ್‌. ರಾಜಣ್ಣ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಡೀ ರಾಜ್ಯವೇ  ಪೂರ್ಣ ಪ್ರಮಾಣದಲ್ಲಿ ಸುರಕ್ಷಿತವಾಗಿದ್ದು, ಮಧುಗಿರಿಯಿಂದಲೂ ಸ್ಪರ್ಧಿಸವಂತೆ ಆಹ್ವಾನ ನೀಡಲಾಗಿದೆ ಎಂದು ಮಾಜಿ ಶಾಸಕ ಕೆ.ಎನ್‌ ರಾಜಣ್ಣ ಹೇಳಿದ್ದಾರೆ.

Invitation to Siddaramaiah to contest from Madhugiri- Former MLA K.N. Rajanna sat

ತುಮಕೂರು (ನ.15) : ಕೋಲಾರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಸಿದ್ದರಾಮಯ್ಯ ಅವರಿಗೆ ಮಧುಗಿರಿಯಿಂದಲೂ ಸ್ಪರ್ಧಿಸವಂತೆ ಆಹ್ವಾನ ನೀಡಲಾಗಿದೆ. ಸಿದ್ದರಾಮಯ್ಯ ಅವರಿಗೆ ಇಡೀ ರಾಜ್ಯವೇ  ಪೂರ್ಣ ಪ್ರಮಾಣದಲ್ಲಿ ಸುರಕ್ಷಿತವಾಗಿದ್ದು, 224 ಕ್ಷೇತ್ರದಲ್ಲಿ ಎಲ್ಲಿ ಸ್ಪರ್ಧೆ ಮಾಡಿದರೂ ಗೆದ್ದು ಬರುವ ಸಾಮರ್ಥ್ಯ ಇದೆ ಎಂದು ಮಾಜಿ ಶಾಸಕ ಕೆ.ಎನ್‌ ರಾಜಣ್ಣ ಹೇಳಿದ್ದಾರೆ. ಎಲ್ಲರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಗೆಲ್ಲುತ್ತೇವೆ ಎಂಬ ಭರವಸೆಯಿಂದ ಮಾತ್ರ. ಆದರೆ ಅಂತಿಮ ನಿರ್ಧಾರ ಮತದಾರರದ್ದಾಗಿರುತ್ತದೆ ಎಂದು ತಿಳಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ರಾಜಕೀಯದಲ್ಲಿ ಸದಾಕಾಲ ಸಂಘರ್ಷ (Clash) ಜೀವಂತಿಕೆಯಿಂದ ಇರುತ್ತದೆ. ಅದರಲ್ಲಿಯೂ ಮುಖ್ಯವಾಗಿ ಅಧಿಕಾರ ಇಲ್ಲದವರು ಹಾಗೂ ಇರುವವರ ನಡುವೆ ಸಂಘರ್ಷ ಮುಂದುವರೆಯುತ್ತದೆ. ಕಾಂಗ್ರೆಸ್ (Congress) ನಿಂದ ಮುಖ್ಯಮಂತ್ರಿ ಆಗುವ ಸ್ಪರ್ಧೆಯಲ್ಲಿ ಹಲವು ಮುಖಂಡರು ಇದ್ದಾರೆ. ಇದರಿಂದ ಪಕ್ಷಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಎಲ್ಲರೂ ತಮ್ಮ ಸಾಮರ್ಥ್ಯ (Capability) ಪ್ರದರ್ಶನ  ಮಾಡುವ ಉದ್ದೇಶದಿಂದ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುತ್ತಾರೆ. ಈ ಬೆಳವಣಿಗೆ ಪಕ್ಷಕ್ಕೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಅನುಕೂಲ ಆಗಲಿದೆ ಎಂದರು.


Assembly Election: ಕೋಲಾರದಲ್ಲಿಂದು ಸಿದ್ದು ಕಣ 'ಪರೀಕ್ಷೆ: ನಾಡಿಮಿಡಿತ ಅರಿಯಲು ಕ್ಷೇತ್ರ ಪರ್ಯಟನೆ

ಕೇಸರಿಕರಣ ವಿವೇಕಾನಂದರಿಗೆ ಅವಮಾನ: ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮುನ್ನೆಲೆಗೆ ಬಂದಿರುವ ಸರ್ಕಾರಿ ಶಾಲೆಗಳಿಗೆ ಕೇಸರಿಕರಣ (Saffronization) ಮಾಡುವುದು ವಿವೇಕಾನಂದವರಿಗೆ (Vivekananda) ಮಾಡುವ ಅವಮಾನ ಆಗಿದೆ. ಸಂತರ ಪ್ರತೀಕವಾದ ಬಣ್ಣವನ್ನು ಶಾಲೆಗಳಿಗೆ ಬಳಿಯುತ್ತಿರುವುದು ಸೂಕ್ತವಲ್ಲ. ಚಡ್ಡಿಯಿಂದ ಅಧಿಕಾರಕ್ಕೆ ಬಂದಿರುವ ಶಿಕ್ಷಣ ಸಚಿವ ನಾಗೇಶ್ (Minister Nagesh) ಬೇರೆ ಉನ್ನತ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಆದರೆ, ಇದರಿಂದ ದೇಶಭಕ್ತರಾದ ವಿವೇಕಾನಂದರಿಗೆ ಅವಮಾನ (Shame) ಮಾಡಲಾಗುತ್ತಿದೆ. ಮಕ್ಕಳಲ್ಲಿ ಆರಂಭದಿಂದಲೇ ಜಾತಿ ಸೋಂಕು (Cast Infection) ತಗಲುವಂತೆ ಮಾಡಲಾಗುತ್ತಿದೆ. ಶಾಲೆಗಳ ಕೇಸರೀಕರಣ ದೇಶಕ್ಕೆ ಮಾರಕವಾಗಲಿದ್ದು, ಮಕ್ಕಳಲ್ಲಿ ಜಾತಿ ವ್ಯವಸ್ಥೆ ಮೂಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಾಲಿನ ದರ 10 ರೂ. ಹೆಚ್ಚಿಸಲಿ: ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಳ (Milk Rate hike) ಮಾಡಿರುವುದನ್ನು ನಾನು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ. ಆದರೆ, ಹಾಲಿನ ದರವನ್ನು ಕೇವಲ 5 ರೂ. ಮಾತ್ರ ಹೆಚ್ಚಳ ಮಾಡದೇ, 10 ರೂ.ವರೆಗೆ ಹೆಚ್ಚಳ ಮಾಡಬೇಕು. ಬೆಲೆ ಹೆಚ್ಚಳದಿಂದ ಬರುವಂತಹ ಹಣವನ್ನು ಒಕ್ಕೂಟದ ಕಚೇರಿ ಅಭಿವೃದ್ಧಿ ಹಾಗೂ ಅಧಿಕಾರಿಗಳಿಗೆ ಸಂಬಳ‌ ಕೊಡುವುದಕ್ಕೆ ಬಳಸದೆ, ಎಲ್ಲ ಹಣ ರೈತರಿಗೆ ಸಿಗುವಂತೆ ಮಾಡಬೇಕು. ಹಾಲು ಮಾರಾಟದ ದರ (Selling Amount) ಎಷ್ಟು ಹೆಚ್ಚಳ ಮಾಡಲಾಗುತ್ತದೆಯೋ ಅದೆಲ್ಲವೂ ರೈತರಿಗೆ ಸೇರಬೇಕು ಎನ್ನುವುದು ನನ್ನ ಒತ್ತಾಯವಾಗಿದೆ. ಹಾಲಿನ ದರ ಹೆಚ್ಚಳದಿಂದ ದನ ಕರುಗಳ (Cattle)ಬೆಲೆಯೂ ಹೆಚ್ಚಳ ಆಗಲಿದ್ದು, ಇದರಿಂದ ರೈತರಿಗೆ ಅನುಕೂಲ ಆಗುತ್ತದೆ ಎಂದು ಹೇಳಿದರು. 

ಮತ್ತೆ ಬಾದಾಮಿಯಿಂದಲೇ ಸ್ಪರ್ಧೆ ಮಾಡದಿದ್ರೆ ಸಿದ್ದರಾಮಯ್ಯ ಮನೆ ಮುಂದೆ ಆತ್ಮಹತ್ಯೆ: ಸಿದ್ದು ಅಭಿಮಾನಿಗಳು

ನಿಂಗಪ್ಪ ಅವರಿಗೆ ಪಕ್ಷಕ್ಕೆ ಸ್ವಾಗತ: ಮಾಜಿ ಶಾಸಕ ಹೆಚ್. ನಿಂಗಪ್ಪ ಜೆಡಿಎಸ್ (JDS) ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ನೂರಕ್ಕೆ ನೂರು ಕಾಂಗ್ರೆಸ್ ಗೆ ಸೇರ್ಪಡೆ ಆಗುವ ವಿಶ್ವಾಸವಿದ್ದು, ಅವರನ್ನು ಸ್ವಾಗತಿಸುತ್ತೇನೆ. ಕಾರಣ ನಿಂಗಪ್ಪ ಮತ್ತು ನಾನು ಉತ್ತಮ ಸ್ನೇಹಿತರಾಗಿದ್ದೇವೆ. ಇನ್ನು ಮಧುಗಿರಿ (Madhugiri) ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲು ಹಲವರು ಅರ್ಜಿ (Application) ಹಾಕಿದ್ದಾರೆ. ನಾನು ಕೂಡ ಅರ್ಜಿ ಹಾಕುತ್ತಿದ್ದೇನೆ. ಪಕ್ಷದಿಂದ ಸ್ಪರ್ಧೆ ಮಾಡಲು ಯಾರು ಬೇಕಾದರೂ ಅರ್ಜಿ ಹಾಕಬಹುದು. ಆಕಾಶ ನೋಡುವುದಕ್ಕೆ ನೂಕುನುಗ್ಗಲು ಆಗುವುದಿಲ್ಲ ಎಂದು ಮಾಜಿ ಶಾಸಕ ರಾಜಣ್ಣ ಹೇಳಿದರು.

Latest Videos
Follow Us:
Download App:
  • android
  • ios