Asianet Suvarna News Asianet Suvarna News

ಮತದಾರರಿಗೆ ಹಂಚಲು ತಂದಿದ್ದ ಮದ್ಯ ನಾಶ

ಮತದಾರರಿಗೆ ಹಂಚಲು ತಂದಿದ್ದ ಮದ್ಯವನ್ನು ಅಬಕಾರಿ ಅಧಿಕಾರಿಗಳು ನಾಶ ಮಾಡಿದ್ದಾರೆ. ಸುಮಾರು 1.75 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು. ಇದನ್ನು ಪಾವ​ಗಡದಲ್ಲಿ ತಾಲೂಕು ಕಚೇರಿ ಬಳಿ ನಾಶಮಾಡಲಾಯಿತು.

Excise officers seized illegal liquor
Author
Bangalore, First Published Oct 17, 2019, 10:27 AM IST

ತುಮಕೂರು(ಅ.17): ಅಬಕಾರಿ ಅಧಿಕಾರಿಗಳು ಲೋಕಸಭೆ ಹಾಗೂ ವಿಧಾನಸಭೆ ಚುನಾ​ವಣೆ ಜಪ್ತಿ ಮಾಡಿದ್ದ ಸುಮಾರು 1.75 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ಬುಧವಾರ ಪಾವ​ಗಡದಲ್ಲಿ ತಾಲೂಕು ಕಚೇರಿ ಬಳಿ ನಾಶಮಾಡಲಾಯಿತು.

ಚುನಾವಣೆಯಲ್ಲಿ ಮತ​ದಾ​ರ​ರಿಗೆ ಹಂಚಲು ತಂದಿದ್ದ ಅಕ್ರಮವಾಗಿ ಸಂಗ್ರಹಿಸಿದ್ದ ಹಾಗೂ ಮಾರಾಟ ಮಾಡಲು ತಂದಿದ್ದ ಮದ್ಯವನ್ನು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ ವಶಪಡಿಸಿಕೊಂಡಿದ್ದರು.

ರಸ್ತೆ ಮಧ್ಯೆ ಶಾಲಾ ಬಸ್‌ ನಿಲ್ಲಿಸಿ ಕುಡಿಯಲು ಕುಳಿತ ಚಾಲಕ

ಈ ಹಿನ್ನೆಲೆಯಲ್ಲಿ ಜಪ್ತಿ ಮಾಡಿದ್ದ ಅಕ್ರಮ ಮದ್ಯ​ವನ್ನು ರಾಜ್ಯ ಅಬ​ಕಾರಿ ಇಲಾಖೆ ಉಪ​ಯು​ಕ್ತರ ಆದೇಶ ಮೇರೆಗೆ ಸ್ಟಾಕ್‌ ಮಾಡಿದ್ದ 487,980 ಲೀ​ಟರ್‌ ಬಿಯಾ​ರ್‌, 10,550​ ಲೀ​ಟರ್‌ ಸೇಂದಿ, 99,660​ ಲೀ​ಟರ್‌ ಇತರೆ ವೈನ್‌ ಸೇರಿ ಸುಮಾರು .1.75 ಲ​ಕ್ಷ ಮೌಲ್ಯದ ಮದ್ಯದ ಬಾಟ​ಲ್‌​ಗ​ಳನ್ನು ಸಾವ​ರ್‍ಜನಿ​ಕರ ಸಮ್ಮು​ಖ​ದ​ಲ್ಲಿಯೆ ನಾಶ ಮಾಡಲಾ​ಯಿ​ತು.

ಮೈಸೂರು: ವಾಲ್ಮೀಕಿ ಜಯಂತಿಯಲ್ಲಿ ಕಲ್ಲು ತೂರಾಟ, 32 ಜನರಿಗೆ ನ್ಯಾಯಾಂಗ ಬಂಧನ

ಅಬ​ಕಾರಿ ಇಲಾಖೆ ವಲಯ ವಿಭಾ​ಗದ ಸಿಪಿಐ ಎಚ್‌.​ಕೆ.ನಾಗ​ರಾ​ಜ್‌, ​ಸ​ಹಾ​ಯಕ ಅಬ​ಕಾರಿ ನಿರೀ​ಕ್ಷಕ ಶಿವ​ಬ​ಸ​ಯ್ಯ, ಎಸ್‌​ಬಿ​ಸಿ​ಎಲ್‌ ​ಡಿಪೋ ಚಳ್ಳ​ಕರೆ ವ್ಯವ​ಸ್ಥಾ​ಪಕ ಬಸ​ವ​ರಾ​ಜ್‌, ಪೃಥ್ವಿ,​ ಕೆ.ರಾಜು ಸೇರಿ​ದಂತೆ ಸ್ಥಳೀಯ ​ಕಂದಾಯ ಇಲಾಖೆ ಹಾಗೂ ಪುರ​ಸಭೆ ಅಧಿ​ಕಾ​ರಿ​ಗ​ಳಿ​ದ್ದ​ರು.

‘ಸೇವಾ ಸರ್ವೀಸ್' ರೈಲು ಸೇವೆ ಶೀಘ್ರ ಆರಂಭ

Follow Us:
Download App:
  • android
  • ios