ತುಮಕೂರು : ಎಣ್ಣೆ ಹೊಡೆದು ಶಾಲೆಗೆ ಬಂದ ಶಿಕ್ಷಕ ಅಮಾನತು
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೊಸಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕ ನಾಗಿ ಕೆಲಸ ನಿರ್ವಹಿಸುತ್ತಿದ್ದ ಕಾಂತರಾಜು ಎಂಬಾತ ಮದ್ಯ ಸೇವನೆ ಮಾಡಿ ಶಾಲೆಗೆ ಬಂದಿದ್ದು ಆತನನನ್ನು ಅಮಾನತು ಮಾಡಲಾಗಿದೆ.
ವರದಿ : ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ ತುಮಕೂರು
ತುಮಕೂರು(ಮಾ.18) : ಮದ್ಯ ಸೇವನೆ ಮಾಡಿ ಶಾಲೆಗೆ ಬಂದ ಶಿಕ್ಷಕನನ್ನು ಕುಣಿಗಲ್ (kunigal) ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ತುಮಕೂರು (Tumakuru) ಜಿಲ್ಲೆ ಕುಣಿಗಲ್ ತಾಲೂಕಿನ ಹೊಸಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ ಕಾಂತರಾಜು ಅಮಾನತ್ತುಗೊಂಡ ಶಿಕ್ಷಕ.
ನಿನ್ನೆ ಕಾಂತರಾಜು (Kantaraju) ಮದ್ಯ ಸೇವನೆ (Alcohol consumption) ಮಾಡಿ ಶಾಲೆ ಬಂದಿರುವ ವಿಚಾರ ಗ್ರಾಮಸ್ಥರಿಗೆ ಹಾಗೂ ಮಕ್ಕಳ ಪೋಷಕರ ಗಮನಕ್ಕೆ ಬಂದಿದೆ. ಕೂಡಲೇ ಗ್ರಾಮಸ್ಥರು ಬಿಇಒ ತಿಮ್ಮರಾಜು ಅವರಿಗೆ ಪೋನ್ ಮೂಲಕ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ತಂಡದೊಂದಿಗೆ ಶಾಲೆಗೆ (School) ಭೇಟಿ ನೀಡಿದ ಬಿಇಒ ಶಿಕ್ಷಕ (Teacher) ಕಾಂತರಾಜುನನ್ನು ಮಾತನಾಡಿಸಿದ್ದಾರೆ. ಈ ವೇಳೆ ಕಾಂತರಾಜು ಮದ್ಯದ ನಶೆಯಲ್ಲಿದ್ದು, ಬಿಇಒಗೆ ಹಾರಿಕರ ಉತ್ತರ ನೀಡಿದ್ದಾನೆ. ಮೇಲ್ನೋಟಕ್ಕೆ ಕಾಂತರಾಜು ಮದ್ಯಸೇವನೆ ಮಾಡಿರುವುದು ಕಂಡು ಬಂದಿದೆ ಕೂಡಲೇ ಕಾಂತರಾಜುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮದ್ಯ ಸೇವನೆ ಮಾಡಿರುವುದು ದೃಢವಾಗಿದೆ.
ಬಳಿಕ 1996ರ ಕರ್ನಾಟಕ ನಾಗರೀಕ ಸೇವಾ ಸನ್ನಡತೆ ಅಧಿನಿಯಮ 3(1)(2)(3)ರ ನಿಯಮಗಳನ್ನು ಉಲ್ಲಂಘಟನೆ ಮಾಡಿರುವುದು ಸಾಬೀತಾದ ಪರಿಣಾಮ ಅಮಾನತ್ತು ಮಾಡಲಾಗಿದೆ. ಅಮೃತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
BHAGAVAD GITA: ಗುಜರಾತ್ ಮಾದರಿಯಲ್ಲಿ ಭಗವದ್ಗೀತೆ ಪಠ್ಯ ಜಾರಿಗೆ ಪ್ರಯತ್ನ ನಡೆದಿಲ್ಲ, ಬಿಸಿ ನಾಗೇಶ್ ಸ್ಪಷ್ಟನೆ