ತುಮಕೂರು(ನ.06): ಪೋನ್‌ ಕದ್ದಾಲಿಕೆ ಎಲ್ಲಾ ಸಿಎಂಗಳ ಕಾಲದಲ್ಲಿ ನಡೆದಿದೆ. ಯಾರು ಕೂಡ ಲಿಖಿತವಾಗಿ ಆದೇಶ ಮಾಡಲ್ಲಾ. ಮೌಖಿಕವಾಗಿ ಹೇಳಿರುತ್ತಾರೆ ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಶಾಸಕ, ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ಹೇಳಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಎಲ್ಲ ಸಿಎಂಗಳ ಕಾಲದಲ್ಲೂ ಫೋನ್‌ ಕದ್ದಾಲಿಕೆ ಆಗಿದೆ ಎಂದಿದ್ದಾರೆ. ಪೋನ್‌ ಕದ್ದಾಲಿಕೆ ವಿಷಯಕ್ಕೆ ಸಂಬಂದಿಸಿದಂತೆ ಪ್ರತಿಕ್ರಿಯಿಸಿ,  ಕೆಎನ್‌ಆರ್‌, ಮಾಜಿ ಪ್ರಧಾನಿಗಳ ಕುಟುಂಬ ಅನ್ನೋ ಕಾರಣಕ್ಕೆ ಇವ್ರ ತಪ್ಪುಗಳು ಮುಚ್ಚಿಹೋಗಬಹುದು. ಪೋನ್‌ ಕದ್ದಾಲಿಕೆ ಎಲ್ಲಾ ಸಿಎಂಗಳ ಕಾಲದಲ್ಲಿ ನಡೆದಿದೆ. ಯಾರು ಕೂಡ ಲಿಖಿತವಾಗಿ ಆದೇಶ ಮಾಡಲ್ಲಾ. ಮೌಖಿಕವಾಗಿ ಹೇಳಿರುತ್ತಾರೆ. ಕೊನೆಗೆ ಅಧಿಕಾರಿಗಳು ಇದಕ್ಕೆ ಬಲಿಯಾಗ್ತಾರೆ ಎಂದು ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.

ಎಚ್‌ಡಿಕೆ ವಚನಭ್ರಷ್ಟ:

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಚನಭ್ರಷ್ಟರು ಅನ್ನೋದು ಈಗಾಗಲೇ ಸಾಬೀತಾಗಿದೆ. ಅದು ಗೊತ್ತಿರೋ ವಿಷಯ ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಶಾಸಕ, ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ಹೇಳಿದ್ದಾರೆ.

ಪೊಲೀಸ್ ನೌಕರಿ ತ್ಯಜಿಸಿ ಅತ್ಯುತ್ತಮ ರೈತನಾದ : ಬಿಗ್ ಬಾಸ್ ನಿಂದಲೂ ಆಹ್ವಾನ ಪಡೆದ

ಅವರು ತುಮಕೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಚ್‌ಡಿಕೆ ಯಾವುದೇ ಭರವಸೆ ಕೊಟ್ಟರೂ ಅದು ನಂಬಿಕೆಗೆ ಅರ್ಹವಲ್ಲಾ. ಅವರದ್ದು ಅವಕಾಶವಾದಿ ರಾಜಕಾರಣ. ಹಿಂದೆ ಬಿಜೆಪಿ ಜೊತೆ 20-20 ಆಡಳಿತದಲ್ಲಿ ಮಾತಿಗೆ ತಪ್ಪಿ ವಚನಭ್ರಷ್ಟರು ಅಂತಾ ಬ್ರಾಂಡ್‌ ಆಗಿದ್ದಾರೆ. ಕಳೆದ ಚುನಾವಣೆಯಲ್ಲೂ ಬಿಜೆಪಿ ಜೊತೆ ಯಾವ ರೀತಿ ಒಳ ಒಪ್ಪಂದ ಆಗಿತ್ತು ಅಂತಾ ಆ ಎರಡು ಪಕ್ಷಗಳಿಗೆ ಮಾತ್ರ ಗೊತ್ತು ಎಂದಿದ್ದಾರೆ.

‘ಡಿಕೆಶಿ ವಿರುದ್ಧ ಇಡಿಗೆ ಅರ್ಜಿ ಬರೆದಿದ್ದೆ ದೇವೇಗೌಡರು’