* ಭಾರತದ ಪಾಲಿಗೆ ಮತ್ತೊಂದು ಚಿನ್ನ ಗೆದ್ದು ಕೊಟ್ಟ ಕೃಷ್ಣಾ ನಾಗರ್* ಎಸ್‌ಎಚ್ 6 ಫೈನಲ್ ಪಂದ್ಯದಲ್ಲಿ ಚಿನ್ನ ಬೇಟೆಯಾಡಿದ ನಾಗರ್* ಪ್ಯಾರಾಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 19 ನೇ ಪದಕ

ಟೋಕಿಯೋ(ಸೆ.-05): ಟೋಕಿಯೊ ಪ್ಯಾರಾಲಿಂಪಿಕ್ಸ್ 2020ರ ಕೊನೆಯ ದಿನ ಭಾರತದ ಪದಕಗಳ ಬೇಟೆ ಮುಂದುವರೆದಿದೆ. ಒಂದೆಡೆ ಕನ್ನಡಿಗ, ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪ್ಯಾರಾ-ಬ್ಯಾಡ್ಮಿಂಟನ್ ಆಟಗಾರ ಸುಹಾಸ್ ಯತಿರಾಜ್ ಪುರುಷರ ಸಿಂಗಲ್ಸ್ ಎಸ್‌ಎಲ್ 4 ಈವೆಂಟ್ ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದರೆ, ಇತ್ತ ಪುರುಷರ ಸಿಂಗಲ್ಸ್ ಎಸ್‌ಎಚ್ 6 ಫೈನಲ್ ಪಂದ್ಯದಲ್ಲಿ ಹಾಂಗ್ ಕಾಂಗ್‌ನ ಚು ಮನ್ ಕೈರನ್ನು ಭಾರತೀಯ ಶೆಟ್ಲರ್ ಕೃಷ್ಣಾ ನಾಗರ್ 2-1 ರ ಅಂತರದಲ್ಲಿ ಸೋಲಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಭಾರತಕ್ಕೆ 19 ನೇ ಪದಕವನ್ನು ತಂದುಕೊಟ್ಟಿದ್ದಾರೆ. ಭಾರತದ ಪಾಳಿಗೆ ಈವರೆಗೆ ಒಟ್ಟು ಐದು ಚಿನ್ನದ ಪದಕಗಳು ಸೇರಿವೆ.

ಇತಿಹಾಸ ನಿರ್ಮಿಸಿದ ಕನ್ನಡಿಗ ಸುಹಾಸ್: ಪ್ಯಾರಾಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ IAS ಅಧಿಕಾರಿ!

ಇನ್ನು ಚಿನ್ನ ಗೆದ್ದ ಕೃಷ್ಣಾ ನಾಗರ್‌ರನ್ನು ಪಿಎಂ ಮೋದಿ ಅಭಿನಂದಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ- ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ಬ್ಯಾಡ್ಮಿಂಟನ್ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವುದನ್ನು ನೋಡಿ ಸಂತೋಷವಾಗಿದೆ. ಕೃಷ್ಣಾ ನಾಗರ್‌ ಅತ್ಯುತ್ತಮ ಪ್ರದರ್ಶನ ಪ್ರತಿಯೊಬ್ಬ ಭಾರತೀಯನಿಗೂ ಖುಷಿ ಕೊಟ್ಟಿದೆ. ಚಿನ್ನದ ಪದಕ ಗೆದ್ದ ಅವರಿಗೆ ಅಭಿನಂದನೆಗಳು. ಅವರ ಮುಂದಿನ ಬದುಕಿಗೆ ಶುಭ ಕೋರುತ್ತೇನೆ ಎಂದಿದ್ದಾರೆ.

Scroll to load tweet…

ಈ ಪಂದ್ಯದ ಮೊದಲ ಸುತ್ತಿನಲ್ಲಿ ಇಬ್ಬರೂ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆಟದ ಕೊನೆಯಲ್ಲಿ, ಚು ಮಾನ್ ಕೈ ಸಾಧಾರಣ 11-10 ಮುನ್ನಡೆ ಸಾಧಿಸಿದ್ದರು. ಆದರೆ 15-17ರಲ್ಲಿ ರ ಬಳಿಕ ಕೃಷ್ಣಾ ನಾಗರ್ ಒಂದೇ ಬಾರಿ 6 ಅಂಕ ಗಳಿಸಿ, ಕೇವಲ 14 ನಿಮಿಷಗಳಲ್ಲಿ 21-17ರ ಅಂತರ ಸಾಧಿಸಿ ಮೊದಲ ಗೇಮ್ ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲಿ ಚು ಮಾನ್ ಕೈ ಮತ್ತೆ 11-7ರ ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ಮನ್ ಕೈ ಅದ್ಭುತ ಪ್ರದರ್ಶನದೊಂದಿಗೆ ತನ್ನ ಆಟ ಮುಂದುವರಿಸಿದರು. ಅಲ್ಲದೇ ಎರಡನೇ ಸುತ್ತನ್ನು 14 ನಿಮಿಷಗಳಲ್ಲಿ 21-16ರ ಅಂತರದಲ್ಲಿ ಗೆದ್ದು ಪಂದ್ಯವನ್ನು ಅಂತಿಮ ಸುತ್ತಿಗೆ ಕೊಂಡೊಯ್ದರು.

ಟೋಕಿಯೋ ಪ್ಯಾರಾಲಿಂಪಿಕ್ಸ್‌: ಬ್ಯಾಡ್ಮಿಂಟನ್‌ನಲ್ಲಿ ಪ್ರಮೋದ್ ಭಗತ್‌ಗೆ ಚಿನ್ನ, ಮನೋಜ್‌ಗೆ ಕಂಚು

ಮೂರನೇ ಮತ್ತು ನಿರ್ಣಾಯಕ ಆಟದಲ್ಲಿ, ಕೃಷ್ಣಾ ನಾಗರ್ ಅದ್ಭುತ ಪ್ರದರ್ಶನ ನೀಡಿ 7-2 ರ ಅಂತರ ಸಾಧಿಸಿದರು. ಈ ಮುನ್ನಡೆಯನ್ನು ಹಾಗೆಯೇ ಉಳಿಸಿಕೊಂಡ ನಾಗರ್ ಹಾಫ್‌ ಟೈಂವರೆಗೆ 11-7 ಮುನ್ನಡೆ ಕಾಪಾಡಿಕೊಂಡರು. ಇದಾದ ಬಳಿಕ ಮತ್ತೆ ಅತ್ಯುತ್ತಮ ಪ್ರದರ್ಶನ ತೋರಿದ ಚು ​​ಮಾನ್ ಕೈ ಅಂಕಗಳನ್ನು ಗಳಿಸಿ 14-14ರಲ್ಲಿ ಸಮಗೊಳಿಸಿದರು. ಆದರೆ ಕೃಷ್ಣಾ ನಾಗರ್ ಮೂರನೇ ಆಟವನ್ನು 21-17ರ ಅಂತರದಲ್ಲಿ 15 ನಿಮಿಷಗಳಲ್ಲಿ ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡರು.