Asianet Suvarna News Asianet Suvarna News

ಸೋಲು ನಂಬಲಾಗುತ್ತಿಲ್ಲ; ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಮೇರಿ ಕೋಮ್ ಪ್ರತಿಕ್ರಿಯೆ!

  • ಟೋಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಮೇರಿ ಕೋಮ್ ಹೋರಾಟ ಅಂತ್ಯ
  • ಸೋಲಿನ ಬಳಿಕ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮೇರಿ ಮಾತು
  • ಸೋಲಿಗೆ ಆಘಾತ ವ್ಯಕ್ತಪಡಿಸಿದ ಮೇರಿ ಕೋಮ್
Tokyo Olympics Mary Kom expressed disbelief on result of her boxing pre quarter final exit ckm
Author
Bengaluru, First Published Jul 29, 2021, 8:45 PM IST
  • Facebook
  • Twitter
  • Whatsapp

ಟೋಕಿಯೋ(ಜು.29): ಭಾರತದ ಹೆಮ್ಮೆಯ ಮಹಿಳಾ ಬಾಕ್ಸರ್, 6 ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಟೋಕಿಯೋ ಒಲಿಂಪಿಕ್ಸ್ ಹೋರಾಟ ಗೊಂದಲಗಳಿಂದ ಅಂತ್ಯವಾಗಿದೆ. ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೇರಿ ಕೋಮ್ 2-3 ಅಂತರದಲ್ಲಿ ಕೊಲಂಬಿಯಾದ ಇಂಗ್ರಿತ್ ವೆಲೆನ್ಶಿಯಾ ವಿರುದ್ಧ ಸೋಲು ಕಂಡಿದ್ದಾರೆ. ಆದರೆ ಇದು ಸರಿಯಾದ ತೀರ್ಪಲ್ಲ ಎಂದು ಮೇರಿ ಕೋಮ್ ಹೇಳಿದ್ದಾರೆ.

ಟೋಕಿಯೋ 2020: ಮೇರಿ ಕೋಮ್‌ ಹೋರಾಟ ಅಂತ್ಯ..!

ಪ್ರಿಕ್ವಾರ್ಟರ್ ಫೈನಲ್ ಪಂದ್ಯದ ಬಳಿಕ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಮೇರಿ ಕೋಮ್ ಪ್ರತಿಕ್ರಿಯೆ ನೀಡಿದ್ದಾರೆ. ಟೋಕಿಯೋದಿಂದ ದೂರವಾಣಿ ಮೂಲಕ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಕೋಮ್  ಸೋಲಿಗೆ ಆಘಾತ ವ್ಯಕ್ತಪಡಿಸಿದ್ದಾರೆ. ಪಂದ್ಯದ ಬಳಿಕ ನೇರವಾಗಿ ಡೋಪ್ ಟೆಸ್ಟ್ ನೀಡಲು ಹೋಗಿದ್ದೆ. ಈ ವೇಳೆ ಕೋಚ್ ಪಂದ್ಯದ ತೀರ್ಪು ನಮ್ಮ ಪರವಾಗಿಲ್ಲ ಎಂದು ಹೇಳಲು ಪ್ರಯತ್ನಿಸಿದ್ದಾರೆ. ಆದರೆ ನಾನು ಈ ಮಾತನ್ನು ಸ್ವೀಕರಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ ಎಂದು ಕೋಮ್ ಸುವರ್ಣನ್ಯೂಸ್‌ಗೆ ಹೇಳಿದ್ದಾರೆ.

ಪಂದ್ಯದಲ್ಲಿ ಉತ್ತಮ ಹೋರಾಟ ನೀಡಿದ್ದೇನೆ. ಸರಿಯಾದ ತೀರ್ಪು ಬಂದರೆ ಗೆಲುವು ನನ್ನದೇ ಆಗಿತ್ತು. ಆದರೆ ತೀರ್ಪು ಫಲಿತಾಂತ ಬೇರೆಯದ್ದೇ ಆಗಿತ್ತು. ಕೋಚ್ ಮಾತನ್ನು ನಂಬಲಿಲ್ಲ. ಈ ವೇಳೆ ಕೋಚ್, ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ತೋರಿಸಿದ್ದಾರೆ.  ರಿಜಿಜು ಟ್ವೀಟ್ ನೋಡಿ ನಾನು ಪಂದ್ಯ ಸೋತಿದ್ದೇನೆ ಎಂದು ಮನದಟ್ಟಾಯಿತು ಎಂದು ಮೇರಿ ಹೇಳಿದ್ದಾರೆ.

ಟೋಕಿಯೋ 2020: ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಬಾಕ್ಸರ್ ಸತೀಶ್ ಕುಮಾರ್‌

ಒಲಿಂಪಿಕ್ಸ್‌ಗಾಗಿ ಕಠಿಣ ಅಭ್ಯಾಸ ಮಾಡಿದ್ದೇನೆ, ಸತತ ಪರಿಶ್ರಮ ಪಟ್ಟಿದ್ದೇನೆ.  ಕಠಿಣ ತರಬೇತಿ ಪಡೆದಿದ್ದೇನೆ. ಆದರೆ ಇಷ್ಟೆಲ್ಲಾ ಹೋರಾಟ ಮಾಡಿ ಭಾರತಕ್ಕಾಗಿ ಪದಕ ಗೆಲ್ಲಲು ಸಾಧ್ಯವಾಗಿಲ್ಲ ಅನ್ನೋ ನೋವು ಕಾಡುತ್ತಿದೆ. ನನ್ನ ಪ್ರದರ್ಶನ ಮೇಲೆ ನನಗೆ ವಿಶ್ವಾಸವಿದೆ. ನಾನು ಉತ್ತಮ ಹೋರಾಟವನ್ನೇ ನೀಡಿದ್ದೇನೆ. ಸಂಪೂರ್ಣ ಪಂದ್ಯದ ಮೇಲೆ ಹಿಡಿತ ಸಾಧಿಸಿದ ನನ್ನಿಂದ ಗೆಲುವನ್ನು ಕಸಿದುಕೊಳ್ಳಲಾಗಿದೆ ಎಂದು ಮೇರಿ ಕೋಮ್ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಹೇಳಿದ್ದಾರೆ.

ತೀರ್ಪಿನ ವಿರುದ್ಧ ಪ್ರತಿಭಟಿಸಲು ಸಾಧ್ಯವಿಲ್ಲ. ಕಾರಣ ಇದು ಒಲಿಂಪಿಕ್ಸ್ ನಿಯಮದ ವಿರುದ್ಧವಾಗಿದೆ. ಇತರ ಸ್ಪರ್ಧೆಗಳಲ್ಲಿ ಈ ರೀತಿಯ ಅನುಭವವಾಗಿದೆ. ಆದರೆ ಒಲಿಂಪಿಕ್ಸ್‌ನಲ್ಲಿ ಇದೇ ಮೊದಲು ಎಂದು ಮೇರಿ ಕೋಮ್ ಹೇಳಿದ್ದಾರೆ.

Follow Us:
Download App:
  • android
  • ios