ಟೋಕಿಯೋ 2020: ಫೈನಲ್‌ನಲ್ಲಿ 23ನೇ ಸ್ಥಾನ ಪಡೆದ ಕರ್ನಾಟಕದ ಈಕ್ವೆಸ್ಟ್ರಿಯನ್ ಫೌಹಾದ್
* ಟೋಕಿಯೋ ಒಲಿಂಪಿಕ್ಸ್‌ನ ಈಕ್ವೆಸ್ಟ್ರಿಯನ್‌ನಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದ ಫೌಹಾದ್ ಮಿರ್ಜಾ
* ಫೈನಲ್‌ನಲ್ಲಿ 23ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ರಾಜ್ಯದ ಈಕ್ವೆಸ್ಟ್ರಿಯನ್ ಪಟು
* ಫೌಹಾದ್ ಸಾಧನೆಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆ
ಟೋಕಿಯೋ(ಆ.03): 2 ದಶಕಗಳ ಬಳಿಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಈಕ್ವೆಸ್ಟ್ರಿಯನ್ ಪಟು ಎನ್ನುವ ದಾಖಲೆ ಬರೆದಿದ್ದ ಕರ್ನಾಟಕದ ಫೌಹಾದ್ ಮಿರ್ಜಾ, ವೈಯಕ್ತಿಕ ಈವೆಂಟಿಂಗ್ ವಿಭಾಗದ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಎನ್ನುವ ದಾಖಲೆ ಸಹ ನಿರ್ಮಿಸಿದ್ದಾರೆ.
ಸೋಮವಾರ ಅರ್ಹತಾ ಸುತ್ತಿನಲ್ಲಿ 25ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ ಫೌಹಾದ್, ಫೈನಲ್‌ನಲ್ಲಿ 23ನೇ ಸ್ಥಾನ ಪಡೆದರು. 29 ವರ್ಷದ ಬೆಂಗಳೂರು ಮೂಲದ ಫೌಹಾದ್, ಡ್ರೆಸ್ಸೇಜ್, ಕ್ರಾಸ್ ಕಂಟ್ರಿ ಹಾಗೂ ಜಂಪಿಂಗ್ ಮೂರೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಫೌಹಾದ್ ಸಾಧನೆಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮನೆಗೆ ಬರೋದು ಮತ್ತೆ ಲೇಟ್ ಆಗಲಿದೆ: ಕೋಚ್ ಮರಿನೆ ಟ್ವೀಟ್ ವೈರಲ್
200 ಮೀಟರ್ ಓಟ: ದ್ಯುತಿ ಚಾಂದ್ ಔಟ್
ಟೋಕಿಯೋ: ಮಹಿಳೆಯರ 200 ಮೀ. ಓಟದ ಅರ್ಹತಾ ಸುತ್ತಿನಲ್ಲೇ ಭಾರತದ ದ್ಯುತಿ ಚಾಂದ್ ಹೊರಬಿದ್ದರು. 4ನೇ ಹೀಟ್ಸ್‌ನಲ್ಲಿ ಕಣಕ್ಕಿಳಿದಿದ್ದ ದ್ಯುತಿ 7ನೇ ಹಾಗೂ ಕೊನೆಯ ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು. 100 ಮೀ. ಓಟದಲ್ಲೂ ದ್ಯುತಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.