* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾ ಮಣಿಸಿ ಇತಿಹಾಸ ನಿರ್ಮಿಸಿದ ಭಾರತೀಯ ಮಹಿಳಾ ಹಾಕಿ ತಂಡ* ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಸೆಮೀಸ್‌ಗೇರಿದ ರಾಣಿ ರಾಂಪಾಲ್ ಪಡೆ* ಮಹಿಳಾ ತಂಡದ ಕೋಚ್ ಸೋರ್ಡ್‌ ಮರಿನೆ ಟ್ವೀಟ್‌ ವೈರಲ್ 

ಟೋಕಿಯೋ(ಆ.03): ಭಾರತ ಮಹಿಳಾ ತಂಡದ ಅಸಾಮಾನ್ಯ ಸಾಧನೆಯ ಹಿಂದೆ ಪ್ರಧಾನ ಕೋಚ್‌ ಸೋರ್ಡ್‌ ಮರಿನೆ ಅವರ ಶ್ರಮ ಬಹಳಷ್ಟಿದೆ. ಭಾರತ ಪಂದ್ಯ ಗೆಲ್ಲುತ್ತಿದ್ದಂತೆ ಮರಿನೆ ಭಾವುಕರಾದರು. ಅವರ ಆನಂದಭಾಷ್ಪ ಸುರಿಸುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. 

ಭಾರತ ತಂಡ ನಿಜ ಜೀವನದಲ್ಲಿ ‘ಚಕ್‌ ದೇ ಇಂಡಿಯಾ’ ಸಿನಿಮಾದ ಕ್ಷಣಗಳನ್ನು ಕಟ್ಟಿಕೊಟ್ಟಿತು. ಪಂದ್ಯ ಗೆದ್ದು ಕ್ರೀಡಾಗ್ರಾಮಕ್ಕೆ ಹಿಂದಿರುಗುವಾಗ ಬಸ್‌ನಲ್ಲಿ ಸೆಲ್ಫಿಯೊಂದನ್ನು ಕ್ಲಿಕ್ಕಿಸಿದ ಮರಿನೆ ಅದನ್ನು ಟ್ವೀಟ್‌ ಮಾಡಿ, ‘ನಾನು ಮನೆಗೆ ಬರುವುದು ಮತ್ತೆ ವಿಳಂಬವಾಗಲಿದೆ’ ಎಂದು ತಮ್ಮ ಕುಟುಂಬಕ್ಕೆ ತಿಳಿಸಿದ್ದರು. 

Scroll to load tweet…

ಈ ಟ್ವೀಟ್‌ಗೆ ಚಕ್‌ ದೇ ಇಂಡಿಯಾ ಸಿನಿಮಾದಲ್ಲಿ ಕೋಚ್‌ ಆಗಿದ್ದ ಬಾಲಿವುಡ್‌ ನಟ ಶಾರುಖ್‌ ಖಾನ್‌ ‘ತಡವಾದರೂ ಪರವಾಗಿಲ್ಲ. ಚಿನ್ನದ ಪದಕ ತನ್ನಿ. ಮಾಜಿ ಕೋಚ್‌ ಕಬೀರ್‌ ಖಾನ್‌ರಿಂದ ಶುಭ ಹಾರೈಕೆ’ ಎಂದು ಬರೆದಿದ್ದರು. ಶಾರುಖ್‌ಗೆ ಧನ್ಯವಾದ ತಿಳಿಸಿದ ಮರಿನೆ, ತಾವು ನಿಜವಾದ ಕೋಚ್‌ ಎಂದು ತಮಾಷೆ ಮಾಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್: ಚಕ್‌ ದೇ ಇಂಡಿಯಾ ಸಿನಿಮಾ ಕ್ಷಣವನ್ನು ನೆನಪಿಸಿದ ಕೋಚ್ ಮರಿನೆ..!

Scroll to load tweet…

ಇದೇ ವೇಳೆ ಭಾರತ ತಂಡಕ್ಕೆ ಸಾಮಾಜಿಕ ತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ತಂಡ ಪದಕ ಗೆಲ್ಲಲಿ ಎಂದು ಲಕ್ಷಾಂತರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.