Asianet Suvarna News Asianet Suvarna News

ಕಾಂಡೋಮ್‌ ಹೀಗೂ ಬಳಸಬಹುದು; ಚಿನ್ನದ ಪದಕ ವಿಜೇತ ಒಲಿಂಪಿಕ್ಸ್ ಪಟುವಿನ ವಿಡಿಯೋ ವೈರಲ್!

  • ಒಲಿಂಪಿಕ್ಸ್ ಗ್ರಾಮದಲ್ಲಿ ನೀಡಿದ ಕಾಂಡೋಮ್ ಬಳಸಿ ಪದಕ ಗೆದ್ದ ಕಯಾಕಿಂಗ್ ಪಟು
  • ಆಸ್ಟ್ರೇಲಿಯಾದ ಜೆಸ್ಸಿಕಾ ಫಾಕ್ಸ್ ಐಡಿಯಾಗೆ ಮನಸೋತ ಆಯೋಜಕರು
  • ಟೊಕಿಯೋ ಒಲಿಂಪಿಕ್ಸ್ ಪದಕ ವಿಜೇತ ಜೆಸ್ಸಿಕಾ ಫಾಕ್ಸ್ ವಿಡಿಯೋ ವೈರಲ್
Tokyo Olympics How kayakers use condoms to repair boat Australian gold medalist video goes viral ckm
Author
Bengaluru, First Published Jul 30, 2021, 9:37 PM IST

ಟೊಕಿಯೋ(ಜು.30): ಒಲಿಂಪಿಕ್ಸ್ ಗ್ರಾಮದಲ್ಲಿ ಕ್ರೀಡಾಪಟುಗಳಿಗೆ ಕಾಂಡೋಮ್ ನೀಡಲಾಗಿದೆ. ಈ ಕಾಂಡೋಮ್‌ನ್ನು ಹೀಗೂ ಬಳಸಬಹುದು ಎಂದು ಪದಕ ವಿಜೇತ ಆಸ್ಟ್ರೇಲಿಯಾ ಕಯಾಕಿಂಗ್ ಪಟು ಜೆಸ್ಸಿಕಾ ಫಾಕ್ಸ್ ತೋರಿಸಿಕೊಟ್ಟಿದ್ದಾರೆ. ಹೌದು, ತನ್ನ ಹಾನಿಗೊಳಗಾದ ಕಯಾಕಿಂಗ್ ಬೋಟ್ ಸರಿಮಾಡಲು ಕಾಂಡೋಮ್ ಬಳಸಿ ಪದಕ ಗೆದ್ದ ಅಪರೂಪದ ಘಟನೆ ನಡೆದಿದೆ.

ಟೋಕಿಯೋ ಒಲಿಂಪಿಕ್ಸ್‌ 2020 - ಪದಕ ಗೆಲವ ಹಾದಿಯಲ್ಲಿ ಪಿ.ವಿ. ಸಿಂಧು !

ಜೆಸ್ಸಿಕಾ ಫಾಕ್ಸ್ ಟೋಕಿಯೋ ಒಲಿಂಪಿಕ್ಸ್ ಮಹಿಳಾ ಸಿ 1 ಕ್ಯಾನೋಯಿಂಗ್ ಸ್ಲಾಲೋಮ್ ಕಯಾಕಿಂಗ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇನ್ನು ಮಹಿಳೆಯರ ಕೆ-1 ಫೈನಲ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 

ಜೆಸ್ಸಿಕಾ ಫಾಕ್ಸ್ ಮಹಿಳೆಯರ ಕೆ-1 ಫೈನಲ್‌ನ ಪಂದ್ಯಕ್ಕೆ ಕಯಾಕಿಂಗ್ ಬೋಟ್ ಹಿಡಿದು ಅಖಾಡಕ್ಕಿಳಿದಾಗ ಬೋಟ್ ಮುಂಭಾಗದಲ್ಲಿ ನಜ್ಜು ಗುಜ್ಜಾಗಿರುವುದು ಗಮನಿಸಿದ್ದಾರೆ. ತಕ್ಷಣ ರಿಪೇರಿ ಮಾಡಿ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಇತ್ತು. ಹೀಗೆ ತೂತು ಬಿದ್ದ ಮುಂಭಾಗವನ್ನು ಕೆಲ ಅಂಟು ಮೆತ್ತಿ ಬಳಿಕ ಕಾಂಡೋಮ್ ಹಾಕಿದ್ದಾರೆ. 

 

ಟೋಕಿಯೋ 2020: ಐರ್ಲೆಂಡ್ ಮಣಿಸಿದ ಮಹಿಳಾ ಹಾಕಿ ತಂಡ, ಕ್ವಾರ್ಟರ್‌ಫೈನಲ್ ಕನಸು ಜೀವಂತ..!

ಇದೇ ಬೋಟ್‌ ಮೂಲಕ ಸಾಗಿ ಕೆ-1 ಫೈನಲ್‌ನಲ್ಲಿ ಜೆಸ್ಸಿಕಾ ಕಂಚಿನ ಪದಕ ಗೆದ್ದಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬೋಟ್ ರಿಪೇರಿಗೆ ಕಾಂಡೋಮ್ ಬಳಿಸಿರುವುದನ್ನು ಬಹಿರಂಗ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಂಡೋಮ್‌ನ್ನು  ಈ ರೀತಿ ಬಳಕೆ ಮಾಡಬಹುದು ಎಂದು ಯಾರು ಊಹಿಸಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

Follow Us:
Download App:
  • android
  • ios