* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ರೆಫ್ರೀ ವಿರುದ್ದ ಅಸಮಾಧಾನ ಹೊರಹಾಕಿದ ಫ್ರಾನ್ಸ್‌ ಬಾಕ್ಸರ್* ರೆಫ್ರಿ ತೀರ್ಮಾನ ಖಂಡಿಸಿ ಬಾಕ್ಸಿಂಗ್‌ ರಿಂಗ್‌ನಲ್ಲೇ ಕುಳಿತು ಪ್ರತಿಭಟನೆ* ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಫ್ರಾನ್ಸ್‌ ಬಾಕ್ಸರ್ ಪ್ರತಿಭಟನೆ

ಟೋಕಿಯೋ(ಆ.02): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಬಾಕ್ಸಿಂಗ್‌ ಸ್ಪರ್ಧೆಯ ಕ್ವಾರ್ಟರ್‌ ಫೈನಲ್‌ನಲ್ಲಿ ಅನರ್ಹಗೊಂಡ ಬಳಿಕ ಫ್ರಾನ್ಸ್‌ನ ಹೆವಿವೇಟ್‌ ಬಾಕ್ಸರ್‌ ಮೌರದ್‌ ಅಲೀವ್‌ ತಮಗೆ ಅನ್ಯಾಯವಾಗಿದೆ ಎಂದು ರಿಂಗ್‌ನಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

ಭಾನುವಾರ ಬ್ರಿಟನ್‌ನ ಫ್ರೆಜರ್‌ ಕ್ಲಾರ್ಕ್ ವಿರುದ್ಧ ನಡೆದ ಪಂದ್ಯದಲ್ಲಿ 2 ಸುತ್ತು ಪೂರ್ಣಗೊಳ್ಳಲು 4 ಸೆಕೆಂಡ್‌ ಬಾಕಿ ಇದ್ದಾಗ, ಉದ್ದೇಶಪೂರ್ವಕವಾಗಿಯೇ ಎದುರಾಳಿಗೆ ತಲೆಯಿಂದ ಪಂಚ್‌ ಮಾಡಿದ ಎಂಬ ಕಾರಣಕ್ಕಾಗಿ ಅಲೀವ್‌ನನ್ನು ಪಂದ್ಯದ ರೆಫ್ರಿ ಅನರ್ಹಗೊಳಿಸಿದರು. ಇದರಿಂದ ಫ್ರೆಜರ್‌ ಕ್ಲಾರ್ಕ್ ಸೆಮೀಸ್‌ಗೆ ಅರ್ಹತೆ ಪಡೆದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಖಚಿತ ಪಡಿಸಿಕೊಂಡರು.

Scroll to load tweet…

ಟೋಕಿಯೋ 2020: ಒಲಿಂಪಿಕ್ಸ್‌ ರೆಫ್ರಿಗಳ ವಿರುದ್ಧ ಮೇರಿ ಕೋಮ್‌ ಆಕ್ರೋಶ!

ಆದರೆ, ಮೊದಲ ಸುತ್ತಿನಲ್ಲಿ ಜಯ ಸಾಧಿಸಿದ್ದ ಅಲೀವ್‌, ರೆಫ್ರಿ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಿಂಗ್‌ನಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಈ ನಿಜಕ್ಕೂ ನನಗಾದ ಅನ್ಯಾಯ. ನಾನು ಈ ಪಂದ್ಯವನ್ನು ಗೆಲ್ಲುತ್ತಿದ್ದೆ. ನಾನು ಈ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕಾಗಿ ಸಾಕಷ್ಟು ಅಭ್ಯಾಸ ನಡೆಸಿದ್ದೆ. ಈ ರೀತಿ ನನಗೆ ಅನ್ಯಾಯವಾಗುತ್ತದೆ ಅಂದುಕೊಂಡಿರಲಿಲ್ಲ ಎಂದು ಮೌರದ್‌ ಅಲೀವ್‌ ತಮ್ಮ ಬೇಸರ ಹೊರಹಾಕಿದ್ದಾರೆ.

Scroll to load tweet…

ಕೆಲ ದಿನಗಳ ಹಿಂದಷ್ಟೇ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಂಡ ಭಾರತದ ಬಾಕ್ಸರ್ ಮೇರಿ ಕೋಮ್‌ ಸಹ ರೆಫರಿ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.