ಟೋಕಿಯೋ ಒಲಿಂಪಿಕ್ಸ್‌: ಸೆಮೀಸ್‌ಗೆ ಲಗ್ಗೆಯಿಟ್ಟ ಜೋಕೋವಿಚ್!

* ಟೋಕಿಯೋ ಒಲಿಂಪಿಕ್ಸ್‌ ಪುರುಷರ ಟೆನಿಸ್‌ನಲ್ಲಿ ಸೆಮೀಸ್‌ಗೆ ಲಗ್ಗೆಯಿಟ್ಟ ನೊವಾಕ್‌ ಜೋಕೋವಿಚ್‌

* ಗೋಲ್ಡನ್‌ ಸ್ಲಾಂ ಗೆಲ್ಲುವತ್ತ ದಿಟ್ಟ ಹೆಜ್ಜೆಯಿಟ್ಟ ಸರ್ಬಿಯಾದ ಟೆನಿಸಿಗ

* ಜಪಾನ್ ಟೆನಿಸಿಗ ನಿಶಿಕೋರಿ ಎದುರು ಭರ್ಜರಿ ಗೆಲುವು ಸಾಧಿಸಿದ ಜೋಕೋವಿಚ್

Tokyo Olympics 2020 Novak Djokovic enter Semi Final close to Golden Slam kvn

ಟೋಕಿಯೋ(ಜು.30): ವಿಶ್ವ ನಂ.1 ಟೆನಿಸಿಗ ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಒಲಿಂಪಿಕ್ಸ್‌ ಪುರುಷರ ಸಿಂಗಲ್ಸ್‌ ಟೆನಿಸ್‌ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಜೋಕೋ ಚಿನ್ನದ ಪದಕ ಗೆದ್ದು ‘ಗೋಲ್ಡನ್‌ ಸ್ಲಾಂ’ ಸಾಧನೆ ಮಾಡುವ ಗುರಿ ಹೊಂದಿದ್ದಾರೆ. 

‘ಗೋಲ್ಡನ್‌ ಸ್ಲಾಂ’ ಎಂದರೇ ಒಂದೇ ವರ್ಷದಲ್ಲಿ ನಾಲ್ಕೂ ಗ್ರ್ಯಾನ್‌ ಸ್ಲಾಂಗಳ ಜೊತೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸುವುದು. ಜೋಕೋ ಈ ವರ್ಷ 3 ಗ್ರ್ಯಾನ್‌ ಸ್ಲಾಂ ಗೆದ್ದಿದ್ದು, ಒಲಿಂಪಿಕ್ಸ್‌ ಹಾಗೂ ಯುಎಸ್‌ ಓಪನ್‌ನಲ್ಲಿ ಚಾಂಪಿಯನ್‌ ಆಗುವ ಕನಸು ಕಾಣುತ್ತಿದ್ದಾರೆ. ಈ ವರೆಗೂ ಜರ್ಮನಿಯ ಸ್ಟೆಫಿ ಗ್ರಾಫ್‌ ಮಾತ್ರ ಗೋಲ್ಡನ್‌ ಸ್ಲಾಂ ಸಾಧನೆ ಮಾಡಿದ್ದಾರೆ. 1988ರಲ್ಲಿ ಅವರು 4 ಗ್ರ್ಯಾನ್‌ ಸ್ಲಾಂ, ಒಲಿಂಪಿಕ್ಸ್‌ ಚಿನ್ನ ಗೆದ್ದಿದ್ದರು.

ಟೋಕಿಯೋ ಒಲಿಂಪಿಕ್ಸ್‌: ಚಿನ್ನದ ಬೇಟೆಗೆ ರೆಡಿಯಾದ ನೊವಾಕ್ ಜೋಕೋವಿಚ್‌

ಆತಿಥೇಯ ಜಪಾನಿನ ಕೀ ನಿಶಿಕೋರಿ ಎದರು 6-2, 6-0 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಂತಿಮ ನಾಲ್ಕರಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. 70 ನಿಮಿಷ ನಡೆದ ಪಂದ್ಯದಲ್ಲಿ ವಿಶ್ವದ ನಂ.1 ಟೆನಿಸ್ ಆಟಗಾರನೆದುರು ನಿಶಿಕೋರಿ ಆಟ ನಡೆಯಲಿಲ್ಲ.
 

Latest Videos
Follow Us:
Download App:
  • android
  • ios