* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜಪಾನಿನ 13 ವರ್ಷದ ಕ್ರೀಡಾಪಟುಗೆ ಒಲಿದ ಚಿನ್ನದ ಪದಕ* ಮಹಿಳೆಯರ ಸ್ಟ್ರೀಟ್‌ ಸ್ಕೇಟ್‌ ಬೋರ್ಡಿಂಗ್ ಸ್ಪರ್ಧೆಯಲ್ಲಿ ಜಪಾನ್‌ನ ಮೊಮಿಜಿ ನಿಶಿಯಾಗೆ ಒಲಿದ ಚಿನ್ನ* ಕುವೈಟ್‌ನ 57 ವರ್ಷದ ಅಥ್ಲೀಟ್‌ಗೂ ಒಲಿದ ಒಲಿಂಪಿಕ್ಸ್ ಪದಕ

ಟೋಕಿಯೋ(ಜು.27): ಕ್ರೀಡೆಯಲ್ಲಿ ವಯಸ್ಸಿನ ಹಂಗಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಜಪಾನ್‌ನ 13 ವರ್ಷದ ಹಾಗೂ ಕುವೈಟ್‌ನ 57 ವರ್ಷದ ಅಥ್ಲೀಟ್‌ಗಳು ಪದಕ ಗೆದ್ದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. 

ಮಹಿಳೆಯರ ಸ್ಟ್ರೀಟ್‌ ಸ್ಕೇಟ್‌ ಬೋರ್ಡಿಂಗ್ ಸ್ಪರ್ಧೆಯಲ್ಲಿ ಜಪಾನ್‌ನ ಮೊಮಿಜಿ ನಿಶಿಯಾ ಚಿನ್ನದ ಪದಕ ಜಯಿಸಿದರು. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಜಪಾನಿನ ಅತಿ ಕಿರಿಯ ಕ್ರೀಡಾಪಟು ಎನ್ನುವ ದಾಖಲೆ ಬರೆದರು. ಇನ್ನು ಇದೇ ವೇಳೆ ಪುರುಷರ ಸ್ಕೀಟ್‌ ಶೂಟಿಂಗ್‌ನಲ್ಲಿ ಕುವೈಟ್‌ನ ಅಬ್ದುಲ್ಲಾ ಆಲ್‌-ರಶೀದಿ ಕಂಚಿನ ಪದಕ ಜಯಿಸಿ ಸಂಭ್ರಮಿಸಿದರು.

Scroll to load tweet…

ಈಜು: ಸೆಮೀಸ್‌ಗೇರಲು ಸಾಜನ್‌ ಪ್ರಕಾಶ್‌ ವಿಫಲ: ಪುರುಷರ 200 ಮೀ. ಬಟರ್‌ ಫ್ಲೈ ವಿಭಾಗದ ಈಜು ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ಸಾಜನ್‌ ಪ್ರಕಾಶ್‌ ಹೀಟ್ಸ್‌ನಲ್ಲಿ 1 ನಿಮಿಷ 57.22 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಒಟ್ಟಾರೆ ಅವರು 24ನೇ ಸ್ಥಾನ ಪಡೆದು ಸೆಮಿಫೈನಲ್‌ಗೇರಲು ವಿಫಲರಾದರು. ಅಗ್ರ 16 ಈಜುಗಾರರು ಮಾತ್ರ ಸೆಮೀಸ್‌ಗೆ ಪ್ರವೇಶಿಸಿದರು.

ಪ್ರಧಾನಿ ಮೋದಿ ಸ್ಪೂರ್ತಿಯ ಮಾತಿಗೆ ಭಾವನಾತ್ಮಕ ಪ್ರತಿಕ್ರಿಯಿ ಕೊಟ್ಟ ಭವಾನಿ ದೇವಿ

ಬಾಕ್ಸಿಂಗ್‌: ಮೊದಲ ಸುತ್ತಲ್ಲೇ ಆಶಿಶ್‌ ಔಟ್‌: ಪುರುಷರ 75 ಕೆ.ಜಿ. ವಿಭಾಗದ ಬಾಕ್ಸಿಂಗ್‌ನಲ್ಲಿ ಭಾರತದ ಆಶಿಶ್‌ ಕುಮಾರ್‌ ಮೊದಲ ಸುತ್ತಿನಲ್ಲೇ ಸೋಲು ಕಂಡು ಹೊರಬಿದ್ದರು. ಚೀನಾದ ಎರಿಬೀಕ್‌ ಟ್ಯುಯೊಹೆಟಾಗೆ 0-5ರ ಅಂತರದಲ್ಲಿ ಶರಣಾದರು.

ಸದ್ಯ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಏಕೈಕ ಪದಕ ಜಯಿಸಿದೆ. 49 ಕೆ.ಜಿ. ವಿಭಾಗದ ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ ಮಣಿಪುರದ ಸೈಕೋಮ್ ಮಿರಾಬಾಯಿ ಚಾನು ಒಟ್ಟು 202 ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.