Asianet Suvarna News Asianet Suvarna News

‌ಟೋಕಿಯೋ 2020 : ರೋಯಿಂಗ್‌ನಲ್ಲಿ ಸೆಮೀಸ್‌ ಪ್ರವೇಶಿಸಿದ ಭಾರತ

* ರೋಯಿಂಗ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಭಾರತ ತಂಡ

* ರಿಪಿಕೇಜ್‌ ಸುತ್ತಿನಲ್ಲಿ ಅರ್ಜುನ್‌ ಲಾಲ್‌-ಅರವಿಂದ್‌ ಸಿಂಗ್‌ ಜೋಡಿ 3ನೇ ಸ್ಥಾನ

* ಜುಲೈ 27ರಂದು ನಡೆಯಲಿದೆ ಸೆಮಿಫೈನಲ್‌ ಪಂದ್ಯ

Tokyo Olympics 2020 Indian Rowing Team qualify for semi finals kvn
Author
Tokyo, First Published Jul 26, 2021, 8:44 AM IST
  • Facebook
  • Twitter
  • Whatsapp

ಟೋಕಿಯೋ(ಜು.26): ಪುರುಷರ ಲೈಟ್‌ವೇಟ್‌ ಡಬಲ್‌ ಸ್ಕಲ್ಸ್‌ ರೋಯಿಂಗ್‌ ಸ್ಪರ್ಧೆಯ ರಿಪಿಕೇಜ್‌ ಸುತ್ತಿನಲ್ಲಿ ಅರ್ಜುನ್‌ ಲಾಲ್‌-ಅರವಿಂದ್‌ ಸಿಂಗ್‌ ಜೋಡಿ 3ನೇ ಸ್ಥಾನ ಪಡೆದು ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಸೆಮೀಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಸುತ್ತಿಗೆ ಪ್ರವೇಶ ಸಿಗಲಿದೆ. ಸೆಮೀಸ್‌ ಜು.27ಕ್ಕೆ ನಡೆಯಲಿದೆ.

ಈ ರೇಸ್‌ನಲ್ಲಿ ಪೋಲೆಂಡ್ ಜೋಡಿ 6:43:44 ನಿಮಿಷಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರೆ, ಸ್ಪೇನ್‌ 6:45:71 ನಿಮಿಷಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆಯಿತು. ಇನ್ನು ಭಾರತದ ಅರ್ಜುನ್‌ ಲಾಲ್‌-ಅರವಿಂದ್‌ ಸಿಂಗ್‌ ಜೋಡಿ 6:51:36 ನಿಮಿಷಗಳಲ್ಲಿ ಗುರಿ ತಲುಪಿ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಟೆನಿಸ್‌: ಮೊದಲ ಸುತ್ತಿನಲ್ಲಿ ಗೆದ್ದ 3ನೇ ಭಾರತೀಯ ನಗಾಲ್‌!

ಟೋಕಿಯೋ: ಟೆನಿಸ್‌ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಸುಮಿತ್‌ ನಗಾಲ್‌, ಉಜ್ಬೇಕಿಸ್ತಾನದ ಡೆನಿಸ್‌ ಇಸ್ಟೋಮಿನ್‌ ವಿರುದ್ಧ 6-4,6-7,6-4 ಸೆಟ್‌ಗಳಲ್ಲಿ ಜಯಗಳಿಸಿ 2ನೇ ಸುತ್ತಿಗೇರಿದರು. ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್‌ 2ನೇ ಸುತ್ತಿಗೇರಿದ ಭಾರತದ 3ನೇ ಆಟಗಾರ ನಗಾಲ್‌. 

ಟೋಕಿಯೋ 2020: ತಾಂತ್ರಿಕ ಸಮಸ್ಯೆಯಿಂದ ಶೂಟರ್‌ ಮನು ಭಾಕರ್‌ಗೆ ಆಘಾತ

ಈ ಮೊದಲು 1988ರ ಸೋಲ್‌ ಒಲಿಂಪಿಕ್ಸ್‌ನಲ್ಲಿ ಝೀಶಾನ್‌ ಅಲಿ, 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಲಿಯಾಂಡರ್‌ ಪೇಸ್‌ ಈ ಸಾಧನೆ ಮಾಡಿದ್ದರು. ಸೋಮ್‌ದೇವ್‌ ದೇವವರ್ಮನ್‌, ವಿಷ್ಣು ವರ್ಧನ್‌ 2012 ಲಂಡನ್‌ ಒಲಿಂಪಿಕ್ಸ್‌ನ ಮೊದಲ ಸುತ್ತಿನಲ್ಲೇ ಸೋತಿದ್ದರು. 2ನೇ ಸುತ್ತಿನಲ್ಲಿ ಸುಮಿತ್‌ಗೆ ವಿಶ್ವ ನಂ.2 ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಎದುರಾಗಲಿದ್ದಾರೆ.
 

Follow Us:
Download App:
  • android
  • ios