ಟೋಕಿಯೋ 2020: ಬಲಿಷ್ಠ ಪಂಚ್‌ಗಳ ಮೂಲಕ ಶುಭಾರಂಭ ಮಾಡಿದ ಬಾಕ್ಸರ್ ಮೇರಿ ಕೋಮ್‌

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಶುಭಾರಂಭ ಮಾಡಿದ ಬಾಕ್ಸರ್ ಮೇರಿ ಕೋಮ್

* ಡೊಮಿನಿಕ್‌ ರಿಪಬ್ಲಿಕ್‌ ಆಟಗಾರ್ತಿ ಎದುರು ಸಂಪೂರ್ಣ ಪ್ರಾಬಲ್ಯ ಮೆರೆದ ಮೇರಿ

* ಭಾರತ ಪರ ಪದಕ ಗೆಲ್ಲಬಲ್ಲ ನೆಚ್ಚಿನ ಆಟಗಾರ್ತಿ ಮೇರಿ ಕೋಮ್

Tokyo Olympics 2020 Indian Boxer Mary Kom wins opening bout to advance to next round kvn

ಟೋಕಿಯೋ(ಜು.25): ಭಾರತದ ಅನುಭವಿ ಬಾಕ್ಸರ್, 2012ರ ಲಂಡನ್ ಒಲಿಂಪಿಕ್ಸ್‌ ಪದಕ ವಿಜೇತೆ ಮೇರಿ ಕೋಮ್‌ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಮೊದಲ ಪಂದ್ಯದಲ್ಲಿ ಡೊಮಿನಿಕ್‌ ರಿಪಬ್ಲಿಕ್‌ನ ಮಿಗುಲಿನ ಹೆರ್ನಾಂಡೀಜ್‌ ಎದುರು 4-1 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪ್ರೀಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಆರು ಬಾರಿ ವಿಶ್ವ ಚಾಂಪಿಯನ್‌ ಆಗಿರುವ ಮೇರಿ ಕೋಮ್‌ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮತ್ತೊಂದು ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ಮೇರಿ ಕೋಮ್ 3-2 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ಇನ್ನು ಎರಡನೇ ಸುತ್ತಿನ ಹೋರಾಟದಲ್ಲೂ ಮೇರಿ ಮತ್ತೆ 3-2ರ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ಮೂರನೇ ಸುತ್ತಿನ ಕದನದಲ್ಲೂ ಬಲಿಷ್ಠ ಪಂಚ್‌ಗಳ ಮೂಲಕ ಆಕ್ರಮಣಕಾರಿ ರಣತಂತ್ರ ರೂಪಿಸಿಕೊಂಡ ಮೇರಿ ಎದುರಾಳಿಗೆ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಅಂತಿಮವಾಗಿ ಮೇರಿ ಮೇರಿ 4-1 ಅಂತರದಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದರು.

ಟೋಕಿಯೋ ಒಲಿಂಪಿಕ್ಸ್‌ ತಾರೆ ಮೀರಾಬಾಯಿ ಚಾನು ಎಕ್ಸ್‌ಕ್ಲೂಸಿವ್‌ ಸಂದರ್ಶನ

ಅಂಕ ಹೇಗೆ ಹಂಚಿಕೆ: ಬಾಕ್ಸಿಂಗ್‌ನಲ್ಲಿ ಫಲಿತಾಂಶ ನಿರ್ಧರಿಸಲು ಐವರು ತೀರ್ಪುಗಾರರಿರುತ್ತಾರೆ. ಮೊದಲೆರಡು ಸುತ್ತಿನಲ್ಲಿ ಮೂವರು ತೀರ್ಪುಗಾರರು ಮೇರಿ ಪರ ಅಂಕ ನೀಡಿದರೆ, ಇನ್ನುಳಿದ ಇಬ್ಬರು ಜಡ್ಜ್‌ಗಳು ಎದುರಾಳಿ ಬಾಕ್ಸರ್‌ಗೆ ಅಂಕ ನೀಡಿದರು. ಆದರೆ ಮೂರನೇ ಸುತ್ತಿನಲ್ಲಿ ಎಲ್ಲಾ 5 ತೀರ್ಪುಗಾರರು ಮೇರಿ ಕೋಮ್‌ಗೆ ಅಂಕ ನೀಡಿದ್ದರಿಂದ ಅಂತಿಮವಾಗಿ 4-1 ರಿಂದ ಭಾರತದ ಬಾಕ್ಸರ್ ಜಯಶಾಲಿ ಎಂದು ಘೋಷಿಸಲಾಯಿತು.
 

Latest Videos
Follow Us:
Download App:
  • android
  • ios