* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಪುರುಷರ ಆರ್ಚರಿ ತಂಡಕ್ಕೆ ನಿರಾಸೆ* ಕೊರಿಯಾ ಎದುರು 6-0 ಅಂತರದ ಸೋಲು ಕಂಡ ಭಾರತ ತಂಡ* ಕ್ವಾರ್ಟರ್ ಫೈನಲ್‌ನಲ್ಲೇ ಭಾರತದ ಹೋರಾಟ ಅಂತ್ಯ

ಟೋಕಿಯೋ(ಜು.26): ಆತನು ದಾಸ್‌, ತರುಣ್‌ದೀಪ್‌ ರೈ ಹಾಗೂ ಪ್ರವೀಣ್ ಜಾಧವ್‌ ಅವರನ್ನೊಳಗೊಂಡ ಭಾರತ ಪುರುಷರ ತಂಡ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕೊರಿಯಾ ಎದುರು 6-0 ಅಂತರದಲ್ಲಿ ಆಘಾತಕಾರಿ ಸೋಲು ಕಾಣುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತನ್ನ ಹೋರಾಟ ಅಂತ್ಯಗೊಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲ ಸುತ್ತಿನಲ್ಲಿ ಕೊರಿಯಾ 59 ಅಂಕಗಳಿಸಿದರೆ, ಭಾರತ ತಂಡವು 54 ಅಂಕಗಳಿಗೆ ತೃಪ್ತಿಪಟ್ಟುಕೊಂಡಿದೆ. ಇದರೊಂದಿಗೆ ಕೊರಿಯಾ 2-0 ಮುನ್ನಡೆ ಸಾಧಿಸಿತು. ಎರಡನೇ ಸೆಟ್‌ನಲ್ಲಿ ಪ್ರವೀಣ್‌ ಜಾಧವ್, ತರುಣ್‌ ದೀಪ್‌ ಉತ್ತಮ ಪ್ರದರ್ಶನ ತೋರಿದರಾದರೂ, ಆತನು ದಾಸ್ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ಪರಿಣಾಮ ಕೊರಿಯಾ 60ರಲ್ಲಿ 59 ಅಂಕ ಗಳಿಸಿದರೆ, ಭಾರತ 57 ಅಂಕ ಗಳಿಸಿತು. ಇದರೊಂದಿಗೆ ಕೊರಿಯಾ 4-0 ಮುನ್ನಡೆ ಸಾಧಿಸಿತು.

Scroll to load tweet…

ಟೋಕಿಯೋ 2020: ಗೆದ್ದು ಸೋತ ಫೆನ್ಸಿಂಗ್ ಪಟು ಭವಾನಿ ದೇವಿ

ಇನ್ನು ಮೂರನೇ ಸುತ್ತಿನಲ್ಲಿ ಭಾರತ 54 ಅಂಕಗಳನ್ನಷ್ಟೇ ಶಕ್ತವಾಯಿತು. ಕೊರಿಯಾ 56 ಅಂಕಗಳನ್ನು ಗಳಿಸುವ ಮೂಲಕ ಮೂರು ಸುತ್ತುಗಳನ್ನು ಜಯಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.