ಟೋಕಿಯೋ 2020: ನೀರಜ್ ಜೋಪ್ರಾಗೆ ತೀವ್ರ ಜ್ವರ: ಆಸ್ಪತ್ರೆಗೆ ದಾಖಲು..!
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ
* ಟೋಕಿಯೋದಿಂದ ವಾಪಸಾದ ಬಳಿಕ ನೀರಜ್‌ಗೆ ಜ್ವರ ಕಾಣಿಸಿಕೊಂಡಿತ್ತು
* ಆರೋಗ್ಯ ಸಮಸ್ಯೆಯ ನಡುವೆಯೂ ನಿರಂತರ ಕಾರ‍್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಪಾಣಿಪತ್(ಆ.18): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ತೀವ್ರ ಜ್ವರದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಟೋಕಿಯೋದಿಂದ ವಾಪಸಾದ ಬಳಿಕ ನೀರಜ್‌ಗೆ ಜ್ವರ ಕಾಣಿಸಿಕೊಂಡಿತ್ತು, ಆರೋಗ್ಯ ಸಮಸ್ಯೆಯ ನಡುವೆಯೂ ನಿರಂತರ ಕಾರ‍್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಂಗಳವಾರ ದೆಹಲಿಯಿಂದ ತಮ್ಮ ತವರೂರು ಹರಾರಯಣದ ಪಾಣಿಪತ್‌ಗೆ ಚೋಪ್ರಾ ಅವರನ್ನು ರೋಡ್ ಶೋ ಮೂಲಕ ಕರೆತರಲಾಯಿತು. ಪಾಣಿಪತ್‌ನಲ್ಲಿ ನಡೆಯುತ್ತಿದ್ದ ಅಭಿನಂದನಾ ಕಾರ‍್ಯಕ್ರಮದ ವೇಳೆ ತೀವ್ರ ಜ್ವರ ಕಾಣಿಸಿಕೊಂಡ ಕಾರಣ, ಕಾರ‍್ಯಕ್ರಮದ ಮಧ್ಯೆದಲ್ಲೇ ಎದ್ದು ಚೋಪ್ರಾ ಆಸ್ಪತ್ರೆಗೆ ತೆರಳಿದರು. ಅಲ್ಲದೇ ಪಾಣಿಪತ್ ಸಮೀಪವಿರುವ ಚೋಪ್ರಾ ಅವರ ಹಳ್ಳಿ ಖಂಡ್ರಾದಲ್ಲಿ ಮಂಗಳವಾರ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಚೋಪ್ರಾ ಕುಟುಂಬ 25,000-30,000 ಮಂದಿಗೆ ಊಟದ ವ್ಯವಸ್ಥೆ ಮಾಡಿತ್ತು.
ತೀವ್ರ ಜ್ವರ, ಗಂಟಲು ನೋವಿನಿಂದ ಬಳಲುತ್ತಿರುವ ಒಲಿಂಪಿಕ್ಸ್ ಚಿನ್ನ ಗೆದ್ದ ನೀರಜ್ ಜೋಪ್ರಾ!
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಕೊನೆಯ ದಿನ ನೀರಜ್ ಚೋಪ್ರಾ ಬರೋಬ್ಬರಿ 87.58 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ಚಿನ್ನದ ಪದಕ ಜಯಿಸಿದ ಸಾಧನೆ ಮಾಡಿದ್ದರು. ಇದರೊಂದಿಗೆ ಶತಮಾನಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್ ಪದಕ ಜಯಿಸಿದ ಸಾಧನೆ ಮಾಡಿದ್ದರು.