ತೀವ್ರ ಜ್ವರ, ಗಂಟಲು ನೋವಿನಿಂದ ಬಳಲುತ್ತಿರುವ ಒಲಿಂಪಿಕ್ಸ್ ಚಿನ್ನ ಗೆದ್ದ ನೀರಜ್ ಜೋಪ್ರಾ!
- ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ
- ತೀವ್ರ ಜ್ವರದಿಂದ ಬಳಲುತ್ತಿರುವ ಹರ್ಯಾಣದ ಒಲಿಂಪಿಕ್ ಪಟು
- ಕೋವಿಡ್ ಟೆಸ್ಟ್ ಫಲಿತಾಂಶ ಬಹಿರಂಗ!
ಹರ್ಯಾಣ(ಆ.14): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಜಾವಲಿನ್ ಪಟು ನೀರಜ್ ಚೋಪ್ರಾಗೆ ತವರಿನಲ್ಲಿ ಅದ್ಧೂರಿ ಸನ್ಮಾನಗಳು ನಡೆದಿದೆ. ತವರಿಗೆ ಬಂದ ಒಂದೇ ವಾರದಲ್ಲಿ ಇದೀಗ ನೀರಜ್ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಜೊತೆಗೆ ಗಂಟಲು ನೋವು, ಶೀತ, ಕೆಮ್ಮು ಕೂಡ ಕಾಡುತ್ತಿತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.
ನನ್ನ ಸಿನಿಮಾಗೆ ನೀರಜ್ ಹೀರೋ: ಚಿನ್ನದ ಹುಡಗನಿಗೆ ಸಿನಿಮಾ ಆಫರ್ ಮಾಡಿದ ಅಕ್ಷಯ್75ನೇ ಸ್ವಾತಂತ್ರ್ಯೋತ್ಸವ ದಿನಾಚರಣಗೆ ಪ್ರಧಾನಿ ನರೇಂದ್ರ ಮೋದಿ ಒಲಿಂಪಿಕ್ಸ್ ಸಾಧಕರನ್ನು ಆಹ್ವಾನಿಸಿದ್ದಾರೆ. ದೆಹಲಿಯ ಕೆಂಪು ಕೋಟೆಯಲ್ಲಿ ದೇಶಕ್ಕೆ ಚಿನ್ನ ತಂದ ನೀರಜ್ ಚೋಪ್ರಾ ಇರಲೇಬೇಕಿತ್ತು. ಆದರೆ ಜ್ವರದಿಂದ ಬಳಲುತ್ತಿರುವ ಚೋಪ್ರಾ ಇದೀಗ ಚಿಕಿತ್ಸೆ ಪಡಡೆಯುತ್ತಿದ್ದಾರೆ.
ಜ್ವರ, ಗಂಟಲು ನೋವು, ಕೆಮ್ಮು ಸೇರಿದಂತೆ ಕೊರೋನಾದ ಬಹುತೇಕ ಲಕ್ಷಣಗಳು ಕಾಣಿಸಿಕೊಂಡ ಕಾರಣ ನೀರಜ್ ಜೋಪ್ರಾ ಕೊರೋನಾ ಪರೀಕ್ಷೆ ಮಾಡಲಾಗಿದೆ. ಆದರೆ ನೀರಜ್‌ಗೆ ಕೊರೋನಾ ಅಂಟಿಕೊಂಡಿಲ್ಲ, ವರದಿಯಲ್ಲಿ ನೆಗಟೀವ್ ಬಂದಿದೆ. ಇದು ವೈರಲ್ ಫೀವರ್ ಎಂದು ವೈದ್ಯರು ಹೇಳಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತರಿಗೆ ಸನ್ಮಾನ; ಕ್ರೀಡಾಪಟುಗಳ ನೋಡಲು ಮುಗಿಬಿದ್ದ ಫ್ಯಾನ್ಸ್!
ನಿನ್ನೆ(ಆ.13) ನೀರಜ್ ದೇಹದ ಉಷ್ಣತೆ 103ಕ್ಕೇರಿದೆ. ಹೀಗಾಗಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ನೀರಜ್ ಪಾಲ್ಗೊಳ್ಳುತ್ತಿಲ್ಲ. ಇತರ ಒಲಿಂಪಿಕ್ ಪಕದಕ ವಿಜೇತರು ದೆಹಲಿಯ ಅಶೋಕ ಹೊಟೆಲ್‌ನಲ್ಲಿ ತಂಗಿದ್ದಾರೆ.
23 ವರ್ಷದ ನೀರಜ್ ಚೋಪ್ರಾ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ತೀವ್ರ ಜ್ವರದ ಕಾರಣ ಬಳಲಿರುವ ನೀರಜ್‌ಗೆ ಹೆಚ್ಚಿನ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಟೋಕಿಯೋ ಪ್ರಯಾಣ, ಸ್ಪರ್ಧೆ, ಬಳಿಕ ಭಾರತಕ್ಕೆ ಆಗಮನ, ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳಿಂದ ಚೋಪ್ರಾ ಬಳಲಿದ್ದಾರೆ. ಜೊತೆಗೆ ವಾತಾವರಣ ಕೂಡ ನೀರಜ್ ಜೋಪ್ರಾ ಜ್ವರಕ್ಕೆ ಕಾರಣವಾಗಿದೆ ಎಂದಿದ್ದಾರೆ.
2013ರಲ್ಲೇ ಒಲಿಂಪಿಕ್ಸ್ ಭವಿಷ್ಯ ನುಡಿದಿದ್ದ ಮೋದಿ: ಸಾಕಾರಗೊಳಿಸಿದ ನೀರಜ್ ಚೋಪ್ರಾ!
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಇತಿಹಾಸ ರಚಿಸಿದ್ದಾರೆ. ಇದೇ ಮೊದಲ ಬಾರಿಗೆ ಭಾರತ, ಅಥ್ಲೇಟಿಕ್ಸ್ ವಿಭಾಗದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದೆ. ಜಾವಲಿನ್ ಎಸೆತದಲ್ಲಿ ನೀರಜ್ 87.58ಮೀಟರ್ ದೂರ ಎಸೆದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.