ವಿಶೇಷ ವಿಮಾನದಲ್ಲಿ ಜಪಾನ್‌ ತಲುಪಿದ ಒಲಿಂಪಿಕ್‌ ಜ್ಯೋತಿ

ಒಲಿಂಪಿಕ್ಸ್ ಕ್ರೀಡಾಜ್ಯೋತಿ ಅಥೆನ್ಸ್‌ನಿಂದ ಜಪಾನ್ ತಲುಪಿದೆ. ಜುಲೈ 24ರಿಂದ ಟೋಕಿಯೋ ಓಲಿಂಪಿಕ್ಸ್ ಕ್ರೀಡಾಕೂಟ ಜರುಗಲಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ. 

Tokyo Olympic 2020 Flame arrives Japan from Athens

ಹಿಗಾಶಿಮಾತ್ಸುಶಿಮಾ(ಮಾ.21): ಕೊರೋನಾ ಸೋಂಕಿನ ಭೀತಿ ನಡುವೆಯೇ ಜಪಾನ್‌ 2020ರ ಟೋಕಿಯೋ ಒಲಿಂಪಿಕ್ಸ್‌ನ ಸಂಭ್ರಮದಲ್ಲಿದೆ. ಶುಕ್ರವಾರ ವಿಶೇಷ ವಿಮಾನದಲ್ಲಿ ಗ್ರೀಸ್‌ನಿಂದ ಆಗಮಿಸಿದ ಕ್ರೀಡಾ ಜ್ಯೋತಿಯನ್ನು ಇಲ್ಲಿನ ವಾಯುನೆಲೆಯಲ್ಲಿ ಸ್ವಾಗತಿಸಲಾಯಿತು. 

ಒಲಿಂಪಿಕ್ಸ್‌ ರದ್ದಾಗಲ್ಲ: ಜಪಾನ್‌ ಪ್ರಧಾನಿ ಸ್ಪಷ್ಟನೆ

ಒಲಿಂಪಿಕ್ಸ್‌ ಸಮಿತಿಯ ಅಧಿಕಾರಿಗಳು ಸೇರಿದಂತೆ ಕೆಲವೇ ಕೆಲವರಿಗೆ ಸಮಾರಂಭಕ್ಕೆ ಪ್ರವೇಶ ನೀಡಲಾಗಿತ್ತು. ಜಪಾನ್‌ನ ಮಾಜಿ ಒಲಿಂಪಿಯನ್‌ಗಳಾದ ಸವೊರಿ ಯೋಶಿಡಾ ಹಾಗೂ ತಡಹಿರೊ ನೊಮುರಾ ಕ್ರೀಡಾ ಜ್ಯೋತಿಯನ್ನು ವಿಮಾನದಿಂದ ಕೆಳಗಿಳಿಸಿ ಬೆಳಗಿಸಿದರು. ಮಾ.26ರಿಂದ ಒಲಿಂಪಿಕ್‌ ಕ್ರೀಡಾ ಜ್ಯೋತಿಯ ಯಾತ್ರೆ ಆರಂಭಗೊಳ್ಳಲಿದ್ದು, ಜಪಾನ್‌ನ ಎಲ್ಲಾ ಭಾಗಕ್ಕೂ ಪ್ರಯಾಣಿಸಿದ ಬಳಿಕ ಟೋಕಿಯೋ ತಲುಪಲಿದೆ ಎಂದು ಆಯೋಜಕರು ತಿಳಿಸಿದರು.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 9 ಬಾಕ್ಸರ್‌ಗಳು..!

ಎಲ್ಲವೂ ಅಂದುಕೊಂಡಂತೆ ನಡೆದರೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 24ರಿಂದ ಆಗಸ್ಟ್ 09ರವರೆಗೆ ನಡೆಯಲಿದೆ. ಕೊರೋನಾ ವೈರಸ್ ಭೀತಿಯಿಂದಾಗಿ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಮುಂದೂಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತಂತೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

Latest Videos
Follow Us:
Download App:
  • android
  • ios