'ಕರ್ ದೇ ಕಮಾಲ್ ತು' ಪ್ಯಾರಾಒಲಿಂಪಿಕ್ ಥೀಮ್ ಸಾಂಗ್ ಬಿಡುಗಡೆ!
- ಪ್ಯಾರಾಲಿಂಪಿಕ್ ಥೀಮ್ ಸಾಂಗ್ ಬಿಡುಗಡೆ ಮಾಡಿದ ಕ್ರೀಡಾ ಸಚಿವ
- ಆಗಸ್ಟ್ 24 ರಿಂದ ಸೆಪ್ಟೆಂಬರ್ 5ರ ವೆರೆಗೆ ನಡೆಯಲಿದೆ ಕ್ರೀಡಾಕೂಟ
- ಭಾರತದಿಂದ 54 ಸ್ಪರ್ಧಿಗಳು ಟೋಕಿಯೋಗೆ ಪ್ರಯಾಣ
ನವದೆಹಲಿ(ಆ.03): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಧರ ಬೆನ್ನಲ್ಲೇ ಇದೀಗ ಪ್ಯಾರಾ ಒಲಿಂಪಿಕ್ಸ್ ತಯಾರಿ ಭರದಿಂದ ಸಾಗಿದೆ. ಟೋಕಿಯೋದಲ್ಲಿ ನಡೆಯಲಿರುವ ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತದ ಕ್ರೀಡಾಪಟುಗಳು ಸಜ್ಜಾಗಿದ್ದಾರೆ. ಇದರ ನಡುವೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭಾರತೀಯ ಪ್ಯಾರಾಲಿಂಪಿಕ್ ತಂಡಕ್ಕಾಗಿ "ಕರ್ ದೇ ಕಮಾಲ್ ತು" ಥೀಮ್ ಸಾಂಗ್ ಬಿಡುಗಡೆ ಮಾಡಿದರು.
ತವರಿಗೆ ಆಗಮಿಸಿದ ಪಿವಿ ಸಿಂಧೂಗೆ ಸನ್ಮಾನ; ಶ್ರೇಷ್ಠ ಒಲಿಂಪಿಯನ್ ಎಂದ ಕ್ರೀಡಾ ಸಚಿವ!
ಕರ್ ದೇ ಕಮಾಲ್ ತು" ಹಾಡನ್ನು ಲಕ್ನೋ ದ ನಿವಾಸಿ ದಿವ್ಯಾಂಗ ಕ್ರಿಕೆಟ್ ಆಟಗಾರ ಸಂಜೀವ್ ಸಿಂಗ್ ಸಂಯೋಜಿಸಿ ಹಾಡಿದ್ದಾರೆ. ಭಾರತದ ಪ್ಯಾರಾಲಿಂಪಿಕ್ ಸಮಿತಿಯ ಕಲ್ಪನೆಯು ದಿವ್ಯಾಂಗ ಸಮುದಾಯದಿಂದ ಹಾಡನ್ನು ಒಳಗೊಳ್ಳುವಿಕೆಯ ಸಂಕೇತವಾಗಿ ಪಡೆಯುವುದಾಗಿತ್ತು. ಹಾಡಿನ ಸಾಹಿತ್ಯವು ಕೇವಲ ಕ್ರೀಡಾಪಟುಗಳನ್ನು ಮಾತ್ರವಲ್ಲದೆ ಯಾವುದೇ ರೀತಿಯ ಅಂಗವೈಕಲ್ಯ ಹೊಂದಿರುವ ಜನರನ್ನು ತಾವು ಯಾರಿಗೂ ಕಡಿಮೆಯಿಲ್ಲವೆಂದುಕೊಳ್ಳುವಂತೆ ಮತ್ತು ಅವರಲ್ಲಿ ಅದ್ಭುತಗಳನ್ನು ಸೃಷ್ಟಿಸಲು ಪ್ರೇರೇಪಿಸುತ್ತದೆ.
ಭಾರತವು 9 ಕ್ರೀಡಾ ವಿಭಾಗಗಳಲ್ಲಿಭಾಗವಹಿಸಲು 54 ಕ್ರೀಡಾ ಪಟುಗಳಿರುವ ತನ್ನ ಅತಿದೊಡ್ಡ ತಂಡವನ್ನು ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಕಳುಹಿಸುತ್ತಿದೆ. ನಮ್ಮ ಪ್ಯಾರಾ-ಕ್ರೀಡಾಪಟುಗಳು ತಮ್ಮ ಅತ್ಯುತ್ತಮವಾದದ್ದನ್ನು ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಸೋಲು-ಗೆಲುವು ಜೀವನದ ಎರಡು ಭಾಗಗಳು: ಹಾಕಿ ತಂಡವನ್ನು ಹುರಿದುಂಬಿಸಿದ ಪ್ರಧಾನಿ ಮೋದಿ
ಇಡೀ ಸಮುದಾಯಕ್ಕೆ ಇದು ಹೆಮ್ಮೆಯ ಕ್ಷಣ. ರಿಯೋ 2016 ಪ್ಯಾರಾ ಗೇಮ್ಸ್ನಲ್ಲಿ ಡಾಕ್ಟರ್ ದೀಪಾ ಮಲಿಕ್ ಅವರ ಸಾಧನೆಯೇ ಈ ಥೀಮ್ ಸಾಂಗ್ ಕವಿತೆ ಬರೆಯಲು ಸ್ಫೂರ್ತಿ ನೀಡಿತು ಎಂದು ಸಂಜೀವ್ ಸಿಂಗ್ ಹೇಳಿದರು. "ಈ ಹಾಡು ಪ್ಯಾರಾ-ಅಥ್ಲೀಟ್ಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸ್ಫೂರ್ತಿ ನೀಡಲಿ ಎಂದು ನಾನು ಬಯಸುತ್ತೇನೆ. ಅವರು ಈಗಾಗಲೇ ತಮ್ಮ ಜೀವನದಲ್ಲಿ ವಿಜಯಶಾಲಿಗಳಾಗಿದ್ದಾರೆ ಆದರೆ ಗೆದ್ದ ಒಂದು ಪದಕವು ಇಡೀ ದೇಶದ ಗಮನ ಸೆಳೆಯುತ್ತದೆ ಮತ್ತು ರಾಷ್ಟ್ರವು ಹೆಮ್ಮೆಪಡುವಂತೆ ಮಾಡುತ್ತದೆ. "ಎಂದು ಸಂಜೀವ್ ಹೇಳಿದರು.
ಆಗಸ್ಟ್ 24 ರಿಂದ ಸೆಪ್ಟೆಂಬರ್ 5ರ ವೆರೆಗೆ ನಡೆಯಲಿರುವ ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ 54 ಪ್ಯಾರಾ ಅಥ್ಲೀಟ್ಗಳು ಪಾಲ್ಗೊಳ್ಳುತ್ತಿದ್ದಾರೆ. 9 ವಿವಿಧ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.