ತವರಿಗೆ ಆಗಮಿಸಿದ ಪಿವಿ ಸಿಂಧೂಗೆ ಸನ್ಮಾನ; ಶ್ರೇಷ್ಠ ಒಲಿಂಪಿಯನ್ ಎಂದ ಕ್ರೀಡಾ ಸಚಿವ!
- ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಸಿಂಧೂ ತವರಿಗೆ ಆಗಮನ
- ದೆಹಲಿ ಏರ್‌ಪೋರ್ಟ್‌ಗೆ ಬಂದಿಳಿದ ಸಿಂಧೂಗೆ ಅದ್ಧೂರಿ ಸ್ವಾಗತ
- ಸಿಂಧೂಗೆ ಸನ್ಮಾನ ಮಾಡಿದ ಕೇಂದ್ರ ಕ್ರೀಡಾ ಸಚಿವ
ನವದೆಹಲಿ(ಆ.03): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ದಾಖಲೆ ಬರೆದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ತವರಿಗೆ ಆಗಮಿಸಿದ್ದಾರೆ. ದೆಹಲಿ ಏರ್‌ಪೋರ್ಟ್‌ಗೆ ಬಂದಿಳಿದ ಸಿಂಧೂಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಬಳಿಕ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸಿಂಧೂಗೆ ಸನ್ಮಾನ ಮಾಡಿದ್ದಾರೆ.
ಮುಸ್ಲಿಂ ಸಿಖ್ ಹಿಂದೂ, ಎಲ್ಲರನ್ನೂ ಒಗ್ಗೂಡಿಸುತ್ತಾಳೆ ಸಿಂಧು; ಸೆಹ್ವಾಗ್ ಸೇರಿ ದಿಗ್ಗಜರ ಟ್ವೀಟ್ ಸಲ್ಯೂಟ್!
ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಂಧೂವನ್ನು ಭಾರತದ ಬ್ಯಾಡ್ಮಿಂಟನ್ ಆಸೋಸಿಯೇಶನ್ ಬರಮಾಡಿಕೊಂಡಿತು. ಜೊತೆಗೆ ಅಪಾರ ಅಭಿಮಾನಿ ಬಳಗವೂ ನೆರೆದಿತ್ತು. ಅದ್ಧೂರಿ ಸ್ವಾಗತ ಪಡೆದ ಸಿಂಧೂ ನೇರವಾಗಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕಚೇರಿಗೆ ತೆರಳಿದರು. ಈ ವೇಳೆ ಠಾಕೂರ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಗಣ್ಯರು ಸಿಂಧೂಗೆ ಸನ್ಮಾನ ಮಾಡಿದರು.
ಪ್ರಧಾನಿ ಮೋದಿ ಜೊತೆ ಐಸ್‌ಕ್ರೀಂ ತಿನ್ನಲು ಕಾಯುತ್ತಿದ್ದಾರೆ ಪಿವಿ ಸಿಂಧು!
ಸಿಂಧೂ ಭಾರತದ ಶ್ರೇಷ್ಠ ಒಲಿಂಪಿಯನ್. ಸಿಂಧೂ ಭಾರತದ ಐಕಾನ್ ಹಾಗೂ ಸ್ಪೂರ್ತಿ. ದೇಶಕ್ಕಾಗಿ ಆಡುವ, ದೇಶವನ್ನು ಪ್ರತಿನಿಧಿಸುವ ಪ್ರತಿಯೊಬ್ಬರ ಗಮನವನ್ನು ಸಿಂಧು ಸೆಳೆದಿದ್ದಾರೆ. ಸತತ ಪರಿಶ್ರಮ, ಅಭ್ಯಾಸ, ಶಿಸ್ತಿನಿಂದ ಕನಸುಗಳನ್ನು ಸಾಕಾರಗೊಳಿಸಲು ಸಾಧ್ಯವಿದೆ ಎಂಬುದನ್ನು ಸಿಂಧು ಸಾಧಿಸಿ ತೋರಿಸಿದ್ದಾರೆ ಎಂದು ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.
ಪಿವಿ ಸಿಂಧೂ ಈ ಬಾರಿ ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಚೀನಾದ ಬಿಂಜಿಯಾವೋ ವಿರುದ್ಧ 21-13, 21-15 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿ ಕಂಚಿನ ಪದಕ ಗೆದ್ದುಕೊಂಡರು. ಈ ಮೂಲಕ 2016ರ ರಿಯೋ ಒಲಿಂಪಿಕ್ಸ್ ಹಾಗೂ 2021ರ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ಭಾರತದ ಮಹಿಳಾ ಕ್ರೀಡಾಪಟು ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ವೇಯ್ಟ್ ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಇದು ಭಾರತದ ಮೊದಲ ಪದಕವಾಗಿತ್ತು. ಬಳಿಕ ಹಲವು ಅವಕಾಶಗಳು ಭಾರತದ ಕೈತಪ್ಪಿತು. ಪದಕ ನಿರಾಸೆ ಅನುಭವಿಸಿದ ಭಾರತಕ್ಕೆ ಪಿವಿ ಸಿಂಧೂ ಕಂಚಿನ ಪದಕ ಗೆಲ್ಲೋ ಮೂಲಕ ಮತ್ತೆ ಭಾರತದ ಪದಕ ಭೇಟೆಯನ್ನು ಚುರುಕುಗೊಳಿಸಿದರು.