ಟೋಕಿಯೋ 2020: ಕನಿಷ್ಠ ಕಂಚಿನ ಪದಕವೂ ಜಯಿಸದೇ ನಿರಾಸೆ ಅನುಭವಿಸಿದ ಜೋಕೋವಿಚ್
* ದಿಗ್ಗಜ ಟೆನಿಸಿಗ ನೊವಾಕ್ ಜೋಕೋವಿಚ್ ಗೋಲ್ಡನ್ ಗ್ರ್ಯಾನ್‌ಸ್ಲಾಂ ಗೆಲ್ಲುವ ಕನಸು ಭಗ್ನ
* ವೈಯುಕ್ತಿಕ ವಿಭಾಗದಲ್ಲಿ ಪದಕವಿಲ್ಲದೇ ಹೋರಾಟ ಅಂತ್ಯಗೊಳಿಸಿಕೊಂಡ ಜೋಕೋ
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸರ್ಬಿಯಾ ಆಟಗಾರನಿಗೆ ನಿರಾಸೆ
ಟೋಕಿಯೋ(ಜು.31): ವಿಶ್ವ ನಂ.1 ಟೆನಿಸಿಗ ನೋವಾಕ್ ಜೋಕೋವಿಚ್‌ರ ಗೋಲ್ಡನ್ ಸ್ಲಾಂ ಕನಸು ಭಗ್ನಗೊಂಡಿದೆ. ಇದಷ್ಟೇ ಅಲ್ಲದೇ ಟೋಕಿಯೋ ಒಲಿಂಪಿಕ್ಸ್‌ನ ಸಿಂಗಲ್ಸ್ ವಿಭಾಗದಲ್ಲಿ ಕನಿಷ್ಠ ಕಂಚಿನ ಪದಕವೂ ಗೆಲ್ಲಲಾಗದೇ ತಮ್ಮ ಅಭಿಯಾನ ಮುಗಿಸಿದ್ದಾರೆ.
20 ಟೆನಿಸ್ ಗ್ರ್ಯಾನ್‌ಸ್ಲಾಂ ಒಡೆಯ ನೊವಾಕ್ ಜೋಕೋವಿಚ್ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪುರುಷರ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಲ್ಲಿಯವರೆಗಿನ ಗರಿಷ್ಠ ಸಾಧನೆ ಎನಿಸಿದೆ. ಕಂಚಿನ ಪದಕಕ್ಕೆ ನಡೆದ ಪೈಪೋಟಿಯಲ್ಲಿ ಸ್ಪೇನ್‌ನ ಪ್ಯಾಬ್ಲೋ ಕ್ಯಾರಿನೋ ಬುಸ್ಟಾ ಎದುರು 4-6, 7-3, 3-6 ಸೆಟ್‌ಗಳಲ್ಲಿ ಸೋಲು ಕಾಣುವ ಮೂಲಕ ಸರ್ಬಿಯಾದ ಟೆನಿಸಿಗ ನಿರಾಸೆ ಅನುಭವಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್: ಸೆಮೀಸ್‌ಗೆ ಲಗ್ಗೆಯಿಟ್ಟ ಜೋಕೋವಿಚ್!
ಇದಕ್ಕೂ ಮೊದಲು ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸರ್ಬಿಯಾದ ಜೋಕೋವಿಚ್, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ 6-1, 3-6, 1-6 ಸೆಟ್‌ಗಳಲ್ಲಿ ಸೋಲು ಕಂಡರು. ಈ ವರ್ಷ 3 ಗ್ರ್ಯಾನ್ ಸ್ಲಾಂ ಗೆದ್ದಿರುವ ಜೋಕೋವಿಚ್,ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಮುಂದಿನ ವರ್ಷ ಯುಎಸ್ ಓಪನ್‌ನಲ್ಲಿ ಪ್ರಶಸ್ತಿ ಜಯಿಸುವ ಗುರಿ ಹೊಂದಿದ್ದರು.
Alexander Zverev🇩🇪 has knocked out World No.1 Novak Djokovic🇷🇸 1-6, 6-3, 6-1 at #Tokyo2020 #UnitedByEmotion | #StrongerTogether | #Olympics
— #Tokyo2020 (@Tokyo2020) July 30, 2021