ಟೋಕಿಯೋ 2020: ಭಾರತ ಹಾಕಿ ತಂಡಕ್ಕಿಂದು ಕ್ವಾರ್ಟರ್‌ನಲ್ಲಿ ಬ್ರಿಟನ್ ಸವಾಲು

* ಭಾರತೀಯ ಹಾಕಿ ತಂಡಕ್ಕಿಂದು ಬ್ರಿಟನ್‌ ಸವಾಲು

* ಸೆಮಿಫೈನಲ್‌ ಪ್ರವೇಶದ ಹೊಸ್ತಿಲಲ್ಲಿ ಮನ್‌ಪ್ರೀತ್ ಸಿಂಗ್ ಪಡೆ

* ಗ್ರೂಪ್‌ ಹಂತದಲ್ಲಿ ಮಿಂಚಿನ ಪ್ರದರ್ಶನ ತೋರಿರುವ ಭಾರತ ಹಾಕಿ ತಂಡ

Tokyo 2020 Indian Mens Hockey Team Take on Britain in Quarter Final Encounter kvn

ಟೋಕಿಯೋ(ಆ.01): ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಿರುವ ಭಾರತ ಪುರುಷರ ಹಾಕಿ ತಂಡವು ಭಾನುವಾರ ನಡೆಯಲಿರುವ ಕ್ವಾರ್ಟರ್‌ ಫೈನಲ್‌ ಕದನದಲ್ಲಿ ಗ್ರೇಟ್‌ ಬ್ರಿಟನ್‌ ಸವಾಲನ್ನು ಎದುರಿಸಲಿದೆ. ಈ ಮೂಲಕ 8 ಬಾರಿ ಒಲಿಂಪಿಕ್ಸ್‌ ಚಾಂಪಿಯನ್‌ ಆಗಿರುವ ಭಾರತ ಹಾಕಿ ತಂಡ 41 ವರ್ಷಗಳ ಬಳಿಕ ಸೆಮಿಫೈನಲ್‌ ಪ್ರವೇಶಿಸುವ ತವಕದಲ್ಲಿದೆ.

1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಭಾರತ, 1984ರ ಲಾಸ್‌ ಏಂಜಲಿಸ್‌ ಒಲಿಂಪಿಕ್ಸ್‌ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದಾದ ಬಳಿಕ ಒಲಿಂಪಿಕ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಭಾರತ 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವಲ್ಲೂ ವಿಫಲಗೊಂಡಿತ್ತು. 2016 ರಿಯೋ ಒಲಿಂಪಿಕ್ಸ್‌ನಲ್ಲೂ ಕೊನೆಯ ಸ್ಥಾನ ಪಡೆದಿತ್ತು. ಇದೀಗ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೇರಲು ಎದುರು ನೋಡುತ್ತಿದೆ.

ಜಪಾನ್‌ ಮಣಿಸಿ, ರ‍್ಯಾಂಕಿಂಗ್‌ನಲ್ಲಿ ಶ್ರೇಷ್ಠ ಸಾಧನೆ ಮಾಡಿದ ಭಾರತ ಹಾಕಿ ತಂಡ..!

ಆದರೆ, ಈ ಬಾರಿ ಪ್ರಬಲ ಪೈಪೋಟಿ ನೀಡುತ್ತಿರುವ ಮನ್‌ಪ್ರೀತ್‌ ಸಿಂಗ್‌ ನೇತೃತ್ವದ ಭಾರತ ತಂಡವು ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌(3-2) ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿತ್ತು. ಆದರೆ, 2ನೇ ಪಂದ್ಯದಲ್ಲಿ ಆಸ್ಪ್ರೇಲಿಯಾ ವಿರುದ್ಧ 1-7 ಗೋಲುಗಳ ಅಂತರದ ಹೀನಾಯ ಸೋಲು ಕಂಡಿತ್ತು. ಬಳಿಕ ಪುಟಿದೆದ್ದ ಮನ್‌ಪ್ರೀತ್‌ ಬಳಗ ಸ್ಪೇನ್‌(3-0), ಅಂರ್ಜೆಟೀನಾ(3-1), ಜಪಾನ್‌(5-3) ವಿರುದ್ಧ ಅಧಿಕಾರಯುತ ಜಯ ಸಾಧಿಸಿ ‘ಎ’ ಗುಂಪಿನಲ್ಲಿ 2ನೇ ಸ್ಥಾನ ಪಡೆದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ.

ಅತ್ತ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ವಿಶ್ವ ನಂ.5 ಗ್ರೇಟ್‌ ಬ್ರಿಟನ್‌ ವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದು, ಭಾರತ ತಂಡಕ್ಕೆ ಜಯ ಅಷ್ಟುಸುಲಭವಲ್ಲ. ಹಿಂದಿನ ಪಂದ್ಯಗಳಲ್ಲಿನ ತಪ್ಪುಗಳನ್ನು ತಿದ್ದಿಕೊಂಡರೆ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡಕ್ಕೆ ಸುಲಭ ಗೆಲುವು ಸಿಗಲಿದೆ.

Latest Videos
Follow Us:
Download App:
  • android
  • ios