ಟೋಕಿಯೋ 2020 : ಫೈನಲ್ಸ್‌ಗೇರಲು ವಿಫಲರಾದ ಜಿಮ್ನಾಸ್ಟಿಕ್ಸ್ ಪಟು ಪ್ರಣತಿ ನಾಯಕ್
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾನುವಾರ ಭಾರತಕ್ಕೆ ಎದುರಾಯ್ತು ಮೂರು ನಿರಾಸೆ
* ಮುಂದಿನ ಸುತ್ತಿಗೇರಲು ಸಾನಿಯಾ-ಅಂಕಿತಾ ರೈನಾ ಜೋಡಿ ವಿಫಲ
* ಪ್ರಣತಿ ನಾಯಕ್, ಸ್ವಿಮ್ಮರ್ ಶ್ರೀಹರಿ ನಟರಾಜ್, ಮಾನಾ ಪಟೇಲ್‌ಗೂ ನಿರಾಸೆ
ಟೋಕಿಯೋ(ಜು.26): ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಏಕೈಕ ಜಿಮ್ನಾಸ್ಟಿಕ್ಸ್ ಪಟು ಪ್ರಣತಿ ನಾಯಕ್, ಆಲ್ರೌಂಡ್ ಫೈನಲ್ಸ್‌ಗೆ ಪ್ರವೇಶಿಸಲು ವಿಫಲರಾದರು.
26 ವರ್ಷದ ಪ್ರಣತಿ ಫ್ಲೋರ್ ವ್ಯಾಯಾಮ, ವಾಲ್ಟ್, ಅನ್‌ಈವನ್ ಬಾರ್ಸ್ ಹಾಗೂ ಬ್ಯಾಲೆನ್ಸ್ ಬೀಮ್ ವಿಭಾಗಗಳಲ್ಲಿ ಒಟ್ಟು 42.565 ಅಂಕ ಗಳಿಸಿದರು. ಒಟ್ಟಾರೆ ಪ್ರಣತಿ 29ನೇ ಸ್ಥಾನಗಳಿಸಿದರು. ಅಗ್ರ 24 ಪಟುಗಳು ಮಾತ್ರ ಫೈನಲ್‌ಗೇರಲಿದ್ದಾರೆ. ಈ ನಾಲ್ಕೂ ವಿಭಾಗಗಳಲ್ಲಿ ಮೊದಲ 8 ಸ್ಥಾನದಲ್ಲಿರುವ ಕ್ರೀಡಾಪಟುಗಳು ವೈಯಕ್ತಿಕ ಸ್ಪರ್ಧೆಗಳ ಫೈನಲ್‌ಗೇರಲಿದ್ದು, ಪ್ರಣತಿ ಯಾವ ವಿಭಾಗದಲ್ಲೂ ಅಗ್ರ 8ರಲ್ಲಿಲ್ಲ.
ಟೆನಿಸ್: ಸಾನಿಯಾ-ಅಂಕಿತಾ ಮೊದಲ ಸುತ್ತಿನಲ್ಲೇ ಹೊರಕ್ಕೆ
ಟೋಕಿಯೋ: ಟೆನಿಸ್ ಮಹಿಳಾ ಡಬಲ್ಸ್‌ನಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಮೊದಲ ಸುತ್ತಿನಲ್ಲೇ ಸಾನಿಯಾ ಮಿರ್ಜಾ ಹಾಗೂ ಅಂಕಿತಾ ರೈನಾ ಸೋಲು ಕಂಡು ನಿರ್ಗಮಿಸಿದ್ದಾರೆ.
ಟೋಕಿಯೋ 2020: ತಾಂತ್ರಿಕ ಸಮಸ್ಯೆಯಿಂದ ಶೂಟರ್ ಮನು ಭಾಕರ್‌ಗೆ ಆಘಾತ
ಉಕ್ರೇನ್‌ನ ಅವಳಿ ಸಹೋದರಿಯರಾದ ನಾಡಿಯಾ ಹಾಗೂ ಲಿಯುಡ್ಮೈಲಾ ವಿರುದ್ಧ 6-0, 6-7, 8-10 ಸೆಟ್‌ಗಳಲ್ಲಿ ಸೋಲು ಅನುಭವಿಸಿದರು. 2ನೇ ಸೆಟ್‌ನಲ್ಲಿ 5-3 ಮುನ್ನಡೆ ಹೊಂದಿದ್ದರೂ ಭಾರತ ಪಂದ್ಯವನ್ನು ಕೈಚೆಲ್ಲಿತು.ಇದೇ ವೇಳೆ ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ಸೋಮವಾರ ಭಾರತದ ಸುಮಿತ್ ನಗಾಲ್ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್‌ರನ್ನು ಎದುರಿಸಲಿದ್ದಾರೆ.
ಈಜು: ಶ್ರೀಹರಿ, ಮಾನಾ ಒಲಿಂಪಿಕ್ಸ್ ಅಭಿಯಾನ ಅಂತ್ಯ
ಟೋಕಿಯೋ: ಈಜುಪಟುಗಳಾದ ಮಾನಾ ಪಟೇಲ್ ಹಾಗೂ ಕರ್ನಾಟಕದ ಶ್ರೀಹರಿ ನಟರಾಜ್‌ರ ಟೋಕಿಯೋ ಒಲಿಂಪಿಕ್ಸ್ ಅಭಿಯಾನ ಮುಕ್ತಾಯಗೊಂಡಿದೆ. ಇಬ್ಬರೂ ತಮ್ಮ ಸ್ಪರ್ಧೆಗಳಲ್ಲಿ ಸೆಮಿಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ.
ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ನ ಹೀಟ್ಸ್‌ನಲ್ಲಿ 54.31 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಶ್ರೀಹರಿ ಒಟ್ಟು 40 ಈಜುಪಟುಗಳ ಪೈಕಿ 27ನೇ ಸ್ಥಾನ ಪಡೆದರು. ಅಗ್ರ 16 ಈಜುಗಾರರು ಮಾತ್ರ ಸೆಮೀಸ್‌ಗೇರಲಿದ್ದಾರೆ. ಮತ್ತೊಂದೆಡೆ ಮಾನಾ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ 1 ನಿಮಿಷ 05.20 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಮಾನಾ ಒಟ್ಟಾರೆ 39ನೇ ಸ್ಥಾನ ಪಡೆದರು.