Asianet Suvarna News Asianet Suvarna News

ಟೋಕಿಯೋ 2020: ಫೈನಲ್‌ಗೇರಿ ಇತಿಹಾಸ ಬರೆಯುತ್ತಾ ಮಹಿಳಾ ಹಾಕಿ ತಂಡ?

* ಟೋಕಿಯೋ ಒಲಿಂಪಿಕ್ಸ್‌ ಸೆಮಿಫೈನಲ್‌ನಲ್ಲಿಂದು ಭಾರತ ಮಹಿಳಾ ಹಾಕಿ ತಂಡಕ್ಕೆ ಅರ್ಜಿಂಟೀನಾ ಸವಾಲು

* ಫೈನಲ್‌ ಪ್ರವೇಶದ ಕನವರಿಕೆಯಲ್ಲಿದೆ ರಾಣಿ ರಾಂಪಾಲ್‌ ಪಡೆ

* ಇತಿಹಾಸ ನಿರ್ಮಿಸಲು ಸಜ್ಜಾಗಿದೆ ಭಾರತೀಯ ಮಹಿಳಾ ಹಾಕಿ ತಂಡ

Rani Rampal Led Indian Womens Hockey Team eyes on Tokyo Olympics Final kvn
Author
Tokyo, First Published Aug 4, 2021, 1:56 PM IST

ಟೋಕಿಯೋ(ಆ.04): ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ಸೆಮಿಫೈನಲ್‌ ಪ್ರವೇಶಿಸಿರುವ ಭಾರತ ಮಹಿಳಾ ಹಾಕಿ ತಂಡ, ಬುಧವಾರ ಸೆಮಿಫೈನಲ್‌ನಲ್ಲಿ ಬಲಿಷ್ಠ ಅರ್ಜೆಂಟೀನಾವನ್ನು ಎದುರಿಸಲಿದೆ. ಗುಂಪು ಹಂತದಲ್ಲಿ ಮೊದಲ 3 ಪಂದ್ಯ ಸೋತಿದ್ದ ಭಾರತ ಆ ಬಳಿಕ ಸತತ 2 ಪಂದ್ಯ ಗೆದ್ದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು.

ಕ್ವಾರ್ಟರ್‌ ಫೈನಲ್‌ನಲ್ಲಿ 3 ಬಾರಿ ಒಲಿಂಪಿಕ್ಸ್‌ ಚಾಂಪಿಯನ್‌ ಆಸ್ಪ್ರೇಲಿಯಾವನ್ನು 1-0 ಗೋಲಿನಿಂದ ಸೋಲಿಸಿ ಹಾಕಿ ಜಗತ್ತನ್ನು ಬೆರಗಾಗಿಸಿದ್ದ ರಾಣಿ ರಾಂಪಾಲ್‌ ಪಡೆ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಲು ಕಾಯುತ್ತಿದೆ. ಅರ್ಜೆಂಟೀನಾಯಿಂದ ಪ್ರಬಲ ಪೈಪೋಟಿ ಎದುರಾಗಲಿದೆಯಾದರೂ, ತನ್ನ ಅಮೋಘ ಪ್ರದರ್ಶನದಿಂದ ಇದೇ ಮೊದಲ ಬಾರಿಗೆ ವಿಶ್ವ ರಾರ‍ಯಂಕಿಂಗ್‌ನಲ್ಲಿ 7ನೇ ಸ್ಥಾನಕ್ಕೆ ಜಿಗಿದಿರುವ ಭಾರತ ತಂಡದ ಆತ್ಮವಿಶ್ವಾಸ ವೃದ್ಧಿಸಿದ್ದು, ಗೆಲ್ಲುವ ವಿಶ್ವಾಸದಲ್ಲಿದೆ.

ಟೋಕಿಯೋ ಒಲಿಂಪಿಕ್ಸ್‌: ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಹಾಕಿ ತಂಡ

ಅರ್ಜೆಂಟೀನಾ 2 ಬಾರಿ ಒಲಿಂಪಿಕ್ಸ್‌ ಬೆಳ್ಳಿ ಗೆದ್ದಿದೆ. 2000ರ ಸಿಡ್ನಿ, 2012ರ ಲಂಡನ್‌ ಗೇಮ್ಸ್‌ನಲ್ಲಿ 2ನೇ ಸ್ಥಾನ ಪಡೆದಿದ್ದ ‘ಲೆಸ್‌ ಲಿಯೋನಾಸ್‌’ ಈ ಬಾರಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ. ಇತ್ತೀಚಿನ ಮುಖಾಮುಖಿಯನ್ನು ಗಮನಿಸಿದರೆ ಅರ್ಜೆಂಟೀನಾ ಮೇಲುಗೈ ಸಾಧಿಸಿದೆ. ಅಂಕಿ-ಅಂಶ ಅರ್ಜೆಂಟೀನಾ ಪರವಾಗಿದ್ದು, ಆಸ್ಪ್ರೇಲಿಯಾ ವಿರುದ್ಧ ತೋರಿದ ಪ್ರದರ್ಶನವನ್ನು ಭಾರತ ಮುಂದುವರಿಸಿದರಷ್ಟೇ ಗೆಲುವು ಒಲಿಯಲಿದೆ.

ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್‌

Follow Us:
Download App:
  • android
  • ios