ಇದುವರೆಗಿನ ಪದಕ ದಾಖಲೆ ಮುರಿದ ಭಾರತ ಈ ಬಾರಿಯ ಪ್ಯಾರಾಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಟ್ಟು 19 ಪದಕ ಹೊಸ ಇತಿಹಾಸ ರಚಿಸಿದ ಭಾರತ, ದೇಶಕ್ಕೆ ಹೆಮ್ಮೆ

ಟೋಕಿಯೋ(ಸೆ.05): ಈ ಬಾರಿಯ ಟೋಕಿಯೋ ಒಲಿಂಪಿಕ್ಸ್, ಪ್ಯಾರಾಒಲಿಂಪಿಕ್ಸ್ ಭಾರತದ ಪಾಲಿಗೆ ಸ್ಮರಣೀಯವಾಗಿದೆ. ಕಾರಣ ಇದುವರೆಗಿನ ಕ್ರೀಡಾಕೂಟದಲ್ಲಿ ಈ ಬಾರಿ ಭಾರತ ಗರಿಷ್ಠ ಪದಕ ಸಾಧನೆ ಮಾಡಿದೆ. ಇಷ್ಟೇ ಅಲ್ಲ ಹಲವು ದಾಖಲೆ ಬರೆದಿದೆ. ಇದೀಗ ದೇಶದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ ಪ್ಯಾರಾಒಲಿಂಪಿಕ್ಸ್ ಕೂಟ ಅಂತ್ಯಗೊಂಡಿದೆ. ಈ ಬಾರಿ ಭಾರತ 19 ಪದಕ ಬಾಚಿಕೊಂಡಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ 24ನೇ ಸ್ಥಾನ ಅಲಂಕರಿಸಿದೆ.

ಪ್ಯಾರಾಒಲಿಂಪಿಕ್ಸ್‌ ಪದಕ: ನೆಚ್ಚಿನ ಜಿಲ್ಲಾಧಿಕಾರಿ ಕನ್ನಡಿಗ ಸುಹಾಸ್‌‌ ಅಭಿನಂದಿಸಿದ ಯೋಗಿ ಆದಿತ್ಯನಾಥ್

ಐತಿಹಾಸಿಕ ಸಾಧನೆ, ಅಂತಾರಾಷ್ಟ್ರೀಯ ದಾಖಲೆಯೊಂದಿಗೆ ಭಾರತ ಟೋಕಿಯೋ ಪ್ಯಾರಾಒಲಿಂಪಿಕ್ಸ್ ಕೂಟವನ್ನು ಸ್ಮರಣೀಯವಾಗಿಸಿದೆ. 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚಿನ ಪದಕ ಸೇರಿ ಒಟ್ಟ 19 ಪದಕ ಭಾರತ ಗೆದ್ದುಕೊಂಡಿದೆ. ಇದೀಗ ಭಾರತೀಯ ಪ್ಯಾರಾ ಕ್ರೀಡಾಪಟುಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಕ್ರೀಡಾಪಟುಗಳಿಗೆ ಖುದ್ದ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. 

Scroll to load tweet…

ಪ್ಯಾರಾ ಒಲಿಂಪಿಕ್ಸ್ ಅಂತಿಮ ದಿನದಲ್ಲೂ ಭಾರತ ಪದಕ ಬೇಟೆಯಾಡಿದೆ. ಸುಹಾಸ್ ಯತಿರಾಜ್ ಬೆಳ್ಳಿ ಗೆದ್ದ ಬೆನ್ನಲ್ಲೇ ಕೃಷ್ಣನಗರ್ ಚಿನ್ನ ಗೆಲ್ಲೋ ಮೂಲಕ 2 ಪದಕ ಸಂಪಾದಿಸಿದೆ. ಈ ಮೂಲಕ ಚಿನ್ನದ ಪದಕ ಸಂಖ್ಯೆ 5ಕ್ಕೇರಿತು. ಶೂಟಿಂಗ್‌ನಲ್ಲಿ ಅವನಿ ಲೆಖರ, ಜಾವೆಲಿನ್ ಥ್ರೋನಲ್ಲಿ ಸುಮಿತ್ ಅಂಟಿಲ್, ಮನೀಶ್ ನರ್ವಾಲ್ ಶೂಟಿಂಗ್‌ನಲ್ಲಿ ಚಿನ್ನ, ಬ್ಯಾಡ್ಮಿಂಟನ್‌ನಲ್ಲಿ ಪ್ರಮೋದ್ ಭಗತ್ ಹಾಗೂ ಬ್ಯಾಡ್ಮಿಂಟನ್‌ನಲ್ಲಿ ಕೃಷ್ಣನಗರ್ ಚಿನ್ನದ ಪದಕ ಗೆದ್ದ ಸಾಧಕರಾಗಿದ್ದಾರೆ.

Scroll to load tweet…

ಪ್ಯಾರಾ ಅಥ್ಲೀಟ್‌ ಆಗೋದೇಗೆಂದು ಗೂಗಲ್‌ನಲ್ಲಿ ಹುಡುಕಿದ್ದ ಬೆಳ್ಳಿ ಪದಕ ವಿಜೇತ ಪ್ರವೀಣ್ ಕುಮಾರ್‌‌!

54 ಭಾರತೀಯ ಸ್ಪರ್ಧಿಗಳು ಈ ಬಾರಿಯ ಪ್ಯಾರಾ ಒಲಿಂಪಿಕ್ಸ್ ಕೂಟದಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 19 ಪದಕ ಗೆದ್ದು ಇತಿಹಾಸ ರಚಸಿದ್ದಾರೆ. 2016ರ ರಿಯೋ ಪ್ಯಾರಾ ಒಲಿಂಪಿಕ್ಸ್ ಕೂಟದಲ್ಲಿ ಭಾರತದ 19 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ನಾಲ್ಕು ಪದಕ ಭಾರತ ಗೆದ್ದುಕೊಂಡಿತ್ತು.