ಪ್ಯಾರಾ ಅಥ್ಲೀಟ್‌ ಆಗೋದೇಗೆಂದು ಗೂಗಲ್‌ನಲ್ಲಿ ಹುಡುಕಿದ್ದ ಬೆಳ್ಳಿ ಪದಕ ವಿಜೇತ ಪ್ರವೀಣ್ ಕುಮಾರ್‌‌!

* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಪ್ರವೀಣ್‌ ಕುಮಾರ್ ಹಿಂದಿದೆ ರೋಚಕ ಕಹಾನಿ

* 8 ವರ್ಷದ ಪ್ರವೀಣ್‌ ಕುಮಾರ್‌ 2.07 ಮೀ. ಎತ್ತರಕ್ಕೆ ಜಿಗಿದು ಬೆಳ್ಳಿ ಜಯಿಸಿದ್ದಾರೆ.

* ಪ್ರವೀಣ್ ಕುಮಾರ್ ಪಾಲಿಗೆ ಗೂಗಲ್‌ ಸರ್ಚ್‌ ಮೊದಲ ಗುರು..!

Tokyo Paralympics google search that started journey of Paralympic silver medallist Praveen Kumar kvn

ನವದೆಹಲಿ(ಸೆ.04): ಬಹುತೇಕ ಎಲ್ಲಾ ಪ್ರಶ್ನೆಗಳಿಗೂ ಈಗ ಗೂಗಲ್‌ ಸರ್ಚ್‌ನಲ್ಲಿ ಉತ್ತರ ಸಿಗಲಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಪ್ರವೀಣ್‌ ಕುಮಾರ್‌ಗೂ ಗೂಗಲ್‌ ನೆರವಾಗಿತ್ತು. ಶುಕ್ರವಾರ ಪುರುಷರ ಟಿ64 ವಿಭಾಗದಲ್ಲಿ 18 ವರ್ಷದ ಪ್ರವೀಣ್‌ ಕುಮಾರ್‌ 2.07 ಮೀ. ಎತ್ತರಕ್ಕೆ ಜಿಗಿದು ಏಷ್ಯನ್‌ ದಾಖಲೆಯೊಂದಿಗೆ ಬೆಳ್ಳಿ ಪದಕ ಜಯಿಸಿದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಅತಿಕಿರಿಯ ಕ್ರೀಡಾಪಟು ಎನ್ನುವ ದಾಖಲೆ ಬರೆದರು.

ಉತ್ತರಪ್ರದೇಶದ ನೋಯ್ಡಾದ ಪ್ರವೀಣ್‌ರ ಕಾಲಿನ ಅಳತೆಯಲ್ಲಿ ಹುಟ್ಟುವಾಗಲೇ ವ್ಯತ್ಯಾಸ ಕಂಡುಬಂದಿತ್ತು. ಮೊದಲು ವಾಲಿಬಾಲ್‌ ಆಡುತ್ತಿದ್ದ ಅವರು 2019ರಲ್ಲಿ ಪ್ಯಾರಾ ಅಥ್ಲೀಟ್‌ ಆಗುವುದು ಹೇಗೆ ಎನ್ನುವುದನ್ನು ಗೂಗಲ್‌ನಲ್ಲಿ ಹುಡುಕಿ ತಿಳಿದುಕೊಂಡಿದ್ದರು. ಸ್ಥಳೀಯ ಕೋಚ್‌ ಒಬ್ಬರ ಸಹಾಯದಿಂದ ರಾಷ್ಟ್ರೀಯ ಕೋಚ್‌ ಸತ್ಪಾಲ್‌ ಸಿಂಗ್‌ರ ಸಂಪರ್ಕ ಸಾಧಿಸಿ, ಪ್ಯಾರಾ ಅಥ್ಲೀಟ್‌ ಆದರು. 

ಪ್ಯಾರಾಲಿಂಪಿಕ್ಸ್‌: ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್, ಪದಕಗಳ ಸಂಖ್ಯೆ 11ಕ್ಕೇರಿಕೆ..!

2019ರಲ್ಲೇ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಸ್ಪರ್ಧಿಸಿ ಬೆಳ್ಳಿ ಗೆದ್ದಿದ್ದ ಅವರು, 2021ರ ಫಝ್ಝ ಗ್ರ್ಯಾನ್‌ ಪ್ರಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಏಷ್ಯಾ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು. ಈ ವರ್ಷ ಕೋವಿಡ್‌ಗೆ ತುತ್ತಾಗಿದ್ದರಿಂದ ಅವರ ತರಬೇತಿಗೂ ಅಡ್ಡಿಯಾಗಿತ್ತು. ಆದರೆ ಪ್ರವೀಣ್‌ ತಮ್ಮ ಮನೆ ಸಮೀಪವೇ ಸಣ್ಣ ಗುಂಡಿ ತೋಡಿ ಮಣ್ಣನ್ನು ಮೃದುಗೊಳಿಸಿ ಹೈಜಂಪ್‌ ಅಭ್ಯಾಸ ನಡೆಸುತ್ತಿದ್ದರು.

Latest Videos
Follow Us:
Download App:
  • android
  • ios