ಇತ್ತ ಚಿನ್ನ ಗೆದ್ದ ನೀರಜ್..ಅತ್ತ ಟ್ರೋಲ್ ಆದ ಪಾಕ್ ಪ್ರಧಾನಿ!
* ಟೊಕಿಯೋದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ
* ಐತಿಹಾಸಿಕ ಸಾಧನೆಗೆ ಇಡೀ ದೇಶದ ಮೆಚ್ಚುಗೆ
* ವೈರಲ್ ಆಗುತ್ತಿರುವ ನೀರಜ್ ಚೋಪ್ರಾ ಹಳೆಯ ಟ್ವೀಟ್
* ಅತ್ತ ಇಮ್ರಾನ್ ಖಾನ್ ಮೇಲೆ ಟ್ವೀಟ್ ದಾಳಿ
ಟೋಕಿಯೋ(ಆ.07): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ತೊಡಿಸಿದ ಜಾವಲಿನ್ ಪಟು ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಇಡೀ ದೇಶವೇ ಕ್ರೀಡಾಪಟುವನ್ನು ಕೊಂಡಾಡುತ್ತಿದೆ.
ಚೋಪ್ರಾ ಮಾಡಿದ ಹಳೆಯ ಟ್ವೀಟ್ ಒಂದು ಈಗ ವೈರಲ್ ಆಗುತ್ತಿದ್ದು ಅತ್ತ ಪಾಕಿಸ್ತಾನದಲ್ಲಿ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ರನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.
ಭಾರತಕ್ಕೆ ಚಿನ್ನ ತೊಡಿಸಿದ ಚೋಪ್ರಾಗೆ ಅಭಿನಂದನೆಗಳ ಮಹಾಪೂರ
ಮುಂದಿನ ಒಲಿಂಪಿಕ್ಸ್ ಗೆ ನನ್ನ ಸಿದ್ಧತೆಗಳು ಸರಿಯಾದ ಮಾರ್ಗದಲ್ಲಿ ನಡೆಯುತ್ತಿವೆ. ಯುರೋಪಿನಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಭಾರತದ ರಾಯಭಾರ ಕಚೇರಿ ಮತ್ತು ಕೇಂದ್ರ ಸರ್ಕಾರ ಎಲ್ಲ ಸಹಕಾರ ನೀಡಿದೆ. ವೀಸಾ ನಿಯಮಗಳು ಬಿಗಿಯಾಗಿರುವ ಸಂದರ್ಭದಲ್ಲಿಯೂ ನನ್ನ ಜತೆ ನಿಂತಿದೆ ಎಂದು ಜೂನ್ 16 ರಂದು ಚೋಪ್ರಾ ಟ್ವೀಟ್ ಮಾಡಿದ್ದರು.
ಇದೇ ಟ್ವೀಟ್ ಗೆ ಪಾಕಿಸ್ತಾನದ ಪ್ರಜೆಗಳು ವಿಭಿನ್ನ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಚಿನ್ನಕ್ಕಾಗಿ ಬೇಡಿಕೆ ಇಡುವುದು ಸುಲಭ, ಆದರೆ ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುವುದು ಸುಲಭವಲ್ಲ. ನಮಗೆ ಕ್ವಾಲಿಫೈ ಆದ ಆಟಗಾರರ ಹೆಸರು ನೆನಪಿಲ್ಲ ಎಂದು ಒಬ್ಬರು ಹೇಳಿದ್ದಾರೆ. ಮೊದಲು ಇಲ್ಲಿಯವರಿಗೆ ಕ್ರೀಡೆಯ ಬಗೆಗಿನ ಮೂಲಸೌಕರ್ಯ ಒದಗಿಸುವ ಕೆಲಸ ಮಾಡಿ ಎಂದು ಪ್ರಧಾನಿ ಇಮ್ರಾನ್ ಖಾನ್ ಗೆ ಕುಟುಕಿದ್ದಾರೆ.