* ಭಾರತದ ಈಜುಪಟು ಶ್ರೀಹರಿ, ಮಾನಾ ಪಟೇಲ್‌ಗೆ ನೇರ ಟೋಕಿಯೋ ಒಲಿಂಪಿಕ್ಸ್ ಟಿಕೆಟ್* ಭಾರತೀಯ ಈಜು ಫೆಡರೇಷನ್‌ ನಿಂದ ಈ ಇಬ್ಬರು ಅಥ್ಲೀಟ್‌ಗಳ ಹೆಸರು ನಾಮನಿರ್ದೇಶನ* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆರಂಭ

ನವದೆಹಲಿ(ಜೂ.23): ತಾರಾ ಈಜುಪಟುಗಳಾದ ಶ್ರೀಹರಿ ನಟರಾಜ್‌ ಹಾಗೂ ಮಾನಾ ಪಟೇಲ್‌ ಹೆಸರನ್ನು ಟೋಕಿಯೋ ಒಲಿಂಪಿಕ್ಸ್‌ಗೆ ಭಾರತೀಯ ಈಜು ಫೆಡರೇಷನ್‌(ಎಸ್‌ಎಫ್‌ಐ) ನಾಮನಿರ್ದೇಶನ ಮಾಡಿದ್ದು, ಈ ಇಬ್ಬರಿಗೂ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುವುದು ಬಹುತೇಕ ಖಚಿತವೆನಿಸಿದೆ. 

ಸಾರ್ವತ್ರಿಕ ಸ್ಥಾನಗಳ ಅರ್ಹತಾ ಪದ್ಧತಿಯ ಅನುಸಾರ ಅಗ್ರ ರ‍್ಯಾಂಕಿಂಗ್‌ ಹೊಂದಿರುವ ಈಜುಪಟುಗಳನ್ನು ಆಯ್ಕೆ ಮಾಡಲಾಗಿದೆ. ಬೇರಾರ‍ಯವುದೇ ಈಜುಪಟುಗಳು ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯದಿದ್ದರೆ ಇಲ್ಲವೇ ‘ಬಿ’ ವಿಭಾಗದ ಸಮಯವನ್ನು ಸಾಧಿಸಿರುವ ಆಧಾರದ ಮೇಲೆ ವಿಶ್ವ ಈಜು ಸಂಸ್ಥೆಯಿಂದ ಆಹ್ವಾನ ಪಡೆಯದಿದ್ದರೆ ಶ್ರೀಹರಿ ಹಾಗೂ ಮಾನಾಗೆ ಒಲಿಂಪಿಕ್ಸ್‌ಗೆ ತೆರಳಲು ಅವಕಾಶ ಸಿಗಲಿದೆ. ಶ್ರೀಹರಿಗೆ 5 ಈಜುಪಟುಗಳಿಂದ ಸ್ಪರ್ಧೆ ಇದೆ. ಮಾನಾಗೆ ಯಾರಿಂದಲೂ ಸ್ಪರ್ಧೆ ಇಲ್ಲ.

ಬೆಲ್ಗ್ರೇಡ್‌ ಈಜು: ಚಿನ್ನ ಗೆದ್ದ ಶ್ರೀಹರಿ, ಸಾಜನ್‌, ಒಲಿಂಪಿಕ್ಸ್ ಅವಕಾಶ ಜಸ್ಟ್ ಮಿಸ್

ಇದೇ ಜೂನ್‌ 19 ಹಾಗೂ 20ರಂದು ಸರ್ಬಿಯಾದ ಬೆಲ್ಗ್ರೇಡ್‌ನಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದಾಗಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಶ್ರೀಹರಿ ಹಾಗೂ ಮಾನಾ ಭಾರತ ಪರ ಅತಿಹೆಚ್ಚು ಅಂಕಗಳನ್ನು ಹೊಂದಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ಗೆ ಈಜು ವಿಭಾಗದಲ್ಲಿ ಅರ್ಹತೆ ಪಡೆಯಲು ಜೂನ್ 27ರವರೆಗೂ ಕಾಲಾವಕಾಶವಿದೆ.