Asianet Suvarna News Asianet Suvarna News

ಬೆಲ್ಗ್ರೇಡ್‌ ಈಜು: ಚಿನ್ನ ಗೆದ್ದ ಶ್ರೀಹರಿ, ಸಾಜನ್‌, ಒಲಿಂಪಿಕ್ಸ್ ಅವಕಾಶ ಜಸ್ಟ್ ಮಿಸ್

* ಒಲಿಂಪಿಕ್ಸ್‌ ಅರ್ಹತೆ ಮೇಲೆ ಕಣ್ಣಿಟ್ಟಿರುವ ಈಜುಪಟು ಶ್ರೀಹರಿ

* ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಲು ಜಸ್ಟ್‌ ಮಿಸ್

* ಟೋಕಿಯೋ ಒಲಿಂಪಿಕ್ಸ್‌ ಜುಲೈ 23ರಿಂದ ಆರಂಭ

Indian Swimmers Sajan Srihari fall short of A mark Tokyo Olympic Qualifying time kvn
Author
Belgrade, First Published Jun 21, 2021, 9:27 AM IST

ಬೆಲ್ಗ್ರೇಡ್‌‌(ಜೂ.21): ಭಾರತದ ತಾರಾ ಈಜುಪಟುಗಳಾದ ಶ್ರೀಹರಿ ನಟರಾಜ್‌ ಹಾಗೂ ಸಾಜನ್‌ ಪ್ರಕಾಶ್‌, ಸರ್ಬಿಯಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಈಜು ಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಆದರೆ ಒಲಿಂಪಿಕ್ಸ್‌ಗೆ ನೇರ ಅರ್ಹತೆ ನೀಡುವ ‘ಎ’ ವಿಭಾಗದ ಸಮಯವನ್ನು ಸಾಧಿಸುವಲ್ಲಿ ಮತ್ತೊಮ್ಮೆ ವಿಫಲರಾಗಿದ್ದಾರೆ. 

ಒಲಿಂಪಿಕ್ಸ್‌ ಕನಸು ಕಾಣುತ್ತಿರುವ ಸಾಜನ್ ಪ್ರಕಾಶ್ 200 ಮೀಟರ್ ಬಟರ್‌ಫ್ಲೈ ವಿಭಾಗ ಹಾಗೂ ಶ್ರೀಹರಿ ನಟರಾಜ್ 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಟೋಕಿಯೋ ಒಲಿಂಪಿಕ್‌ ಅರ್ಹತೆ ನಿರೀಕ್ಷೆಯಲ್ಲಿ ಶ್ರೀಹರಿ

200 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಸಾಜನ್‌, 1 ನಿಮಿಷ 56.96 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಒಲಿಂಪಿಕ್ಸ್‌ಗೆ ನೇರ ಅರ್ಹತೆಯನ್ನು 0.48 ಸೆಕೆಂಡ್‌ಗಳಿಂದ ತಪ್ಪಿಸಿಕೊಂಡರು. ಇನ್ನು ಶ್ರೀಹರಿ 100 ಮೀ. ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ 54.45 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಒಲಿಂಪಿಕ್ಸ್‌ ‘ಎ’ ವಿಭಾಗದ ಸಮಯವು 53.85 ಸೆಕೆಂಡ್‌ಗಳಿಗೆ ನಿಗದಿಯಾಗಿದೆ. ಮೊದಲ ದಿನ ಭಾರತ ಒಟ್ಟು 5 ಪದಕ ಜಯಿಸಿತು.

ಭಾರತದ ಈ ಇಬ್ಬರು ತಾರಾ ಆಟಗಾರರಿಗೆ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಲು ಜೂನ್ 25ರಿಂದ 27ರವರೆಗೆ ರೋಮ್‌ನಲ್ಲಿ ನಡೆಯಲಿರುವ ಸೆಟ್ಟೆ ಕೋಲಿ ಟ್ರೋಫಿ ಕೊನೆಯ ಅವಕಾಶ ಎನಿಸಿದೆ.

Follow Us:
Download App:
  • android
  • ios