* ಪೋರ್ಚುಗಲ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಜಾವಲಿನ್ ಪಟು ನೀರಜ್ ಚೋಪ್ರಾ* ನೀರಜ್ ಚೋಪ್ರಾ ಭಾರತದ ಭರವಸೆಯ ಯುವ ಜಾವಲಿನ್ ಪಟು* ಟೋಕಿಯೋ ಒಲಿಂಪಿಕ್ಸ್‌ಗೆ ಭರ್ಜರಿ ಸಿದ್ದತೆ ಆರಂಭಿಸಿರುವ ನೀರಜ್

ಲಿಸ್ಬನ್‌(ಜೂ.11): ಭಾರತದ ಭರವಸೆಯ ಜಾವಲಿನ್ ಪಟು ನೀರಜ್ ಚೋಪ್ರಾ, ಟೋಕಿಯೋ ಒಲಿಂಪಿಕ್ಸ್‌ಗೆ ಭರ್ಜರಿ ಸಿದ್ದತೆ ನಡೆಸುತ್ತಿದ್ದು, ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಮತ್ತೊಂದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಹೌದು, ಇಲ್ಲಿನ ಲಿಸ್ಬನ್ ವಿಶ್ವವಿದ್ಯಾಲಯದಲ್ಲಿ ನಡೆದ ಸಿಟಿ ಆಫ್‌ ಲಿಸ್ಬನ್‌ ಅಥ್ಲೇಟಿಕ್ಸ್‌ ಟೂರ್ನಿಯಲ್ಲಿ 83.18 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪ್ರತಿಕೂಲ ಹವಾಮಾನದ ಹೊರತಾಗಿಯೂ ನೀರಜ್ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಕಷ್ಟು ಗಾಳಿ ಇದ್ದರೂ ಸಹಾ ಏಷ್ಯನ್ ಗೇಮ್ಸ್‌ ಜಾವಲಿನ್ ಚಾಂಪಿಯನ್‌ 83.18 ಮೀಟರ್ ದೂರ ಎಸೆಯುವಲ್ಲಿ ಯಶಸ್ವಿಯಾದರು. 

Scroll to load tweet…

'ಭಾವನೆಗೆ ಧಕ್ಕೆ ತರಲ್ಲ' ಚೀನಾ ಕಂಪನಿಯ ಪ್ರಾಯೋಜಕತ್ವ ಕೈಬಿಟ್ಟ ಭಾರತ

ಕಳೆದ ಮಾರ್ಚ್‌ನಲ್ಲಿ ಪಟಿಯಾಲದಲ್ಲಿ ನಡೆದ ಇಂಡಿಯನ್‌ ಗ್ರ್ಯಾನ್‌ ಪ್ರಿಕ್ಸ್‌ ಕೂಟದಲ್ಲಿ 88.07 ಮೀಟರ್ ದೂರ ಎಸೆಯುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ನೀರಜ್ ಚೋಪ್ರಾ, ಲಿಸ್ಬನ್‌ನಲ್ಲಿ 6 ಪ್ರಯತ್ನಗಳ ಪೈಕಿ ಮೂರು ಬಾರಿ ಪೌಲ್ ಮಾಡಿದರು. ಮೊದಲ ಯಶಸ್ವಿ ಪ್ರಯತ್ನದಲ್ಲಿ 80.71 ಮೀಟರ್ ಎಸೆದಿದ್ದರು. ಇನ್ನು ಎರಡನೇ ಯಶಸ್ವಿ ಪ್ರಯತ್ನದಲ್ಲಿ ನೀರಜ್ ಕೇವಲ 78.50 ಮೀಟರ್ ದೂರ ಎಸೆದಿದ್ದರು. ಆದರೆ ಮೂರನೇ ಯಶಸ್ವಿ ಪ್ರಯತ್ನದಲ್ಲಿ 83.18 ಮೀಟರ್ ದೂರ ಜಾವಲಿನ್ ಎಸೆದು ಚಿನ್ನದ ಪದಕಕ್ಕೆ ಕೊರಳೊಡಿದ್ದಾರೆ.

ಹರ್ಯಾಣದ ಪಾಣಿಪತ್ ಜಿಲ್ಲೆಯ ಖಂಡ್ರಾ ಎನ್ನುವ ಹಳ್ಳಿಯ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಲ್ಲ ಅಥ್ಲೀಟ್ ಎನ್ನುವ ಭರವಸೆ ಮೂಡಿಸಿದ್ದಾರೆ.