'ಭಾವನೆಗೆ ಧಕ್ಕೆ ತರಲ್ಲ' ಚೀನಾ ಕಂಪನಿಯ ಪ್ರಾಯೋಜಕತ್ವ ಕೈಬಿಟ್ಟ ಭಾರತ
* ಚೀನಾ ಕಂಪನಿಯ ಪ್ರಾಯೋಜಕತ್ವ ತೊರೆಯಲಾಗಿದೆ
* ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ನಿಂದ ದಿಟ್ಟ ನಿರ್ಧಾರ
* ಭಾರತದ ಸೈನಿಕರ ಮೇಲೆ ಕಾರಣವಿಲ್ಲದೆ ದಾಳಿ ಮಾಡಿದ್ದ ಚೀನಾ
ನವದೆಹಲಿ(ಜೂ. 09) ಕೆಲ ತಿಂಗಳ ಹಿಂದೆ ಚೀನಿ ಆಪ್ ಗಳನ್ನು ನಿಷೇಧ ಮಾಡಿದ್ದ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿತ್ತು. ಈಗ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಸರದಿ.
ಟೊಕಿಯೋ ಒಲಿಂಪಿಕ್ಸ್ ಗೂ ಮುನ್ನ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಚೀನಾದ ಕ್ರೀಡಾ ಉಡುಪು ತಯಾರಕ ಲಿ ನಿಂಗ್ ಪ್ರಾಯೋಜಕತ್ವವನ್ನು ನಿರಾಕರಿಸಿದೆ. ದೇಶದ ಜನರ ಭಾವನೆಗೆ ಧಕ್ಕೆ ತರಲು ನಮ್ಮಿಂದ ಆಗುವುದಿಲ್ಲ ಎಂದು ಹೇಳಿದೆ.
ಕಳೆದ ವರ್ಷ ಹಿಮಾಚಲ ಪ್ರದೇಶದ ಗಡಿಯಲ್ಲಿ ಇಪ್ಪತ್ತು ಯೋಧರು ಪ್ರಾಣ ತ್ಯಾಗ ಮಾಡಿದ ನಂತರ ಚೀನಾ ಉತ್ಪನ್ನ ಮತ್ತು ಆಪ್ ಗಳ ವಿರುದ್ಧ ದೇಶದಲ್ಲಿ ಸ್ವಯಂ ಪ್ರೇರಿತ ಸಮರ ಆರಂಭವಾಗಿತ್ತು. ಆ ಸಂದರ್ಭದಲ್ಲಿಯೇ ಒಲಿಂಪಿಕ್ ಅಸೋಸಿಯೇಷನ್ ಚೀನಾ ಬ್ರ್ಯಾಂಡ್ ಪ್ರಾಯೋಜಕತ್ವ ಕೈಬಿಡಯವ ವಿಚಾರ ಆರಂಭಿಸಿತ್ತು.
ನಮ್ಮ ದೇಶದ ಜನರ ಭಾವನೆಗಳು ನಮಗೆ ಗೊತ್ತು. ಹಾಗಾಗಿ ಚೀನಾ ಕಂಪನಿಯೊಂದಿಗಿನ ಸಂಬಂಧ ಕೊನೆ ಮಾಡಿದ್ದೇವೆ ಎಂದು ಅಸೋಸಿಯೇಷನ್ ಅಧ್ಯಕ್ಷ ನರಿಂದರ್ ಬಾತ್ರಾ ಮತ್ತು ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಮ್ಮ ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ಬ್ರ್ಯಾಂಡ್ ನೇಮ್ ಇಲ್ಲದ ಜರ್ಸಿ ಧರಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆದರೆ
ಲಿ ನಿಂಗ್ ಭಾರತದ ಪ್ರತಿನಿಧಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.