Asianet Suvarna News Asianet Suvarna News

ಟೋಕಿಯೋಗೆ ಹಾರಿದ ಭಾರತೀಯ ಪ್ಯಾರಾಲಿಂಪಿಕ್ಸ್‌ ತಂಡ

* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಟೋಕಿಯೋಗೆ ತೆರಳಿದ ಭಾರತೀಯ ಪ್ಯಾರಾಥ್ಲೀಟ್‌ಗಳು

* ಮೊದಲ ಹಂತದಲ್ಲಿ  8 ಸದಸ್ಯರನ್ನೊಳಗೊಂಡ ತಂಡ ಟೋಕಿಯೋ ಪ್ರಯಾಣ

* ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅದ್ಧೂರಿಯಾಗಿ ಬೀಳ್ಕೊಡುಗೆ

First batch of Indian athletes leaves for Tokyo Paralympics from New Delhi Airport kvn
Author
New Delhi, First Published Aug 19, 2021, 8:51 AM IST

ನವದೆಹಲಿ(ಆ.19): ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಅಥ್ಲೀಟ್‌ಗಳ ಮೊದಲ ತಂಡವು ಬುಧವಾರ(ಆ.18) ಟೋಕಿಯೋಗೆ ಪ್ರಯಾಣ ಬೆಳೆಸಿತು. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಈ ಬಾರಿ ಒಟ್ಟು 54 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಭಾರತದ ಧ್ವಜಧಾರಿ ಮರಿಯಪ್ಪನ್‌ ತಂಗವೇಲು, ಟೆಕ್‌ ಚಾಂದ್‌, ವಿನೋದ್‌ ಕುಮಾರ್‌ ಸೇರಿದಂತೆ 8 ಮಂದಿ ಸದಸ್ಯರ ತಂಡವನ್ನು ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಲಾಯಿತು. ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌) ಹಾಗೂ ಭಾರತ ಪ್ಯಾರಾಲಿಂಪಿಕ್‌ ಸಮಿತಿ(ಪಿಸಿಐ) ಅಧಿಕಾರಿಗಳು ಕ್ರೀಡಾಪಟುಗಳನ್ನು ಬೀಳ್ಕೊಟ್ಟರು.

ನೀವೆಲ್ಲರೂ ರೋಲ್ ಮಾಡೆಲ್ಸ್‌: ಪ್ಯಾರಾಥ್ಲೀಟ್‌ಗಳನ್ನು ಹುರಿದುಂಬಿಸಿದ ಪ್ರಧಾನಿ ಮೋದಿ

‘ಪ್ರಧಾನ ಮಂತ್ರಿ, ಕ್ರೀಡಾ ಸಚಿವರು ಸೇರಿದಂತೆ ಇಡೀ ದೇಶವೇ ನಮ್ಮನ್ನ ಹುರಿದುಂಬಿಸಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ನೀವೆಲ್ಲಾ ವಿಜೇತರು. ನಿಮಗೆಲ್ಲಾ ಶುಭವಾಗಲಿ’ ಎಂದು ಪಿಸಿಐ ಅಧ್ಯಕ್ಷೆ ದೀಪಾ ಮಲಿಕ್‌ ಈ ವೇಳೆ ವಿಶ್ವಾಸದ ನುಡಿಗಳನ್ನಾಡಿದರು. ಇದೇ 24ರಿಂದ ಪ್ಯಾರಾಲಿಂಪಿಕ್ಸ್‌ ಕೂಟ ಆರಂಭಗೊಳ್ಳಲಿದೆ.

ವೀಲ್‌ಚೇರ್‌ ಬಳಸುವ ಅಥ್ಲೀಟ್‌ಗಳಿಗೆ ಇದೇ ಮೊದಲ ಬಾರಿಗೆ ಪಿಸಿಐನ ಪಾಲುದಾರ ಸಂಸ್ಥೆಯಾದ ಸ್ವಯಂ ಇಂಡಿಯಾ ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. ಟೆಕ್‌ ಚಾಂದ್‌, ಹರ್ಯಾಣದ ರವಾರಿಯಿಂದ, ದೀಪಾ ಮಲಿಕ್‌ ನೋಯ್ಡಾದಿಂದ ಇದೇ ವಾಹನಗಳ ಮುಖಾಂತರ ವಿಮಾನ ನಿಲ್ದಾಣ ತಲುಪಿದರು.

Follow Us:
Download App:
  • android
  • ios