* ಪ್ಯಾರಾ ಶೂಟಿಂಗ್ ವಿಶ್ವಕಪ್ ಟೂರ್ನಿಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಅವನಿ ಲೇಖರಾ
* ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಅವನಿ ಲೇಖರಾ ವಿಶ್ವದಾಖಲೆ
* ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ಪ್ರಕಟಿಸಿದ್ದ ಸುದ್ದಿಗೆ ಕನ್ನಡದಲ್ಲೇ ಧನ್ಯವಾದ ಅರ್ಪಿಸಿದ ಅವನಿ
Sports Jun 9, 2022, 12:29 PM IST
ಈ ಸಾಲಿನಲ್ಲಿ ಒಟ್ಟು 9 ಕ್ರೀಡಾ ಸಾಧಕರು ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಈ ಪೈಕಿ ನಾಲ್ವರು ಟೋಕಿಯೋ ಪ್ಯಾರಾಲಿಂಪಿಕ್ಸ್ ಪದಕ ವಿಜೇತರೂ ಸೇರಿದ್ದಾರೆ. ಇವುಗಳ ಪೈಕಿ ದೇಶದ ಮೂರನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಗೆ ದೇವೇಂದ್ರ ಪಾತ್ರರಾಗಿದ್ದಾರೆ.
OTHER SPORTS Mar 22, 2022, 8:59 AM IST
ಬ್ಯಾಡ್ಮಿಂಟನ್ ತಾರೆ ಪ್ರಮೋದ್ ಭಗತ್, ಶೂಟರ್ ಮನೀಶ್ ನರ್ವಾಲ್, ಹೈಜಂಪ್ ಪಟು ಶರದ್ ಕುಮಾರ್ ಹಾಗೂ ಜಾವೆಲಿನ್ ಎಸೆತಗಾರ ಸುಂದರ್ ಸಿಂಗ್ ಗುರ್ಜರ್ ಹೆಸರು ಖೇಲ್ ರತ್ನ ಪ್ರಶಸ್ತಿಗೆ, ಶೂಟರ್ ಅವನಿ ಲೇಖರಾ ಹಾಗೂ ಜಾವೆಲಿನ್ ಎಸೆತಗಾರ ಸುಮಿತ್ ಅಂತಿಲ್ ಹೆಸರು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. I ಈ ಬಾರಿಯ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪ್ಯಾರಾಥ್ಲೀಟ್‌ಗಳು ಒಟ್ಟು 19 ಪದಕಗಳನ್ನು ಜಯಿಸಿ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿದ್ದರು.
OTHER SPORTS Sep 19, 2021, 9:08 AM IST
2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದಿಂದ ಒಟ್ಟು 19 ಪ್ಯಾರಾಥ್ಲೀಟ್‌ಗಳು ಪಾಲ್ಗೊಂಡಿದ್ದರು. ಈ ಬಾರಿ ಭಾರತೀಯ ಕ್ರೀಡಾಪಟುಗಳು ಒಟ್ಟು 19 ಪದಕಗಳನ್ನು ಜಯಿಸಿದ್ದಾರೆ. ಮಾನವ ಚೈತನ್ಯ ಎಲ್ಲದಕ್ಕಿಂತ ದೊಡ್ಡದು ಎನ್ನುವುದನ್ನು ನೀವೆಲ್ಲಾ ಸಾಬೀತು ಮಾಡಿದ್ದೀರ ಎಂದು ಪದಕ ವಿಜೇತರನ್ನು ಸನ್ಮಾನಿಸಿದ ಕ್ರೀಡಾಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
OTHER SPORTS Sep 9, 2021, 9:29 AM IST
ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಅದ್ಭುತ ಸಾಧನೆ ಮಾಡಿದ್ದು, 5 ಚಿನ್ನ, 8 ಬೆಳ್ಳಿ ಸೇರಿದಂತೆ 19 ಪದಕಗಳನ್ನು ಗೆಲ್ಲುವ ಮೂಲಕ ನೂತನ ಇತಿಹಾಸ ರಚಿಸಿದ್ದಾರೆ. ಟೋಕಿಯೋದಿಂದ ಹಿಂದಿರುಗಿದ ಕ್ರೀಡಾಪಟುಗಳನ್ನು ಗುರುವಾರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.
Olympics Sep 7, 2021, 9:15 AM IST
Olympics Sep 5, 2021, 9:36 PM IST
ಬ್ಯಾಡ್ಮಿಂಟನ್ ಎಸ್‌ಎಲ್4 ವಿಭಾಗದಲ್ಲಿ ಕರ್ನಾಟಕ ಮೂಲದ, ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್ ಫೈನಲ್ ಪ್ರವೇಶಿಸಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕ ಮೂಲದ ಐಎಎಸ್ ಅಧಿಕಾರಿಯಾಗಿರುವ ಸುಹಾಸ್ ವಿಶ್ವದ ನಂಬರ್ ಒನ್ ಆಟಗಾರ ಫ್ರಾನ್ಸ್ನ ಲೂಕಸ್ ಮಜೂರ್ ವಿರುದ್ಧ ವಿಶ್ವದ ನಂಬರ್ 3 ಆಟಗಾರ ಸುಹಾಸ್ 1-2 ಸೆಟ್ಗಳ ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿಗೆ ಕೊರಳೊಡ್ಡಿದ್ದಾರೆ. ಸುಹಾಸ್ ಅವರ ತಾಯಿ ಸಂತಸ ಹಂಚಿಕೊಂಡಿದ್ದಾರೆ.. ಮಗನಿಗೆ ಕ್ರಿಕೆಟ್ ನಲ್ಲಿ ವಿಶೇಷ ಆಸಕ್ತಿ ಇತ್ತು ನಂತರ ಈ ಕಡೆ ಮುಖ ಮಾಡಿದರು ಎಂದು ಹಳೆಯ ದಿನಗಳನ್ನು ಮೆಲಕು ಹಾಕಿದರು .
Olympics Sep 5, 2021, 5:10 PM IST
* ಭಾರತದ ಪಾಲಿಗೆ ಮತ್ತೊಂದು ಚಿನ್ನ ಗೆದ್ದು ಕೊಟ್ಟ ಕೃಷ್ಣಾ ನಾಗರ್
* ಎಸ್‌ಎಚ್ 6 ಫೈನಲ್ ಪಂದ್ಯದಲ್ಲಿ ಚಿನ್ನ ಬೇಟೆಯಾಡಿದ ನಾಗರ್
* ಪ್ಯಾರಾಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 19 ನೇ ಪದಕ
Olympics Sep 5, 2021, 11:15 AM IST
* ಎಸ್‌ಎಲ್4 ವಿಭಾಗದಲ್ಲಿ ಬೆಳ್ಳಿ ಗೆದ್ದ ಕರ್ನಾಟಕ ಮೂಲದ ಸುಹಾಸ್
* ಟೋಕಿಯೋ ಪ್ಯಾರಾಒಲಿಂಪಿಕ್ಸ್ ಕೂಟದಲ್ಲಿ ಭಾರತದ ಮಿಂಚಿನ ಪ್ರದರ್ಶನ
* ಪ್ಯಾರಾಒಲಿಂಪಿಕ್ಸ್‌ನಲ್ಲಿ ಪದಕ ಮೊದಲ IAS ಅಧಿಕಾರಿ
Olympics Sep 5, 2021, 8:40 AM IST
ಶೂಟಿಂಗ್‌ನ 50 ಮೀಟರ್ ರೈಫಲ್ಸ್ ಸ್ಪರ್ಧೆಯಲ್ಲಿ 19 ವರ್ಷದ ಮನೀಶ್ ನರ್ವಾಲ್ 218.2 ಅಂಕಗಳನ್ನು ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಇದೇ ಸ್ಪರ್ಧೆಯಲ್ಲಿ ಸಿಂಗ್‌ರಾಜ್ 216.7 ಅಂಕಗಳನ್ನು ಗಳಿಸುವ ಮೂಲಕ ಬೆಳ್ಳಿ ಪದಕ ಜಯಿಸಿದ್ದರು.
Olympics Sep 4, 2021, 5:25 PM IST
ಮೊದಲ ಗೇಮ್‌ನ ಆರಂಭದಲ್ಲೇ ಪ್ರಮೋದ್ ಭಗತ್ ಹಾಗೂ ಡೇನಿಯಲ್ ಬೆಥನಿಲ್ ನಡುವೆ 6-6 ಅಂಕಗಳ ಸಮಬಲದ ಹೋರಾಟ ಕಂಡು ಬಂದಿತು. ಆ ಬಳಿಕ ಪ್ರಮೋದ್ ಕೊಂಚ ಆಕ್ರಮಣಕಾರಿ ಆಟ ಮೈಗೂಡಿಸಿಕೊಂಡು, ನಿರಂತರವಾಗಿ ಅಂಕಗಳನ್ನು ಗಳಿಸುತ್ತಲೇ ಮುನ್ನಡೆದರು. ಪರಿಣಾಮ 21-14 ಅಂಕಗಳಿಂದ ಭಗತ್ ಮೊದಲ ಗೇಮ್ ತಮ್ಮದಾಗಿಸಿಕೊಂಡರು.
Olympics Sep 4, 2021, 4:28 PM IST
ಹರಾರಯಣದ ಕೈಥಲ್ ಎಂಬಲ್ಲಿ 1991ರಲ್ಲಿ ಹರ್ವಿಂದರ್ ಸಿಂಗ್ ಜನಿಸಿದರು. ಅವರಿಗೆ ಒಂದೂವರೆ ವರ್ಷವಿದ್ದಾಗ ಡೆಂಘಿ ಜ್ವರಕ್ಕೆ ನೀಡಿದ ಚುಚ್ಚು ಮದ್ದಿನ ಅಡ್ಡ ಪರಿಣಾಮದಿಂದಾಗಿ ಅವರ ಕಾಲುಗಳು ಶಕ್ತಿ ಕಳೆದುಕೊಂಡವು. ಇದರಿಂದ ಅವರು ಸರಿಯಾಗಿ ನಡೆದಾಡಲು ಕಷ್ಟ ಪಡಬೇಕಾಯಿತು. ಓದಿನಲ್ಲಿ ಮುಂದಿದ್ದ ಹರ್ವಿಂದರ್, ಕ್ರೀಡೆಯಲ್ಲೂ ಅಪಾರ ಆಸಕ್ತಿ ಹೊಂದಿದ್ದರು.
Olympics Sep 4, 2021, 3:30 PM IST
ಉತ್ತರಪ್ರದೇಶದ ನೋಯ್ಡಾದ ಪ್ರವೀಣ್‌ರ ಕಾಲಿನ ಅಳತೆಯಲ್ಲಿ ಹುಟ್ಟುವಾಗಲೇ ವ್ಯತ್ಯಾಸ ಕಂಡುಬಂದಿತ್ತು. ಮೊದಲು ವಾಲಿಬಾಲ್ ಆಡುತ್ತಿದ್ದ ಅವರು 2019ರಲ್ಲಿ ಪ್ಯಾರಾ ಅಥ್ಲೀಟ್ ಆಗುವುದು ಹೇಗೆ ಎನ್ನುವುದನ್ನು ಗೂಗಲ್‌ನಲ್ಲಿ ಹುಡುಕಿ ತಿಳಿದುಕೊಂಡಿದ್ದರು.
Olympics Sep 4, 2021, 3:00 PM IST
ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ 19 ವರ್ಷದ ಮನೀಶ್ ನರ್ವಾಲ್ 218.2 ಅಂಕಗಳನ್ನು ಗಳಿಸುವ ಮೂಲಕ ಪ್ಯಾರಾಲಿಂಪಿಕ್ಸ್ ರೆಕಾರ್ಡ್‌ನೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇನ್ನು ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದ 38 ವರ್ಷದ ಸಿಂಗ್‌ರಾಜ್ ಅಧಾನ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಗ್‌ರಾಜ್ 216.7 ಅಂಕಗಳನ್ನು ಗಳಿಸುವ ಮೂಲಕ ಬೆಳ್ಳಿ ಪದಕವನ್ನು ಮುತ್ತಿಕ್ಕಿದ್ದಾರೆ.
Olympics Sep 4, 2021, 9:58 AM IST
ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಆರ್ಚರಿ ಪಟು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಕೊರಿಯಾದ ಪ್ರತಿಸ್ಪರ್ಧಿ ಎದುರು 6-5 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
Olympics Sep 3, 2021, 6:28 PM IST