ಚಿನ್ನದ ಹುಡುಗನಿಗೆ ರಕ್ಷಣಾ ಸಚಿವರಿಂದ ಸನ್ಮಾನ; ಕ್ರೀಡಾಂಗಣಕ್ಕೆ ನೀರಜ್ ಚೋಪ್ರಾ ಹೆಸರು!
- ಟೋಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ
- ಸುಬೇದಾರ್ ನೀರಜ್‌ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸನ್ಮಾನ
- ಪುಣೆಯ ಸೇನಾ ಕ್ರೀಡಾಂಗಣಕ್ಕೆ ನೀರಜ್ ಚೋಪ್ರಾ ಹೆಸರಿಟ್ಟ ರಾಜನಾಥ್
ಪುಣೆ(ಆ.27): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ನೀರಜ್ ಚೋಪ್ರಾಗೆ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಇಲಾಖೆ ಸೇರಿದಂತೆ ಹಲವರು ಸನ್ಮಾನಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿ ಕರ್ತವ್ಯ ಸಲ್ಲಿಸುತ್ತಿರುವ ನೀರಜ್ ಚೋಪ್ರಾಗೆ ಇದೀಗ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಸನ್ಮಾನಿಸಿದ್ದಾರೆ.
ನಿಮ್ಮ ಪ್ರಚಾರಕ್ಕಾಗಿ ನಮ್ಮ ಭಾವನೆಗಳಿಗೆ ಧಕ್ಕೆ ಮಾಡಬೇಡಿ: ನೀರಜ್ ಚೋಪ್ರಾ ಮನವಿ..!
ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸಿಸ್ಟಿಟ್ಯೂಟ್ ಕ್ರೀಡಾಂಗಣದಲ್ಲಿ(ASI) ಆಯೋಜಿಸಿದ್ದ ಸಮಾರಂಭದಲ್ಲಿ ರಾಜನಾಥ್ ಸಿಂಗ್, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ ನೀರಜ್ ಚೋಪ್ರಾರನ್ನು ಸನ್ಮಾನಿಸಿದರು. ಇದೇ ವೇಳೆ ಪುಣೆಯ ASI ಕ್ರೀಡಾಂಗಣಕ್ಕೆ ಮರುನಾಮಕರಣ ಮಾಡಲಾಗಿದೆ.
ನೀರಜ್ ಚೋಪ್ರಾಗೆ ಗೌರವ ನೀಡುವ ಸಲುವಾಗಿ ASI ಹೆಸರಿನ ಬದಲು ಇದೀಗ ನೀರಜ್ ಚೋಪ್ರಾ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿದೆ. ಈ ಕುರಿತು ರಾಜನಾಥ್ ಸಿಂಗ್ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ದೇಶಕ್ಕೆ ಕೀರ್ತಿ ತಂದ ನೀರಜ್ ನಮ್ಮ ಹೆಮ್ಮೆ. ಮುಂದಿನ ದಿನದಲ್ಲಿ ನೀರಜ್ ಚೋಪ್ರಾ ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದು ಆಶಿಸಿದ್ದಾರೆ.
ಕೋಚ್ ಕಾಶೀನಾಥ್ ಮನೆಗೆ ಭೇಟಿಕೊಟ್ಟ ಚಿನ್ನದ ಹುಡುಗ ನೀರಜ್ ಚೋಪ್ರಾ
ಇತ್ತೀಚೆಗೆ ಭಾರತೀಯ ಸೇನೆಯ ರಜಪೂತ್ ರೈಫೈಲ್ಸ್ ಬೆಟಾಲಿಯನ್ ನೀರಜ್ ಚೋಪ್ರಾಗೆ ಸನ್ಮಾನ ಮಾಡಿತ್ತು. ಭಾರತೀಯ ಸೇನಾ ಮುಖ್ಯಸ್ಥ ಎಂಎಂ ನರವಾನೆ ಖುದ್ದು ನೀರಜ್ ಚೋಪ್ರಾ ಭೇಟಿಯಾಗಿ ಸನ್ಮಾನಿಸಿದ್ದರು.
ASI ಸಾಧನೆ
ಪುಣೆಯ ASI ಕ್ರೀಡಾಂಗಣ(ನೀರಜ್ ಚೋಪ್ರಾ ಕ್ರೀಡಾಂಗಣ) ಭಾರತೀಯ ಕ್ರೀಡೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಇದುವರೆಗೆ ಈ ಕ್ರೀಡಾಂಗಣ 34 ಒಲಿಂಪಿಕ್ ಪಟುಗಳು, 22 ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರು, 21 ಏಷ್ಯನ್ ಗೇಮ್ಸ್ ಪದಕ ವಿಜೇತರು, 7 ಯೂಥ್ ಗೇಮ್ಸ್ ಪದಕ ವಿಜೇತರು ಹಾಗೂ 13 ಅರ್ಜುನ ಪ್ರಶಸ್ತಿ ವಿಜೇತರನ್ನು ನೀಡಿದ ಹಗ್ಗಳಿಕೆಗೆ ಪಾತ್ರವಾಗಿದೆ.
ಮೊಸಾಯಿಕ್ ಕಲಾವಿದನ ಕೈಯಲ್ಲಿ ಅರಳಿತು ಚಿನ್ನದ ಹುಡುಗ ನೀರಜ್ ಜೋಪ್ರಾ ಭಾವಚಿತ್ರ!
ನೀರಜ್ ಚೋಪ್ರಾ ಕೂಡ ಇದೇ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಜಾವಲಿನ್ ಎಸೆತದಲ್ಲಿ ಅದ್ವಿತೀಯ ಸಾಧನೆ ಮಾಡಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಕೂಟದ ಅಥ್ಲೀಟಿಕ್ಸ್ ವಿಭಾಗದಲ್ಲಿ ದೇಶಕ್ಕ ಚಿನ್ನದ ಪದಕ ತಂದುಕೊಟ್ಟ ಮೊದಲಿಗ ಅನ್ನೋ ಕೀರ್ತಿಗೆ ನೀರಜ್ ಪಾತ್ರರಾಗಿದ್ದಾರೆ.