ಮೊಸಾಯಿಕ್ ಕಲಾವಿದನ ಕೈಯಲ್ಲಿ ಅರಳಿತು ಚಿನ್ನದ ಹುಡುಗ ನೀರಜ್ ಜೋಪ್ರಾ ಭಾವಚಿತ್ರ!
- ಒಲಿಂಪಿಕ್ಸ್‌ನಲ್ಲಿ ಚಿನ್ನ ಗದ್ದ ನೀರಜ್ ಜೋಪ್ರಾಗೆ ಕಲಾವಿದನ ಗೌರವ
- ಮೊಸಾಯಿಕ್ ಕಲಾವಿದನ ಕೈಯಲ್ಲಿ ಅರಳಿತು ಚೋಪ್ರಾ ಭಾವಚಿತ್ರ
- ಸುಂದರ ಕಲಾಕೃತಿಗೆ ಮೆಚ್ಚುಗೆಯ ಮಹಾಪೂರ
ಮುಂಬೈ(ಆ.20): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಐತಿಹಾಸಿಕ ಸಾಧನೆಗೆ ದೇಶವೇ ಹೆಮ್ಮೆಪಟ್ಟಿದೆ. ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಇಲಾಖೆ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಕ್ರೀಡಾಪಟುಗಳನ್ನು ಸನ್ಮಾನಿಸಿದೆ. ಹಲವು ಸಂಘ ಸಂಸ್ಥೆಗಳು ಕ್ರೀಡಾಪಟುಗಳನ್ನು ಗೌರವಿಸಿದೆ. ಇದೀಗ ಮುಂಬೈನ ಮೊಸಾಯಿಕ್ ಕಲಾವಿದ, ಚಿನ್ನ ಗೆದ್ದ ನೀರಜ್ ಚೋಪ್ರಾ ಭಾವಚಿತ್ರವನ್ನು ಮೊಸಾಯಿಕ್‌ನಲ್ಲಿ ಬಿಡಿಸಿ ಗೌರವ ಸೂಚಿಸಿದ್ದಾರೆ.
ಅಥ್ಲಿಟಿಕ್ಸ್‌ನಲ್ಲಿ ಚಿನ್ನ ಅಸಾಧ್ಯ ಎಂದವರಿಗೆ ಈ ಪದಕ ಉತ್ತರ; ನೀರಜ್ ಚೋಪ್ರಾ Exclusive ಸಂದರ್ಶನ!
ಮುಂಬೈ ಮೂಲದ ಮೊಸಾಯಿಕ್ ಕಲಾವಿದ, ಅಂತಾರಾಷ್ಟ್ರೀಯ ಖ್ಯಾತಿಯ ಚೇತನ್ ರಾವತ್ ಇದೀಗ ನೀರಜ್ ಚೋಪ್ರಾಗೆ ಮೊಸಾಯಿಕ್ ಭಾವಚಿತ್ರ ಗೌರವ ಸಲ್ಲಿಸಿದ್ದಾರೆ. ಮೊಸಾಯಿಕ್ ಕಲ್ಲುಗಳಿಂದ ಜಾವಲಿನ್ ಎಸೆಯುತ್ತಿರುವ ನೀರಜ್ ಚೋಪ್ರಾ ಭಾವಚಿತ್ರವನ್ನು ಬಿಡಿಸಲಾಗಿದೆ.
ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತರಿಗೆ ಸನ್ಮಾನ; ಕ್ರೀಡಾಪಟುಗಳ ನೋಡಲು ಮುಗಿಬಿದ್ದ ಫ್ಯಾನ್ಸ್!
4X4 ಚದರ ಅಡಿಯ ನೀರಜ್ ಚೋಪ್ರಾ ಭಾವಚಿತ್ರಕ್ಕೆ 21,000 ಮೊಸಾಯಿಕ್ ಪುಶ್‌ಪಿನ್ಸ್ ಬಳಸಲಾಗಿದೆ. ಅತ್ಯಂತ ನಾಜೂಕಿನಿಂದ ಹಾಗೂ ತಾಳ್ಮೆಯಿಂದ ಒಂದೊಂದೆ ಪುಶ್‌ಪಿನ್ಸ್ ಬಳಕೆ ಮಾಡಿ ಈ ಭಾವಚಿತ್ರ ತಯಾರಿಸಲಾಗಿದೆ. ಇನ್ನು ಈ ಭಾವಚಿತ್ರವನ್ನು ನೀರಜ್ ಚೋಪ್ರಾಗೆ ಉಡುಗೊರೆಯಾಗಿ ನೀಡಲು ಮಾಡಿರುವುದಾಗಿ ಚೇತನ್ ರಾವತ್ ಹೇಳಿದ್ದಾರೆ.
ಟೋಕಿಯೋ ಒಲಿಂಪಿಕ್ಸ್:
ಪ್ರತಿಷ್ಠಿತ ಕ್ರೀಡಾಕೂಟದ ಫೈನಲ್ ಸುತ್ತಿನಲ್ಲಿ ನೀರಜ್ ಚೋಪ್ರಾ 87.58 ಮೀಟರ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದುಕೊಂಡರು. ಚೋಪ್ರಾ ಮೊದಲ ಸುತ್ತಿನಲ್ಲೇ 87.03 ಮೀಟರ್ ದೂರ ಎಸೆಯುವ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ಎರನೇ ಪ್ರಯತ್ನದಲ್ಲಿ 87.58 ಮೀಟರ್ ದೂರ ಎಸೆದಿದ್ದರು.