ಬೆಂಗಳೂರು(ಮಾ.22): ಮಾರಕ ಕೊರೋನಾ ವೈರಸ್‌ ಭೀತಿ ನಡುವೆಯೇ 2020ರ ಟೋಕಿಯೋ ಒಲಿಂಪಿಕ್ಸ್‌ ನಡೆಸಲು ಆಯೋಜಕರು ಮುಂದಾಗಿದ್ದಾರೆ. ಭಾರತ ಕೂಡಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಾಗಿ ತಿಳಿಸಿದೆ.

ಟೊಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತ ಮಹಿಳಾ ಹಾಕಿ! 

ಇದರ ನಡುವೆಯೇ ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಒಲಿಂಪಿಕ್ಸ್‌ಗೆ ಭರ್ಜರಿ ಸಿದ್ಧತೆಯಲ್ಲಿ ನಿರತವಾಗಿವೆ. ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಎರಡೂ ತಂಡಗಳು ತರಬೇತುದಾರರ ಮಾರ್ಗದರ್ಶನದಲ್ಲಿ ಕಠಿಣ ಅಭ್ಯಾಸದಲ್ಲಿ ನಿರತವಾಗಿವೆ. ಸಾಯ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಆಟಗಾರ ಹಾಗೂ ಆಟಗಾರ್ತಿಯರಿಗೆ ಥರ್ಮಲ್‌ ಸ್ಕ್ರೀನಿಂಗ್‌ನಿಂದ ಪ್ರತಿ ದಿನ ತಪಾಸಣೆ ನಡೆಸಲಾಗುತ್ತಿದ್ದು, ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ ಎಂದು ನಾಯಕ ಮನ್‌ಪ್ರೀತ್‌ ಸಿಂಗ್‌ ಹೇಳಿದ್ದಾರೆ.

ರಷ್ಯಾ ವಿರುದ್ದ ಭರ್ಜರಿ ಗೆಲುವು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಹಾಕಿ ಇಂಡಿಯಾ!

ಒಲಿಂಪಿಕ್ಸ್‌ಗಾಗಿ ಹೆಚ್ಚಿನ ತರಬೇತಿಯಲ್ಲಿ ನಿರತವಾಗಿದ್ದು, ಸಾಯ್‌ ಕೇಂದ್ರದ ಸಿಬ್ಬಂದಿಗಳು ಹಾಗೂ ಕೋಚ್‌ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ ಎಂದು ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌ ಹೇಳಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಜುಲೈ 25ರಂದು ಭಾರತ ಪುರುಷರ ತಂಡ ನ್ಯೂಜಿಲೆಂಡ್‌ ಸವಾಲನ್ನು ಎದುರಿಸಿದರೆ, ಮಹಿಳಾ ತಂಡ, ನೆದರ್‌ಲೆಂಡ್ಸ್‌ ಎದುರು ಸೆಣಸಲಿದೆ.