ನವದೆಹಲಿ(ಡಿ.23): ಭಾರತದ ಯುವ ಬಾಕ್ಸರ್‌ ನಿಖತ್‌ ಜರೀನ್‌ರ ಬೇಡಿಕೆಗೆ ಭಾರತೀಯ ಬಾಕ್ಸಿಂಗ್‌ ಫೆಡರೇಷನ್‌ ಮಣಿದಿದೆ. 6 ಬಾರಿ ವಿಶ್ವ ಚಾಂಪಿಯನ್‌ ಮೇರಿ ಕೋಮ್‌ ವಿರುದ್ಧ ಸ್ಪರ್ಧಿಸಲು ವೇದಿಕೆ ಸಿದ್ಧಪಡಿಸಿದೆ. 

2020ರ ಟೋಕಿಯೋ ಒಲಿಂಪಿಕ್ಸ್‌ನ ಮಹಿಳೆಯರ 51 ಕೆ.ಜಿ ಸ್ಪರ್ಧೆಯಲ್ಲಿ ಭಾರತವನ್ನು ಯಾರು ಪ್ರತಿನಿಧಿಸಬೇಕು ಎನ್ನುವುದು ಆಯ್ಕೆ ಟ್ರಯಲ್ಸ್‌ ಮೂಲಕ ನಿರ್ಧಾರವಾಗಲಿದೆ. ಮೇರಿ ವಿರುದ್ಧ ಸೆಣಸಾಡಲು ಹಲವು ದಿನಗಳಿಂದ ನಿಖತ್‌ ಉತ್ಸುಕರಾಗಿದ್ದು, ಪಾರದರ್ಶಕವಾಗಿ ತಂಡದ ಆಯ್ಕೆ ನಡೆಸಲು ಬೇಡಿಕೆಯಿಡುತ್ತಾ ಬಂದಿದ್ದರು.

ಅಭಿನವ ಬಿಂದ್ರಾ ವಿರುದ್ಧ ಕಿಡಿಕಾರಿದ ಮೇರಿ ಕೋಮ್

ಡಿ.27ರಂದು ಇಲ್ಲಿನ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಆಯ್ಕೆ ಟ್ರಯಲ್ಸ್‌ ನಡೆಸಲು ನಿರ್ಧರಿಸಲಾಗಿದ್ದು 51 ಕೆ.ಜಿ ವಿಭಾಗದಲ್ಲಿ ಒಟ್ಟು ನಾಲ್ವರು ಬಾಕ್ಸರ್‌ಗಳನ್ನು ಆಯ್ಕೆ ಮಾಡಲಾಗಿದೆ. ಮೇರಿಗೆ ಮೊದಲ ರ‍್ಯಾಂಕ್‌ ನೀಡಲಾಗಿದ್ದು, ನಿಖತ್‌ 2ನೇ ರ‍್ಯಾಂಕ್‌ ಪಡೆದಿದ್ದಾರೆ. ಜ್ಯೋತಿ ಗುಲಿಯಾ ಹಾಗೂ ರಿತು ಗ್ರೆವಾಲ್‌ ಕ್ರಮವಾಗಿ 3 ಹಾಗೂ 4ನೇ ಸ್ಥಾನ ಪಡೆದಿದ್ದಾರೆ.

2020ರ ಫೆ.14ರಿಂದ ಪ್ರೊ ಕಬಡ್ಡಿ ಮಾದರಿಯಲ್ಲಿ KPKL ಟೂರ್ನಿ

ಮೊದಲ ಸುತ್ತಿನಲ್ಲಿ ಮೇರಿಗೆ ರಿತು ಎದುರಾಗಲಿದ್ದು, ನಿಖತ್‌ಗೆ ಜ್ಯೋತಿ ಸವಾಲೆಸೆಯಲಿದ್ದಾರೆ. ಆರಂಭಿಕ ಸುತ್ತಿನಲ್ಲಿ ಜಯಿಸಿದರೆ, ಮೇರಿ ಹಾಗೂ ನಿಖತ್‌ ನಡುವೆ ಫೈನಲ್‌ ಪೈಪೋಟಿ ನಡೆಯಲಿದೆ. ಆ ಪಂದ್ಯದಲ್ಲಿ ಗೆಲ್ಲುವವರು ಫೆ.3ರಿಂದ 14ರ ವರೆಗೂ ಚೀನಾದ ವುಹಾನ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಅರ್ಹತಾ ಸುತ್ತಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.