Asianet Suvarna News Asianet Suvarna News

ಅಭಿನವ ಬಿಂದ್ರಾ ವಿರುದ್ಧ ಕಿಡಿಕಾರಿದ ಮೇರಿ ಕೋಮ್

ಭಾರತೀಯ ಬಾಕ್ಸರ್’ಗಳಾದ ಮೇರಿ ಕೋಮ್-ನಿಖತ್‌ ಜರೀನ್‌ ವಿವಾದದಲ್ಲಿ ಮಧ್ಯ ಪ್ರವೇಶಿಸಿದ್ದ ಒಲಿಂಪಿಕ್ ಪದಕ ವಿಜೇತ ಅಭಿನವ್ ಬಿಂದ್ರಾ ವಿರುದ್ಧ ಮೇರಿ ಕಿಡಿಕಾರಿದ್ದಾರೆ. ಈ ವಿವಾದದ ಒಂದು ಪಕ್ಷಿ ನೋಟ ಇಲ್ಲಿದೆ ನೋಡಿ...

It is not his business Boxer Mary Kom replies to shooter Abhinav Bindra on Nikhat Zareen controversy
Author
New Delhi, First Published Oct 20, 2019, 1:04 PM IST

ನವದೆಹಲಿ[ಅ.20]: ನಿಖತ್‌ಗೆ ಸಾಮರ್ಥ್ಯ ಸಾಬೀತು ಪಡಿ​ಸಲು ಅವ​ಕಾಶ ನೀಡ​ಬೇಕು ಎಂದಿದ್ದ ಒಲಿಂಪಿಕ್ಸ್‌ ಚಿನ್ನ ವಿಜೇತ ಶೂಟರ್‌ ಅಭಿ​ನವ್‌ ಬಿಂದ್ರಾ ವಿರುದ್ಧ ಮೇರಿ ಕೋಮ್‌ ಕಿಡಿ​ಕಾ​ರಿ​ದ್ದಾರೆ. 

‘ಬಿಂದ್ರಾಗೆ ಬಾಕ್ಸಿಂಗ್‌ ಬಗ್ಗೆ ಏನು ಗೊತ್ತು. ಬಾಕ್ಸಿಂಗ್‌ನಲ್ಲಿ ಅಂಕ ಹೇಗೆ ಗಳಿ​ಸು​ತ್ತಾರೆ ಎನ್ನು​ವುದು ಅವ​ರಿಗೆ ಗೊತ್ತಿಲ್ಲ. ಅನ​ವ​ಶ್ಯ​ಕ​ವಾಗಿ ಅವರು ಮೂಗು ತೂರಿ​ಸ​ಬಾ​ರದು. ನಾನು ಶೂಟಿಂಗ್‌ ಬಗ್ಗೆ ಮಾತ​ನಾ​ಡಿ​ದ್ದೇ​ನಾ. ಶೂಟಿಂಗ್‌ನಲ್ಲಿ ಪ್ರತಿ ಬಾರಿಯೂ ಆಯ್ಕೆ ಟ್ರಯಲ್ಸ್‌ ಇರು​ತ್ತ​ದೆ​ಯೇ’ ಎಂದು ಮೇರಿ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದಾರೆ.

ಪ್ರೊ ಕಬಡ್ಡಿ ಫೈನಲ್: ಬೆಂಗಾಲ್ ವಾರಿಯರ್ಸ್ ಚಾಂಪಿಯನ್

ನಿಖತ್‌ ಜರೀನ್‌ ಯಾರೆಂದೇ ಗೊತ್ತಿಲ್ಲ..!

ಭಾರ​ತೀಯ ಬಾಕ್ಸಿಂಗ್‌ನಲ್ಲಿ ಹೊಸ ವಿವಾದ ತಲೆ ಎತ್ತಿದೆ. ದಿಗ್ಗಜ ಬಾಕ್ಸರ್‌ ಮೇರಿ ಕೋಮ್‌ ಹಾಗೂ ಯುವ ಬಾಕ್ಸರ್‌ ನಿಖತ್‌ ಜರೀನ್‌ ನಡು​ವಿನ ಕಿತ್ತಾಟ ತಾರ​ಕ​ಕ್ಕೇ​ರಿದೆ. 

ಒಲಿಂಪಿಕ್ಸ್‌ ಅರ್ಹತಾ ಸುತ್ತಿಗೆ ಆಯ್ಕೆ ಟ್ರಯಲ್ಸ್‌ ನಡೆ​ಸು​ವಂತೆ ಜರೀನ್‌ ಒತ್ತಾ​ಯಿ​ಸು​ತ್ತಿದ್ದು, 51 ಕೆ.ಜಿ ವಿಭಾ​ಗ​ದಲ್ಲಿ ಮೇರಿಗೆ ನೇರ ಪ್ರವೇಶವನ್ನು ಪ್ರಶ್ನಿ​ಸಿ​ದ್ದಾರೆ. ಇದ​ಕ್ಕಾಗಿಯೇ ನಿಖತ್‌, ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜುಗೂ ಪತ್ರ ಬರೆ​ದಿ​ದ್ದರು. ಶನಿ​ವಾರ ಮೇರಿ ಈ ವಿವಾದವನ್ನು ಮತ್ತೊಂದು ಹೆಜ್ಜೆ ಮುಂದಕ್ಕೆ ಕೊಂಡೊ​ಯ್ದಿ​ದ್ದಾರೆ.

ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಕಂಚು ಗೆದ್ದ ಮೇರಿ ಕೋಮ್

ಮಾಧ್ಯ​ಮ​ಗಳ ಪ್ರಶ್ನೆಗೆ ಉತ್ತ​ರಿ​ಸುವ ವೇಳೆ ಮೇರಿ, ‘ಜ​ರೀನ್‌ ಯಾರೆಂದೇ ನನಗೆ ಗೊತ್ತಿಲ್ಲ. ನಾನು ವಿಶ್ವ ಚಾಂಪಿ​ಯ​ನ್‌ಶಿಪ್‌ನಲ್ಲಿ 6 ಚಿನ್ನ ಸೇರಿ 8 ಪದಕ ಗೆದ್ದಿದ್ದೇನೆ. ಯಾರು ಬೇಕು ಎನ್ನು​ವು​ದನ್ನು ಬಾಕ್ಸಿಂಗ್‌ ಫೆಡ​ರೇ​ಷನ್‌ ನಿರ್ಧ​ರಿ​ಸಲಿ. ಆಕೆಯನ್ನು ಎದು​ರಿ​ಸಲು ನನ​ಗೇನು ಭಯ​ವಿಲ್ಲ. ಟ್ರಯಲ್ಸ್‌ ಒಂದು ಔಪ​ಚಾ​ರಿಕ ಪಂದ್ಯ​ವಾ​ಗ​ಲಿದೆ ಅಷ್ಟೆ. ಆಕೆ ಅವ​ಕಾ​ಶ​ಕ್ಕಾಗಿ ಈ ರೀತಿ ಅಳು​ವುದು ಎಷ್ಟು ಸರಿ. ಆಕೆಯನ್ನು ನಾನು ಹಲವು ಬಾರಿ ಸೋಲಿ​ಸಿ​ದ್ದೇನೆ. ಆದರೂ ಮತ್ತೆ ಮತ್ತೆ ಈ ರೀತಿ ಸವಾಲು ಹಾಕು​ತ್ತಿ​ದ್ದಾಳೆ’ ಎಂದು ಮೇರಿ ಹೇಳಿ​ದ್ದಾರೆ.

ನಿಖತ್‌-ಮೇರಿ ವಿವಾ​ದ: ಮಧ್ಯ​ಸ್ಥಿಕೆ ಇಲ್ಲ: ರಿಜಿ​ಜು

ಒಲಿಂಪಿಕ್‌ ಅರ್ಹತಾ ಸುತ್ತಿ​ಗೆ ತಂಡ ಆಯ್ಕೆ ಮಾಡು​ವ ಮೊದಲು ಮೇರಿ ಕೋಮ್‌ ವಿರುದ್ಧ ಟ್ರಯಲ್ಸ್‌ ಪಂದ್ಯ​ವಾ​ಡಿ​ಬೇಕು ಎಂದು ಯುವ ಬಾಕ್ಸರ್‌ ನಿಖತ್‌ ಜರೀನ್‌ ಬರೆ​ದಿದ್ದ ಪತ್ರಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಉತ್ತ​ರಿ​ಸಿ​ದ್ದಾರೆ. ಈ ಪ್ರಕ​ರಣದಲ್ಲಿ ಮಧ್ಯ​ಸ್ಥಿಕೆ ವಹಿ​ಸಲು ಸಾಧ್ಯ​ವಿಲ್ಲ ಎಂದು ರಿಜಿಜು ಸ್ಪಷ್ಟ​ಪ​ಡಿ​ಸಿದ್ದಾರೆ. 

‘ಒ​ಲಿಂಪಿಕ್‌ ಸಂಸ್ಥೆ ನಿಯ​ಮದ ಪ್ರಕಾರ ಸ್ವತಂತ್ರ ಸಂಸ್ಥೆಗಳ ಆಯ್ಕೆ ವಿಚಾರದಲ್ಲಿ ಸರ್ಕಾರ ತಲೆ ಹಾಕು​ವಂತಿಲ್ಲ. ಹೀಗಾಗಿ ಮಧ್ಯ​ಸ್ಥಿಕೆ ವಹಿ​ಸಲು ಸಾಧ್ಯ​ವಿಲ್ಲ. ಆದರೆ ಸೂಕ್ತ ನಿರ್ಧಾರ ಕೈಗೊ​ಳ್ಳು​ವಂತೆ ಭಾರ​ತೀಯ ಬಾಕ್ಸಿಂಗ್‌ ಫೆಡ​ರೇ​ಷನ್‌ ಬಳಿ ಕೇಳಿ​ಕೊ​ಳ್ಳು​ತ್ತೇನೆ’ ಎಂದು ರಿಜಿಜು ಹೇಳಿ​ದ್ದಾರೆ. 

ಮೇರಿ ಸ್ಪರ್ಧಿ​ಸುವ 51 ಕೆ.ಜಿ ವಿಭಾ​ಗ​ದ​ಲ್ಲೇ ಜರೀನ್‌ ಸಹ ಸ್ಪರ್ಧಿ​ಸ​ಲಿದ್ದು, ಭಾರತ ತಂಡ​ದಲ್ಲಿ ಸ್ಥಾನ​ಕ್ಕಾಗಿ ಇಬ್ಬರ ನಡುವೆ ಹಲ​ವು ದಿನ​ಗ​ಳಿಂದ ಪೈಪೋಟಿ ಇದೆ. ಮೇರಿ ತಾರಾ ಬಾಕ್ಸರ್‌ ಆಗಿ​ರುವ ಕಾರಣ, ಅವ​ರಿಗೆ ಅವ​ಕಾಶ ಸಿಗು​ತ್ತಿದೆ ಎಂದು ಜರೀನ್‌ ಆರೋ​ಪಿ​ಸಿ​ದ್ದಾರೆ.

Follow Us:
Download App:
  • android
  • ios