ಪಾಕಿಸ್ತಾನ ಅರ್ಶದ್‌ಗೆ ಜಾವಲಿನ್ ಖರೀದಿಸಲು ಸಾಧ್ಯವಾಗುತ್ತಿಲ್ಲ ಅನ್ನೋದು ನಂಬಲು ಅಸಾಧ್ಯ, ನೀರಜ್ ಚೋಪ್ರಾ!
ವಿಶ್ವದ ನಂಬರ್ ಜಾವಲಿನ್ ಪಟು ನೀರಜ್ ಚೋಪ್ರಾಗೆ ಆನ್‌ಫೀಲ್ಡ್‌ನಲ್ಲಿ ಪ್ರತಿ ಭಾರಿ ಪ್ರತಿಸ್ಪರ್ಧೆ ಒಡ್ಡಿದ ಪ್ರಮುಖ ಪಟು ಪಾಕಿಸ್ತಾನದ ಅರ್ಶದ್ ನದೀಮ್. ಆದರೆ ಇದೇ ನದೀಮ್ ಹೊಸ ಜಾವಲಿನ್ ಖರೀದಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಈ ಮಾಹಿತಿ ತಿಳಿದ ನೀರಜ್ ಚೋಪ್ರಾ, ಅರ್ಶದ್ ಪರ ನಿಂತಿದ್ದಾರೆ.
ದೆಹಲಿ(ಮಾ.19) ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಇದೀಗ ತನ್ನ ಪ್ರಬಲ ಪ್ರತಿಸ್ಪರ್ಧಿ ಪಾಕಿಸ್ತಾನ ಅರ್ಶದ್ ನದೀಮ್ ಪರ ನಿಂತಿದ್ದಾರೆ. ಅರ್ಶದ್ ನದೀಮ್ ಜಾವಲಿನ್ ಖರೀದಿಸಲು ಪರದಾಡುತ್ತಿದ್ದಾರೆ ಅನ್ನೋದು ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ. ಅರ್ಶದ್ ಚಾಂಪಿಯನ್ ಜಾವಲಿನ್ ಪಟು. ನನಗೆ ಭಾರತ ಸರ್ಕಾರ ಹೇಗೆ ಬೆಂಬಲ ನೀಡುತ್ತಿದೆಯೋ ಅದೇ ರೀತಿ ಅರ್ಶದ್‌ಗೆ ಪಾಕಿಸ್ತಾನ ಸರ್ಕಾರ ಬೆಂಬಲ ನೀಡಬೇಕು ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.
ಸಂದರ್ಶನದಲ್ಲಿ ನೀರಜ್ ಚೋಪ್ರಾ ಈ ವಿಚಾರ ಬಹಿರಂಗಪಡಿಸಿದ್ದಾರೆ. ಪಾಕಿಸ್ತಾನದ ಅರ್ಶದ್ ನದೀಮ್ ಎಳೆಂಟು ವರ್ಷಗಳಿಂದ ಒಂದೇ ಜಾವಲಿನ್ ಬಳಕೆ ಮಾಡುತ್ತಿದ್ದಾರೆ. ಅಲ್ಲಿನ ಕ್ರೀಡಾ ಪ್ರಾಧಿಕಾರ, ಸಂಸ್ಥೆಗಳು ಹೊಸ ಜಾವಲಿನ್ ನೀಡಿಲ್ಲ. ಒರ್ವ ಚಾಂಪಿಯನ್ ಪಟುವಿಗೆ ಆತನಿಗೆ ಬೇಕಿರುವ ಕ್ರೀಡಾ ಸಲಕರಣೆ ಅತಿ ಅಗತ್ಯ. ಅತ್ಯಾಧುನಿಕ ಸಲಕರಣೆಗಳು ಇದ್ದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಆದರೆ ಎಳೆಂಟು ವರ್ಷದಿಂದ ಒಂದೇ ಜಾವಲಿನ್‌ನಲ್ಲಿ ಅರ್ಶದ್ ಅಭ್ಯಾಸ ಮಾಡಿದ್ದಾರೆ, ಜೊತೆಗೆ ಸ್ಪರ್ಧಯಲ್ಲಿ ಪಾಲ್ಗೊಂಡಿದ್ದಾರೆ. ಹೊಸ ಜಾವಲಿನ್ ಖರೀದಿಸಲು ಸಾಧ್ಯವಾಗದ ಪರಿಸ್ಥಿತಿಯನ್ನು ಊಹಿಸಲು ಅಸಾಧ್ಯ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.
ಸ್ವಿಜರ್‌ಲೆಂಡ್‌ನ ಜನಪ್ರಿಯ ಪ್ರವಾಸಿ ತಾಣದಲ್ಲಿ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಫೋಟೋ
ಇತ್ತೀಚೆಗೆ ಅರ್ಶದ್ ನದೀಮ್ ತಮ್ಮ ಸಂಕಷ್ಟದ ಕುರಿತು ಹೇಳಿಕೊಂಡಿದ್ದರು. ಮುಂದಿನ ಚಾಂಪಿಯನ್ ಟೂರ್ನಿಗೂ ಮೊದಲು ಹೊಸ ಜಾವಿಲನ್ ನೀಡುವಂತೆ ಮನವಿ ಮಾಡಿದ್ದರು. ಈ ಕುರಿತು ನೀರಜ್ ಚೋಪ್ರಾ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ಸರ್ಕಾರ ಅರ್ಶದ್ ನದೀಮ್ ಬೆಂಬಲ ನೀಡಬೇಕು. ಆತನಿಗೆ ಬೇಕಿರುವ ಜಾವಲಿನ್ ಸೇರಿದಂತೆ ಕ್ರೀಡಾ ಸಲಕರಣೆಗಳನ್ನು ನೀಡಬೇಕು ಎಂದು ನೀರಜ್ ಚೋಪ್ರಾ ಹೇಳಿದ್ದಾರೆ. ಹೊಸ ಜಾವಲಿನ್, ಕ್ರೀಡಾ ಸಲಕರಣೆಗಳನ್ನು ನೀಡುವುದು ದೊಡ್ಡ ವಿಚಾರವಲ್ಲ. ಇದು ಕ್ರೀಡಾ ಪ್ರಾಧಿಕಾರಿಗಳು,ಸಂಸ್ಥೆಗಳಿಗೆ ಸುಲಭದ ಕೆಲಸ. ಆದರೆ ಅದು ಪಾಕಿಸ್ತಾನದ ಅರ್ಶದ್ ನದೀಮ್‌ಗೆ ಸಿಗಲಿಲ್ಲ ಎಂದು ಚೋಪ್ರಾ ಹೇಳಿದ್ದಾರೆ.
ಚಾಂಪಿಯನ್ ಪಟು ಅರ್ಶದ್‌ಗೆ ಸ್ಥಳೀಯ ಕೆಲ ಪ್ರಾಯೋಜಕತ್ವಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದ ಪ್ರಾಯೋಜಕತ್ವದ ಅವಶ್ಯಕತೆ ಇದೆ. ಇದರ ಜೊತೆಗೆ ಸರ್ಕಾರದ ನೆರವೂ ಕೂಡ ಅಗತ್ಯ. ಅಂತಾರಾಷ್ಟ್ರೀಯ ಕಂಪನಿಗಳು ಅರ್ಶದ್‌ಗೆ ಪ್ರಾಯೋಜಕತ್ವ ನೀಡಬೇಕು ಎಂದು ನೀರಜ್ ಚೋಪ್ರಾ ಹೇಳಿದ್ದಾರೆ. ಜಾವಲಿನ್ ತಯಾಕರು ಅರ್ಶದ್‌ಗೆ ಪ್ರಾಯೋಜಕತ್ವ ನೀಡಲು ಹೆಚ್ಚು ಉತ್ಸುಕರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಚೋಪ್ರಾ ಹೇಳಿದ್ದಾರೆ.
ವಿಶ್ವಕಪ್ ಫೈನಲ್‌ನಲ್ಲಿ ಚಿನ್ನದ ಹುಡುಗನ ಕಡೆಗಣಿಸಿದ ಕ್ಯಾಮೆರಾ, ವಿವಾದಕ್ಕೆ ನೀರಜ್ ಚೋಪ್ರಾ ಪ್ರತಿಕ್ರಿಯೆ!
ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಕಿಸ್ತಾನಕ್ಕೆ 60 ವರ್ಷಗಳ ಬಳಿಕ ಚಿನ್ನದ ಪದಕ ತಂದುಕೊಟ್ಟ ಕೀರ್ತಿ ಅರ್ಶದ್ ನದೀಮ್‌ಗೆ ಇದೆ. 90.18m ಮೀಟರ್ ದೂರ ಎಸೆದು ವಿಶ್ವದಾಖಲೆ ನಿರ್ಮಿಸಿದ್ದ ಅರ್ಶದ್ ನದೀಮ್ ಪಾಕಿಸ್ತಾನ ಪ್ರತಿಭಾನ್ವಿತ ಪಟುವಾಗಿದ್ದಾರೆ. ಪ್ರತಿ ಬಾರಿ ನೀರಜ್ ಚೋಪ್ರಾ ಹಾಗೂ ಅರ್ಶದ್ ನದೀಮ್ ಅಂತಿಮಸುತ್ತಿನಲ್ಲಿ ಪೈಪೋಟಿ ನಡೆಸುತ್ತಾರೆ.