ದೋಹಾ[ನ.12]: 14ನೇ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಶೂಟರ್‌ಗಳ ಪದಕದ ಬೇಟೆ ಮುಂದುವರೆದಿದೆ. ಸೋಮವಾರ ನಡೆದ ಪುರುಷರ 10ಮೀ. ಏರ್ ಪಿಸ್ತೂಲ್‌ನಲ್ಲಿ ಭಾರತದ ಯುವ ಶೂಟರ್ ಸೌರಭ್ ಚೌಧರಿ ಬೆಳ್ಳಿ ಪದಕ ಗೆದ್ದರು. 17 ವರ್ಷ ವಯಸ್ಸಿನ ವಿಶ್ವಕಪ್ ಮತ್ತು ಏಷ್ಯನ್ ಗೇಮ್ಸ್ ಚಿನ್ನ ವಿಜೇತ ಸೌರಭ್ 244.5 ಅಂಕಗಳಿಸಿದರು.

ಟೋಕಿಯೋಗೆ ಭಾರತದ 15 ಶೂಟರ್ಸ್; ರಿಜಿಜು ಅಭಿನಂದನೆ

ತಂಡಗಳ ಸ್ಪರ್ಧೆಯಲ್ಲಿ ಅಭಿಷೇಕ್ ವರ್ಮಾ ಮತ್ತು ಶರವಣ ಕುಮಾರ್ ಜೋಡಿ 1740 ಅಂಕಗಳಿಸಿ ಕಂಚಿನ ಪದಕ ಗೆದ್ದಿತು. ಕಿರಿಯರ ವಿಭಾಗದ 10 ಮೀ. ಏರ್ ರೈಫಲ್ ಮಿಶ್ರ ತಂಡಗಳ ಸ್ಪರ್ಧೆಯಲ್ಲಿ ಶ್ರೇಯಾ ಅಗರ್‌ವಾಲ್ ಮತ್ತು ಧನುಷ್ ಶ್ರೀಕಾಂತ್ ಚಿನ್ನದ ಪದಕ ಗೆದ್ದರು. ಸ್ಕೀಟ್ ಸ್ಪರ್ಧೆಯಲ್ಲಿ ಗುರ್ ನಿಹಾಲ್ ಗುರ್ಚಾ, ಅಭಯ್ ಸಿಂಗ್ ಮತ್ತು ಆಯುಷ್ ರುದ್ರರಾಜ್ ಚಿನ್ನ ಗೆದ್ದರು. 

ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್: ಸೈನಾ-ಸಿಂಧುವಿನತ್ತ ಎಲ್ಲರ ಚಿತ್ತ

ಸೋಮವಾರದ ಸ್ಪರ್ಧೆಯಲ್ಲಿ ಭಾರತ ಒಟ್ಟು 8 ಪದಕ ಜಯಿಸಿತು. ಈ ಕೂಟದಲ್ಲಿ ಭಾರತದ ಶೂಟರ್’ಗಳು 6 ಟೋಕಿಯೋ ಒಲಿಂಪಿಕ್ಸ್ ಕೋಟಾ ಪಡೆದಿದ್ದಾರೆ.