Asianet Suvarna News Asianet Suvarna News

YouTube Premium, YouTube Music Premium ವಾರ್ಷಿಕ ಯೋಜನೆ ಬಿಡುಗಡೆ!

ಯೂಟ್ಯೂಬ್ ಪ್ರೀಮಿಯಂ ಮತ್ತು ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ ಎರಡೂ ವಾರ್ಷಿಕ ಯೋಜನೆಗಳು ಪ್ರಸ್ತುತ ಭಾರತ ಮತ್ತು ಯುಎಸ್ ಸೇರಿದಂತೆ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿವೆ

YouTube Premium Music Annual Plans Launched in India discounted prices until January 23 mnj
Author
Bengaluru, First Published Jan 19, 2022, 4:07 PM IST

Tech Desk: 12-ತಿಂಗಳ ಸಂಪೂರ್ಣ ಚಂದಾದಾರಿಕೆ ಪಡೆಯಲು ಬಳಕೆದಾರರಿಗೆ YouTube Premium ಮತ್ತು YouTube Music Premium ವಾರ್ಷಿಕ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಯೂಟ್ಯೂಬ್ ತನ್ನ  Paid subscription ಮಾದರಿಗಳನ್ನು ಮಾಸಿಕ ಮತ್ತು ತ್ರೈಮಾಸಿಕ ಆಧಾರದ ಮೇಲೆ ಬಿಡುಗಡೆ ಮಾಡಿದ ಹಲವು ವರ್ಷಗಳ ನಂತರ ಈಗ  ಈ ಹೊಸ ಪ್ಲ್ಯಾನ್‌ ಸೇರ್ಪಡೆ ಮಾಡಿದೆ. ಯೂಟ್ಯೂಬ್ ಪ್ರೀಮಿಯಂ ಮತ್ತು ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ ಎರಡೂ ವಾರ್ಷಿಕ ಯೋಜನೆಗಳು ಪ್ರಸ್ತುತ ಭಾರತ ಮತ್ತು ಯುಎಸ್ ಸೇರಿದಂತೆ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿವೆ. ಪರಿಚಯಾತ್ಮಕ ಕೊಡುಗೆಯಾಗಿ, ಯೂಟ್ಯೂಬ್ ಆರಂಭದಲ್ಲಿ ವಾರ್ಷಿಕ ಯೋಜನೆಗಳೊಂದಿಗೆ ರಿಯಾಯಿತಿಗಳನ್ನು ನೀಡುತ್ತಿದೆ. ಬಳಕೆದಾರರು ತಮ್ಮ ಆ್ಯಡ್ರಾಯ್ಡ್ ಸಾಧನಗಳಿಂದ ಅಥವಾ ವೆಬ್ ಮೂಲಕ ವಾರ್ಷಿಕ ಯೋಜನೆಗಳಿಗೆ ಚಂದಾದಾರರಾಗಬಹುದು.‌

ಆರಂಭದಲ್ಲಿ 9to5Google ವರದಿ ಮಾಡಿದಂತೆ, YouTube Premium ಮತ್ತು YouTube Music Premium ವೈಯಕ್ತಿಕ ಬಳಕೆದಾರರಿಗೆ ವಾರ್ಷಿಕ ಯೋಜನೆಗಳೊಂದಿಗೆ ಈಗ ಲಭ್ಯವಿದೆ. ಇದರರ್ಥ ವಿದ್ಯಾರ್ಥಿಗಳು ಮತ್ತು ಕುಟುಂಬ ಸದಸ್ಯರೊಂದಿಗೆ ಬಳಕೆದಾರರು ತಮ್ಮ ಖಾತೆಗಳಿಗೆ ವಾರ್ಷಿಕ ಯೋಜನೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: Baby Shark Dance 10 ಬಿಲಿಯನ್ ವೀಕ್ಷಣೆ ಪಡೆದ ಮೊದಲ ಯೂಟ್ಯೂಬ್ ವೀಡಿಯೊ!

Promotional Offer: ಯೂಟ್ಯೂಬ್ ಈ ಹೊಸ ಪ್ಲ್ಯಾನ್‌ಗಳಲ್ಲಿ ಪ್ರಚಾರದ ಕೊಡುಗೆಯನ್ನು ನೀಡುತ್ತಿದ್ದು ಗ್ರಾಹಕರಿಗೆ ವಾರ್ಷಿಕ ಯೋಜನೆಗಳಲ್ಲಿ ಜನವರಿ 23 ರವರೆಗೆ ರಿಯಾಯಿತಿಗಳನ್ನು ನೀಡಲಾಗುತ್ತದೆ. ಈ ಕೊಡುಗೆಯು ಯೂಟ್ಯೂಬ್ ಪ್ರೀಮಿಯಂಗಾಗಿ ವಾರ್ಷಿಕ ಯೋಜನೆಯನ್ನು ರೂ. 1,159 (ಯುಎಸ್‌ನಲ್ಲಿ $107.99) ಹಾಗೂ ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂನ ವಾರ್ಷಿಕ ಯೋಜನೆಯು ರೂ. 889 (US ನಲ್ಲಿ $89.99) ರಿಯಾಯಿತಿ ದರದಲ್ಲಿ ಲಭ್ಯವಿದೆ.

ಪ್ರಚಾರದ ಆಫರ್ ಮುಗಿದ ನಂತರ ಭಾರತದಲ್ಲಿ ಬಳಕೆದಾರರು ಎಷ್ಟು ಪಾವತಿಸಬೇಕಾಗುತ್ತದೆ ಎಂಬ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಆದಾಗ್ಯೂ,  ಪ್ರಚಾರದ ಕೊಡುಗೆಯು ಒಮ್ಮೆ ಕೊನೆಗೊಂಡಾಗ ಯೂಟ್ಯೂಬ್ ಪ್ರೀಮಿಯಂನ ವಾರ್ಷಿಕ ಯೋಜನೆಯು ಸಾಮಾನ್ಯವಾಗಿ $119.99ಗೆ ಹಾಗೂ  ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ ಅನ್ನು $99.99 ಕ್ಕೆ ನೀಡಲಾಗುತ್ತದೆ ಎಂದು 9to5Google ಉಲ್ಲೇಖಿಸಿದೆ. 

YouTube Premium Music Annual Plans Launched in India discounted prices until January 23 mnj

ಸೀಮಿತ ದೇಶಗಳಲ್ಲಿ ಲಭ್ಯ: ಸಾಮಾನ್ಯವಾಗಿ, YouTube Premium ತಿಂಗಳಿಗೆ ರೂ.129ನಲ್ಲಿ ಲಭ್ಯವಿದೆ (US ನಲ್ಲಿ $11.99) ಮತ್ತು YouTube Music Premium ತಿಂಗಳಿಗೆ ರೂ. 99 (US ನಲ್ಲಿ $9.99)  ಲಭ್ಯವಿದೆ. ವಾರ್ಷಿಕ ಯೋಜನೆಗಳು ಪ್ರಸ್ತುತ ಭಾರತ, ಬ್ರೆಜಿಲ್, ಕೆನಡಾ, ಜರ್ಮನಿ, ಜಪಾನ್, ರಷ್ಯಾ, ಥೈಲ್ಯಾಂಡ್, ಟರ್ಕಿ ಮತ್ತು US ನಲ್ಲಿ ಲಭ್ಯವಿದೆ ಎಂದು YouTube Support ಪುಟದಲ್ಲಿ ತಿಳಿಸಲಾಗಿದೆ. 

ಹೊಸ ಚಂದಾದಾರರ ಜೊತೆಗೆ, ಈಗ YouTube Premium ಮತ್ತು YouTube Music Premium ಚಂದಾದಾರಿಕೆಯಲ್ಲಿರುವ ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ಸದಸ್ಯತ್ವವನ್ನು ರದ್ದುಗೊಳಿಸಿ ಮತ್ತು ಹೊಸದಾಗಿ ಸೈನ್ ಅಪ್ ಮಾಡಿದ ನಂತರ ವಾರ್ಷಿಕ ಯೋಜನೆಗಳ ಲಾಭ ಪಡೆದುಕೊಳ್ಳಬಹುದು. ಹೆಚ್ಚುವರಿಯಾಗಿ, ಒಂದು ತಿಂಗಳು ಅಥವಾ ಮೂರು ತಿಂಗಳ ಪ್ರಿಪೇಯ್ಡ್ ಯೋಜನೆಯಲ್ಲಿರುವ ಭಾರತದಲ್ಲಿನ ಚಂದಾದಾರರು ತಮ್ಮ ಪ್ರಿಪೇಯ್ಡ್ ಪ್ಲಾನ್ ಅವಧಿ ಮುಗಿದ ನಂತರ ವಾರ್ಷಿಕ ಯೋಜನೆಗಳಿಗೆ ವರ್ಗಾಯಿಸಲ್ಪಡುತ್ತಾರೆ.

ಇದನ್ನೂ ಓದಿ: Fake News, Anti-India Propaganda : 2 ವೆಬ್ ಸೈಟ್, 20 ಯೂಟ್ಯೂಬ್ ಚಾನೆಲ್ ಬ್ಯಾನ್!

iOS ಸಾಧನಗಳಿಗೆ in-app ಆಯ್ಕೆ ಇಲ್ಲ:  Android ಮತ್ತು ವೆಬ್‌ನಲ್ಲಿರುವ ಬಳಕೆದಾರರು YouTube Premium ವಾರ್ಷಿಕ ಯೋಜನೆಗೆ ಸೈನ್ ಅಪ್ ಮಾಡಬಹುದು. ಆದಾಗ್ಯೂ, ಐಒಎಸ್ ಸಾಧನಗಳಿಗೆ in-app sign-up ಆಯ್ಕೆಯನ್ನು YouTube ಇನ್ನೂ ಒದಗಿಸಿಲ್ಲ. ಹಾಗಾಗಿ ವಾರ್ಷಿಕ ಚಂದಾದಾರಿಕೆಯನ್ನು ಖರೀದಿಸಲು ಬಯಸುವ iPhone ಮತ್ತು iPad ಬಳಕೆದಾರರು ತಮ್ಮ ಖರೀದಿಯನ್ನು ಕಂಪ್ಯೂಟರ್ ಅಥವಾ ಮೊಬೈಲ್ ವೆಬ್ ಬ್ರೌಸರ್‌ನಲ್ಲಿ ಮಾಡಬೇಕಾಗುತ್ತದೆ.

ವಾರ್ಷಿಕ ಯೋಜನೆಗಳನ್ನು ಆಯ್ಕೆ ಮಾಡುವ ಬಳಕೆದಾರರಿಗೆ YouTube ಮುಖ್ಯವಾಗಿ ಭಾಗಶಃ ಮರುಪಾವತಿ (Refund) ಬೆಂಬಲವನ್ನು ಒದಗಿಸಿಲ್ಲ. ಯೋಜನೆಗಳ ಪಾವತಿಯು ಪ್ರಿಪೇಯ್ಡ್ ಆಧಾರವಾಗಿದ್ದು  ಪುನರಾವರ್ತಿತವಲ್ಲದ ಪೇಮೆಂಟ್‌ ( non-recurring) ಆಗಿವೆ.  ಹಾಗಾಗಿ ವಾರ್ಷಿಕ ಯೋಜನೆ ಅವಧಿ ಮುಗಿದ ನಂತರ ನೀವು ಚಂದಾದಾರಿಕೆಯನ್ನು ಮತ್ತೆ ಖರೀದಿಸಬೇಕಾಗುತ್ತದೆ. 

Follow Us:
Download App:
  • android
  • ios