ನಿಮ್ಮ ಸಂಗೀತ ಕೇಳುವ ಅಭ್ಯಾಸ ನಿಮ್ಮನ್ನು ಕಿವುಡರನ್ನಾಗಿಸಬಹುದು ಈ ಬಗ್ಗೆ ಎಚ್ಚರ ವಹಿಸಿ.  12 ರಿಂದ 35 ವರ್ಷ ಒಳಗಿನವರು ನೀವಾಗಿದ್ದಲ್ಲಿ ನಿಮಗೆ ಈ ಸಮಸ್ಯೆ ಇನ್ನೂ  ಹೆಚ್ಚಿನದ್ದಾಗಿರುತ್ತದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೇ ಎಚ್ಚರಿಕೆಯನ್ನು ನೀಡಿದೆ. 

ಬೆಂಗಳೂರು : ನಿಮ್ಮ ಸಂಗೀತ ಕೇಳುವ ಅಭ್ಯಾಸ ನಿಮ್ಮನ್ನು ಕಿವುಡರನ್ನಾಗಿಸಬಹುದು ಈ ಬಗ್ಗೆ ಎಚ್ಚರ ವಹಿಸಿ. 12 ರಿಂದ 35 ವರ್ಷ ಒಳಗಿನವರು ನೀವಾಗಿದ್ದಲ್ಲಿ ನಿಮಗೆ ಈ ಸಮಸ್ಯೆ ಇನ್ನೂ ಹೆಚ್ಚಿನದ್ದಾಗಿರುತ್ತದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೇ ಎಚ್ಚರಿಕೆಯನ್ನು ನೀಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುರಕ್ಷಿತವಲ್ಲದ ಇಯರ್ ಫೋನ್’ಗಳಿಂದ ಇಂತಹ ಸಮಸ್ಯೆಗಳು ತಲೆ ದೋರುತ್ತದೆ. ಈಗಾಗಲೇ 1.1 ಮಿಲಿಯನ್ ಟೀನೇಜರ್ಸ್’ಗಳು ಕಿವುಡು ತನದಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಇನ್ನೂ ಹೆಚ್ಚಾಗುತ್ತಿವೆ. ಅದಕ್ಕೆ ಕಾರಣವೆಂದರೆ ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಫೋನ್’ಗಳನ್ನು ಬಳಕೆ ಮಾಡುತ್ತಿರುವುದೇ ಆಗಿದೆ.

ಆದ್ದರಿಂದ ಕಳಪೆ ಗುಣಮಟ್ಟದ ಇಯರ್ ಫೋನ್’ಗಳನ್ನು ಬಳಸದೇ ಉತ್ತಮ ಗುಣಮಟ್ಟದವನ್ನು ಬಳಸಿ ನಿಮ್ಮ ಕಿವಿಗಳನ್ನು ಕಾಪಾಡಿಕೊಳ್ಳಿ,