ನೂತನ ಯಮಹಾ R15 ವರ್ಶನ್ 3.0 ಹೇಗಿದೆ ಗೊತ್ತಾ?

technology | Saturday, June 2nd, 2018
Suvarna Web Desk
Highlights

ಹೊಸ ವಿನ್ಯಾಸ, ಶಕ್ತಿಯುತ ಇಂಜಿನ, ಮತ್ತಷ್ಟು ಪವರ್‌, ಇದು ನೂತನ R15 ವರ್ಶನ್ 3.0 ಬೈಕ್‌ನ ವಿಶೇಷತೆ. ಈ ಹೊಸ ಬೈಕ್ ಮತ್ತೆ ಭಾರತೀಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ಸಜ್ಜಾಗಿದೆ.

ಬೆಂಗಳೂರು(ಜೂನ್.2): ಭಾರತದ ಬೈಕ್ ಮಾರುಕಟ್ಟೆಯಲ್ಲಿ ಯಮಹಾ ಬೈಕ್‌ಗೆ ವಿಶೇಷ ಸ್ಥಾನವಿದೆ. 2008ರಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ಯಮಹ R15 ಬೈಕ್ ಯುವಕರಲ್ಲಿ ಸಾಕಷ್ಟು ಕ್ರೇಝ್ ಹುಟ್ಟುಹಾಕಿತ್ತು. ಇದೇ R15 ಬೈಕ್ ಇದೀಗ ಹೊಚ್ಚ ಹೊಸ ವಿನ್ಯಾಸದಲ್ಲಿ ಲಭ್ಯವಿದೆ. R15 ವರ್ಶನ್ 3.0 ನೂತನ ಬೈಕ್ ಮತ್ತೊಮ್ಮೆ ಬೈಕ್ ಪ್ರೀಯರ ಮನಗೆಲ್ಲೋದರಲ್ಲಿ ಅನುಮಾನವಿಲ್ಲ.

ನೂತನ್ R15 ವರ್ಶನ್ 3.0 ಯಶಸ್ವಿಯಾಗಲು ಮುಖ್ಯಕಾರಣ ಬೈಕ್‌ ಸ್ಟೈಲ್. ಎರಡ್ ಹೆಡ್‌ಲೈಡ್ ಹಾಗು ಸುತ್ತ ಎಲ್ಇಡಿ ಲೈಟಿಂಗ್ ನೂತನ ಬೈಕ್‌ನ ಆಕರ್ಷಣೆಯಾಗಿದೆ. ಹೈಡ್‌ಲೈಟ್‌ನಲ್ಲಿ ಹೆಲೋಜಿನ್ ಲೈಟ್ ಬಳಸಾಗಿದೆ. 13 ಲೀಟರ್ ಪ್ರೆಟ್ರೋಲ್ ಟ್ಯಾಂಕ್ ಮತ್ತೊಂದು ವಿಶೇಷತೆ. ವರ್ಶನ್ 2.0 ಹಾಗು ವರ್ಶನ್ 3.0 ಬೈಕ್‌ಗಳ ಸೀಟುಗಳಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಸವಾರ ಹಾಗೂ ಹಿಂಬದಿ ಸವಾರರ ಸೀಟುಗಳನ್ನ ವಿಭಜಿಸಲಾಗಿದೆ.


ಆಕರ್ಷಣೀಯ ಆಲೋಯ್ ವೀಲ್ಸ್‌ಗಳು ನೂತನ R15 ವರ್ಶನ್ 3.0 ಅಂದವನ್ನ ಹೆಚ್ಚಿಸಿದೆ. ಧಂಡರ್ ಗ್ರೇ ಹಾಗೂ ರೇಸಿಂಗ್ ಬ್ಲೂ ಕಲರ್‌ಗಳಲ್ಲಿ ನೂತನ ಬೈಕ್ ಲಭ್ಯವಿದೆ. ಹೊಸ ವಿನ್ಯಾಸದಲ್ಲಿನ ಗ್ರಾಫಿಕ್ಸ್ R15 ವರ್ಶನ್ 3.0 ಬೈಕ್‌ಗೆ ಸ್ಪೋರ್ಟ್ಸ್ ಲುಕ್ ನೀಡಿದೆ. ವಿಶೇಷ ಅಂದರೆ ಇದರಲ್ಲಿ ನಿಮಗೆ ರೇಸ್ ಕಿಟ್ ಕೂಡ ಲಭ್ಯಲಿದೆ. ರೇಸ್ ಕಿಟ್‌ನಲ್ಲಿ ಫೂಟ್ ಪೆಗ್ಸ್, ಟ್ಯಾಂಕ್ ಪ್ಯಾಡ್ ಸೇರಿದಂತೆ ಇನ್ನಿತರ ಬಿಡಿ ಭಾಗಗಳು ಲಭ್ಯವಿದೆ.

155 ಸಿಸಿ ಇಂಜಿನ್ ಹೊಂದಿರುವ ನೂತನ ಬೈಕ್ ಹೆಚ್ಚು ಬಲಿಷ್ಠ ಹಾಗೂ ಶಕ್ತಿಯುತವಾಗಿದೆ. ಸಿಂಗಲ್ ಸಿಲಿಂಡರ್ ಹಾಗೂ ಲಿಕ್ವಿಡ್ ಕೂಲ್‌ಡ್ ಮೋಟರ್ ಪಂಪ್ ಅಳವಡಿಸಲಾಗಿದೆ. ಹೀಗಾಗಿ 19.3ಪಿಎಸ್ ನಿಂದ 10,000 ಆರ್‌ಪಿಎಮ್ ನಷ್ಟು ಬಲಿಷ್ಟವಾಗಿದೆ. 6 ಸ್ವೀಡ್ ಗೇರ್‌ಗಳನ್ನ ಹೊಂದಿರುವ R15 ವರ್ಶನ್ 3.0 ಗ್ರೌಂಡ್ ಕ್ಲೀಯರೆನ್ಸ್ 180ಎಮ್ಎಮ್. ಇನ್ನು ಇದರ ಬೆಲೆ 1.25 ಲಕ್ಷ ರೂಪಾಯಿ. 

 

Comments 0
Add Comment

    Related Posts