ಆಗಸ್ಟ್‌ನಲ್ಲಿ ಯಮಹ ಆರ್15 ವಿ3.0 ಮೋಟೋ ಜಿಪಿ ಲಾಂಚ್

Yamaha R15 V3.0 MotoGP edition launch in August
Highlights

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಯಮಹ ಆರ್15 ವಿ3.0 ಮೋಟೋ ಜಿಪಿ, ಬೈಕ್ ಪ್ರೀಯರನ್ನ ಸೆಳೆಯಲು ಸಜ್ಜಾಗಿದೆ. ಆಗಸ್ಟ್‌ನಲ್ಲಿ ಬಿಡುಗಡೆಯಾಗುತ್ತಿರುವ ಯಮಹ ಆರ್15 ವಿ3.0 ಮೋಟೋ ಜಿಪಿ ವಿಶೇಷತೆ ಏನು? ಇಲ್ಲಿದೆ ವಿವರ
 

ಬೆಂಗಳೂರು(ಜೂ.22): ಭಾರತದ ಬೈಕ್ ಮಾರುಕಟ್ಟೆಯಲ್ಲಿ ಜನಪ್ರೀಯವಾಗಿರೋ ಯಮಹ ಇದೀಗ ಸ್ಪೆಷಲ್ ಎಡಿಷನ್ ಆರ್15 ವಿ3.0 ಮೋಟೋ ಜಿಪಿ ಬಿಡುಗಡೆಗೆ ಸಜ್ಜಾಗಿದೆ. ಇದೇ ಆಗಸ್ಟ್‌ನಲ್ಲಿ ಯಮಹ ಆರ್ 12 ವಿ.30 ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.

ಸ್ಪೆಷಲ್ ಎಡಿಶನ್ ಬೈಕ್ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಥಂಡರ್ ಗ್ರೇ ಹಾಗೂ ರೇಸಿಂಗ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ವಿನ್ಯಾಸದಲ್ಲಿ ಹೆಚ್ಚು ಸ್ಪೋರ್ಟೀವ್ ಲುಕ್ ನೀಡಲಾಗಿದೆ. ಆರ್ 15 ವಿ.30 ಮೋಟೋ ಜಿಪಿಯಲ್ಲಿ ಟೆಲಿಸ್ಕೋಪ್ ಫೋರ್ಕ್ ಅಳವಡಿಸಲಾಗಿದೆ.   

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಈ ನೂತನ ಬೈಕ್ ಬೆಲೆ 1.26 ಲಕ್ಷ ರೂಪಾಯಿ(ಎಕ್ಸ್ ಶೋರೂಮ್) ಹೆಚ್ಚು ಶಕ್ತಿಶಾಲಿ ಇಂಜಿನ್ ನೂತನ ಬೈಕ್‌ನ ವಿಶೇಷತೆ. ಶೀಘ್ರದಲ್ಲೇ ಯಮಹಾ ಎಬಿಎಸ್ ಹಾಗೂ ಸಿಬಿಎಸ್ ಅಳವಡಿಸಲು ಚಿಂತನೆ ನಡೆಸಿದೆ. ಈ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಅಗ್ರಗಣ್ಯ ಸ್ಥಾನಕ್ಕಾಗಿ ಹೋರಾಟ ತೀವ್ರಗೊಳಿಸಿದೆ.

loader