Redmi Note 7 ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿದ್ದು ಮೊಬೈಲ್ ಪ್ರಿಯರಲ್ಲಿ ಸಂಚಲನ ಮೂಡಿಸಿದೆ. ಸಹಜವಾಗಿ, ಭಾರತದಲ್ಲೂ, ಈ ಫೋನ್ ಗಾಗಿ ಬಹಳಷ್ಟು ಮಂದಿ ಎದುರು ನೋಡುತ್ತಿದ್ದಾರೆ.
ಕೈಗೆಟಕುವ ಸ್ಮಾರ್ಟ್‌ಫೋನ್‌ಗಳಿಗೆ ಮನೆಮಾತಾಗಿರುವ Xiaomi ಕಳೆದ ವಾರ ಚೀನಾದಲ್ಲಿ Redmi Note 7 ಫೋನನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ. ಈ ಬಗ್ಗೆ ಸುವರ್ಣನ್ಯೂಸ್ ವರದಿ ಮಾಡಿತ್ತು.
ಭಾರತದಲ್ಲಿ ಬಿಡುಗಡೆ ಯಾವಾಗ ಎಂಬ ಬಗ್ಗೆ ಮೊಬೈಲ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, Redmi Note 7 ಫೋನ್ ಫೆಬ್ರವರಿ ತಿಂಗಳಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆಯಿಡಲಿದೆ!
ಹೊಸ ಮಾದರಿ ಫೋನ್ ಹಾಗೂ ಹೊಸ ಫೀಚರ್‌ಗಳನ್ನು ಒದಗಿಸುವ Xiaomi, Redmi Note 7ನಲ್ಲೂ ಅತ್ಯಾಧುನಿಕ ಫೀಚರ್‌ಗಳನ್ನು ನೀಡಿದೆ. 48 ಮೆಗಾಪಿಕ್ಸೆಲ್ ಕ್ಯಾಮೆರಾ Redmi Note 7ನ ಪ್ರಮುಖ ಆಕರ್ಷಣೆ. ಹಿಂಬದಿ ಇನ್ನೊಂದು ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಇದ್ದು, ಮುಂದಿನ ಕ್ಯಾಮೆರ 13 ಮೆಗಾಪಿಕ್ಸೆಲ್ ಸಾಮರ್ಥ್ಯದ್ದಾಗಿದೆ.
ಇನ್ಯಾಕೆ ಚಿಂತೆ? ವಾಟ್ಸಪ್‌ನಿಂದ ಹೊಸ ವರ್ಷಕ್ಕೆ ಬರ್ತಿದೆ ಹೊಸ ಫೀಚರ್!
6.3 ಇಂಚು ಪರದೆ, 19.5:9 ಆ್ಯಸ್ಪೆಕ್ಟ್ ರೇಶ್ಯೋ, ಕ್ವಾಲ್‌ಕಾಮ್ ಸ್ನ್ಯಾಪ್ ಡ್ರಾಗನ್ 660 ಪ್ರೊಸೆಸರ್, 3GB, 4GB, 6GB RAM ಹೊಂದಿದೆ. 32GB ಹಾಗೂ 64GB ಸ್ಟೋರೆಜ್ ಸಾಮರ್ಥ್ಯವಿರುವ Redmi Note 7ನ್ನು 256GB ವರೆಗೆ ವಿಸ್ತರಿಸಬಹುದು.
Samsungನಿಂದ ಅಗ್ಗದ ಗ್ಯಾಲಕ್ಸಿ ಫೋನ್‌ಗಳು! ನೀವು ಬೆಲೆ ನಂಬೋದೆ ಕಷ್ಟ!
ಚೀನಾದಲ್ಲಿ Redmi Note 7 ಬೆಲೆ 999 ಯಾನ್, ಅಂದರೆ ಭಾರತದ ಸರಿಸುಮಾರು 10,500 ರೂ. ಆಗಿದ್ದು ಮೊಬೈಲ್ ಪ್ರಿಯರಲ್ಲಿ ಸಂಚಲನ ಮೂಡಿಸಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 22, 2019, 7:59 PM IST