Oneplusಗೆ ಸಡ್ಡು ಹೊಡೆಯಲು Redmi ರೆಡಿ!
Oneplus ತನ್ನ 2 ಹೊಸ ನಮೂನೆಯ ಫೋನ್ ಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ Redmiಯು ಪೈಪೋಟಿಗಿಳಿದಿದೆ. Redmi ಹೊಸ ಫೋನ್ ಬಗ್ಗೆ ಸುಳಿವನ್ನು ಕೊಟ್ಟಿರುವುದು ಹೀಗೆ...
Oneplus 7 Pro ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 855 ಮೊಬೈಲ್ ಫ್ಲಾಟ್‌ಫಾರ್ಮ್ ಮತ್ತು 256GB ಸ್ಟೋರೇಜ್‌ನ ಫ್ಲಾಗ್‌ಶಿಪ್ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಂತೆ, ಅದಕ್ಕೆ ಸಡ್ಡು ಹೊಡೆಯಲು Redmi ಸಜ್ಜಾಗಿದೆ. ಅಷ್ಟೇ ಅಲ್ಲ, ಅದನ್ನು ಉತ್ತರ ರೂಪದಲ್ಲಿ ಹೇಳಿಕೊಂಡಿದೆ.
ಅಭಿನಂದನೆ Oneplus, ನಿಮ್ಮ ಹೊಸ ಫ್ಲಾಗ್‌ಶಿಪ್ ಬಗ್ಗೆ ಕೇಳಿದೆವು. ಫ್ಲಾಗ್‌ಶಿಪ್ ಕಿಲ್ಲರ್ 2.0 ಸದ್ಯದಲ್ಲೇ ಬರಲಿದೆ ಎಂದು ಅದು ಉತ್ತರಿಸುವ ಮೂಲಕ Redmi K20 ಫೋನ್ ಭಾರತಕ್ಕೆ ಬರಲಿದೆ ಎಂಬ ಸೂಚನೆಯನ್ನೂ ಅದು ನೀಡಿದೆ.
ಇದನ್ನೂ ಓದಿ | ಅಗ್ಗದ Redmi Note 7 ಫೋನ್ ಬಿಡುಗಡೆ; ಇಲ್ಲಿದೆ ವಿಶೇಷತೆ & ಬೆಲೆ |
ತನ್ನ ಟ್ರೋಲ್‌ನಲ್ಲಿ Redmi K ಮತ್ತು 2.0 ಅಕ್ಷರಗಳನ್ನು ಕೆಂಪಕ್ಷರದಲ್ಲಿ ಮುದ್ರಿಸುವ ಮೂಲಕ K20 ಫೋನ್ ಆಗಮನವನ್ನು ಹೇಳಿಕೊಂಡಿದೆ.
ಇತ್ತೀಚೆಗೆ Xiaomiಯು Redmi Y3 ಮೊಬೈಲನ್ನು ಬಿಡುಗಡೆ ಮಾಡಿತ್ತು. ಈ ಫೋನಿನ 3GB ವೇರಿಯಂಟ್ ಫೋನಿನ ಬೆಲೆ ₹9999 ಹಾಗೂ 4GB ವೇರಿಯಂಟ್ ಫೋನಿನ ಬೆಲೆ ₹11999 ಆಗಿದೆ. ಕೆಂಪು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್, ಮೊದಲ ಅಮೇಜಾನ್ ಮಾರಾಟದಲ್ಲಿ ಬರೇ 12 ಸೆಕೆಂಡ್‌ಗಳಲ್ಲಿ ಸಂಪೂರ್ಣ ಸ್ಟಾಕ್ ಸೋಲ್ಡ್ ಔಟ್ ಆಗಿ ಸುದ್ದಿ ಮಾಡಿತ್ತು.
(ಸಾಂದರ್ಭಿಕ ಚಿತ್ರ)