ವಿಶ್ವದ ಅತಿದೊಡ್ಡ ಎರಡನೇ ಡೇಟಾ ಸೆಂಟರ್ ಮುಂಬೈನಲ್ಲಿ ಲೋಕಾಪರ್ಣೆ/ ಭಾರತಕ್ಕೆ ಮತ್ತೊಂದು ಗರಿ/ ಸಂತಸ ಹಂಚಿಕೊಂಡ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್

ಮುಂಬೈ(ಜು. 08) ವಿಶ್ವದ ಅತಿದೊಡ್ಡ ಎರಡನೇ ಡೇಟಾ ಸೆಂಟರ್ ಮುಂಬೈನಲ್ಲಿ ಲೋಕಾಪರ್ಣೆಯಾಗಿದೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೆಚ್ಚಿನ ವಿವರಗಳನ್ನು ನೀಡಿದ್ದಾರೆ.

ಹಿರಾನಂದಾನಿ ಗ್ರೂಪ್ ನಿಂದ ವಿಶ್ವದರ್ಜೆಯ ಗುಣಮಟ್ಟದ ಡೇಟಾ ಸೆಂಟರ್ ಮುಂಬೈನಲ್ಲಿ ಉದ್ಘಾಟನೆಯಾಗಿರುವ ಸಂಗತಿ ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ.

ಭಾರತೀಯರ ಡೇಟಾ ಕದಿಯುತ್ತಿದ್ದ ಚೀನಿ ಆಪ್ ಗಳು ಯಾವವು?

ನಮ್ಮ ಸರ್ಕಾರ ಡೇಟಾ ಸೆಂಟರ್ ಗಳ ವಿಚಾರದಲ್ಲಿ ಹೊಸ ಹೊಸ ಹೂಡಿಕೆಗಳನ್ನು ಕರೆದು ತರುತ್ತಿದೆ. ಭಾರತ ಡೇಟಾ ವಿಚಾರದಲ್ಲಿ ಸಾರ್ವಭಮತ್ವ ಸಾಧಿಸಲಿದೆ ಎಂದು ತಿಳಿಸಿದ್ದಾರೆ.

ಮಾಹಿತಿ ಸಂಗ್ರಹಣೆ, ವಾಣಿಜ್ಯ ವ್ಯಹಾರ, ಭದ್ರತೆ, ಅಭಿವೃದ್ಧಿ ಸೇರಿದಂತೆ ಅನೇಕ ವಿಚಾರಗಳಲ್ಲಿ ಡೇಟಾ ಸೆಂಟರ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸ್ಟೋರೇಜ್ ದಷ್ಟಿಯಿಂದ ಹೇಳುವುದಾದರೆ ಇದೊಂದು ದೊಡ್ಡ ಲೈಬ್ರರಿ ತರಹ ಕೆಲಸ ಮಾಡುತ್ತದೆ. 

Scroll to load tweet…